ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬುಧವಾರ ಬೆಳಗ್ಗೆ ಹಿಪ್ಪರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿ ಅವಲೋಕಿಸಿ ನಂತರ ಮಾತನಾಡಿದ ಅವರು, ಕಳೆದ 2024 ಅಕ್ಟೋಬರ್ ತಿಂಗಳಲ್ಲೇ ಇದೇ ರೀತಿ ಅವಘಡ ಸಂಭವಿಸಿತ್ತು. ಆಗಲೇ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಒತ್ತಾಯಪಡಿಸಿ 15 ವರ್ಷಗಳಿಗೊಮ್ಮೆ ಹೊಸ ಗೇಟ್‌ಗಳನ್ನು ಅಳವಡಿಕೆ ಮಾಡುವುದನ್ನು ಬಿಟ್ಟು ಕಳೆದ 25 ವರ್ಷಗಳಾದರೂ ಇನ್ನೂ ಹಳೆಯ ಗೇಟ್‌ಗಳನ್ನು ಮುಂದುವರೆಸಿರುವುದು ಅಲ್ಲದೇ ಆಗಿನ ಸಂದರ್ಭದ ಒತ್ತಾಯಕ್ಕೆ ಕಾಟಾಚಾರಕ್ಕೆ ದುರಸ್ತಿಯೊಂದಿಗೆ ಗೇಟ್‌ಗಳಿಗೆ ಬಣ್ಣ ಹಚ್ಚಿ ಸರ್ಕಾರ ಕೈ ತೊಳೆದುಕೊಂಡಿತು. ಇದೀಗ ೧೦ ಎಂಎಂ ಸಾಮರ್ಥ್ಯದ ಕಬ್ಬಿನ ಗೇಟ್ ಸವೆದು ೫ ಎಂಎಂ ಗಾತ್ರಕ್ಕಿಳಿದಿದೆ. ಹೀಗಿದ್ದಾಗ್ಯೂ ಸರ್ಕಾರದ ನಿರ್ಲಕ್ಷ್ಯ ಮತ್ತು ಉದ್ಧಟತನದ ನಡೆ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದರು.ಸದ್ಯ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದೆ. ಸುಮಾರು ೧೦ ಸಾವಿರ ಕ್ಯುಸೆಕ್‌ನಷ್ಟು ನೀರು ನಿತ್ಯ ಪೋಲಾಗುತ್ತಿದೆ. ಇದರಿಂದ ಕಾಮಗಾರಿಯು ಇದುವರೆಗೆ ಯಶಸ್ಸಾಗದೇ ಇದ್ದು, ಬುಧವಾರವೂ ಸಹಿತ ದುರಸ್ತಿ ಸಂಪೂರ್ಣ ಲಕ್ಷಣಗಳಿಲ್ಲ. ಗುರುವಾರದವರೆಗೆ ದುರಸ್ತಿಯಾಗದಿದ್ದರೆ ೨ ಟಿಎಂಸಿಗೂ ಹೆಚ್ಚಿನ ನೀರು ಪೋಲಾಗಲಿದೆ. ಇದೇ ರೀತಿ ಬ್ಯಾರೇಜ್‌ನ ನಿಯಮಿತ ದುರಸ್ತಿ ಇಲ್ಲದೇ ನಿರ್ಲಕ್ಷ್ಯವಾದಲ್ಲಿ ಮತ್ತೇ ಅವಘಡ ಸಂಭವಿಸಲಿದೆ. ದುರಸ್ತಿ ಕಾಮಗಾರಿಯಲ್ಲಿ ಅನುಭವಿ ತಜ್ಞರು ಕಾರ್ಯದಲ್ಲಿದ್ದರೂ ನೀರು ಹೊರಬಾರದಂತೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದರು.ಸಚಿವ-ಅಧಿಕಾರಿಗಳ ಸಭೆಯಿಲ್ಲ:ಇಷ್ಟೊಂದು ಪ್ರಮಾಣದಲ್ಲಿ ಸಮಸ್ಯೆಯಾಗಿದ್ದರೂ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ತ್ವರಿತ ಇತ್ಯರ್ಥ ಸಾಧಿಸಬಹುದಿತ್ತು. ಜಿಲ್ಲಾಧಿಕಾರಿಗಳೊಂದಿಗೆ ಬ್ಯಾರೇಜ್‌ಗೆ ಆಗಮಿಸಿದರೂ ನನಗೊಂದು ಮಾಹಿತಿಯನ್ನೂ ನೀಡದೆ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಬಾರದೆ ತಕ್ಷಣ ದುರಸ್ತಿಗೆ ಮಹತ್ವದ ನಿರ್ಧಾರದೊಂದಿಗೆ ಕಾರ್ಯ ನಡೆಸಲು ಸರ್ಕಾರ ವೈಫಲ್ಯವಾಗಿದೆ ಎಂದು ಶಾಸಕ ಸವದಿ ಆರೋಪಿಸಿದರು.ಹೊಸ ಗೇಟ್‌ಗಳ ಅಳವಡಿಕೆಯಲ್ಲಿ ಸರ್ಕಾರದ ಮೀನಮೇಷ ಸಹಿಸಲ್ಲ. ಬೇಸಿಗೆಯೊಳಗಾಗಿ ಗೇಟ್ ಅಳವಡಿಕೆಯಾಗದಿದ್ದಲ್ಲಿ, ಈ ಭಾಗದ ರೈತರೊಂದಿಗೆ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿಗಳು ಆಗಮಿಸಿ ಪರಿಸ್ಥಿತಿ ಕೈಮೀರುವ ಮುಂಚೆಯೇ ಕಾರ್ಯರೂಪಕ್ಕೆ ತರಬೇಕು. ತುಂಗಭದ್ರಾ ಜಲಾಶಯಕ್ಕೆ ತೋರಿದ ಕಾಳಜಿ ಕಾರ್ಯ ಕೃಷ್ಣೆಗೇಕಿಲ್ಲ ಎಂದು ಹರಿಹಾಯ್ದರು.ಈಗಾಗಲೇ 2 ಟಿಎಂಸಿಯಷ್ಟು ನೀರು ಖಾಲಿಯಾಗಿದ್ದು, ಮುಂದಿನ ದಿನಗಳಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ನೂರಾರು ಹಳ್ಳಿ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರಿನ ಭವಣೆ ಎದುರಾಗುವ ಲಕ್ಷಣಗಳಿವೆ. ಇವೆಲ್ಲದಕ್ಕೂ ಸರ್ಕಾರ ಈಗಿನಿಂದಲೇ ಪರ್ಯಾಯ ವ್ಯವಸ್ಥೆ ಮೂಲಕ ಬೇಸಿಗೆ ನೀಗಿಸಲು ₹೫೦ಕೋಟಿ ಅನುದಾನ ಒದಗಿಸಿ ತಾಲೂಕಿನ ಜನತೆಯ ಕುಡಿಯುವ ನೀರಿನ ಭವಣೆ ನೀಗಿಸುತ್ತ ಮುಂದಾಗಬೇಕೆಂದು ಆಗ್ರಹಿಸಿದರು.