ಫಾರಂ 5 ದೋಷ ಆಯೋಗ ಒಪ್ಪಿದ್ರೂ ಸಿಇಸಿ ಸಮರ್ಥನೆ ಏಕೆ?

KannadaprabhaNewsNetwork |  
Published : Oct 26, 2026, 01:30 AM IST
25ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

Why the CEC's defense, even though the Commission acknowledged the error in Form 5?

-ಬಿಜೆಪಿ ಸರ್ಕಾರ ಕಾರ್ಪೋರೇಟ್ ಶಕ್ತಿಗಳ ಪರ: ದೀಪ್ತಿಕನ್ನಡಪ್ರಭ ವಾರ್ತೆ ದಾವಣಗೆರೆ

ಎಸ್ಐಆರ್ ಪ್ರಕ್ರಿಯೆಯ ಫಾರಂ-6 ಕಾರ್ಯ ನಿರ್ವಹಣೆಯಲ್ಲಿ ದೋಷ ಇರುವುದನ್ನು ಚುನಾವಣಾ ಆಯೋಗವೇ ಒಪ್ಪಿಕೊಂಡರೂ ಬಿಜೆಪಿ ಸರ್ಕಾರ ಹಾಗೂ ಆ ಪಕ್ಷದ ವರಿಷ್ಠ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರರನ್ನು ಸಮರ್ಥಿಸಿಕೊಳ್ಳುತ್ತಿರುವುದು ಏಕೆ ಎಂದು ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸುವ ಬದಲು ಅವುಗಳನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದ್ದು, ಸಿಇಸಿ ಜ್ಞಾನೇಶಕುಮಾರ್‌ರಿಂದ ತಕ್ಷಣ ರಾಜೀನಾಮೆ ನೀಡಲಿ ಎಂದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವು ಸಾಮಾನ್ಯ ಜನರು, ಹಿಂದುಳಿದ ವರ್ಗಗಳು ಹಾಗೂ ಯುವ ಜನರ ಹಿತಾಸಕ್ತಿಗಳಿಗಿಂತ ಕೆಲವೇ ಕಾರ್ಪೋರೇಟ್ ಶಕ್ತಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದೊಂದು ದಶಕದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯಲು ಹಾಗೂ ಚುನಾವಣಾ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಲು ವಿವಿಧ ವಿಪಕ್ಷಗಳು ಮತ್ತು ಯುವ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸುತ್ತಿವೆ. ಕಾಂಗ್ರೆಸ್ ಸೇರಿದಂತೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿರುವ ಪಕ್ಷಗಳು, ಸಂಘಟನೆಗಳು ಇಂತಹ ಹೋರಾಟದಲ್ಲಿ ಭಾಗಿಯಾಗುತ್ತಿವೆ ಎಂದು ಅವರು ಹೇಳಿದರು.

ಸಿಜೆಪಿ, ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌, ಡಿವೈಎಫ್‌ಐ ಸೇರಿದಂತೆ ವಿವಿಧ ಯುವಜನ ಮತ್ತು ರಾಜಕೀಯ ಸಂಘಟನೆಗಳು ಮತದಾನದ ಹಕ್ಕುಗಳ ರಕ್ಷಣೆಗಾಗಿ ಕೈಜೋಡಿಸಿವೆ. ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಉಳಿಸುವುದು ಹೋರಾಟದ ಮುಖ್ಯ ಉದ್ದೇಶ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು, ಸಾರ್ವಜನಿಕರ ಮತದಾನದ ಹಕ್ಕುಗಳನ್ನು ರಕ್ಷಿಸಲು ಎಐಸಿಸಿಸಿಯಿಂದ ಜಾಗೃತಿ ಅಭಿಯಾನವನ್ನು ಜಿಲ್ಲಾ, ಬ್ಲಾಕ್‌ ಹಾಗೂ ವಾರ್ಡ್ ಮಟ್ಟಕ್ಕೆ ವಿಸ್ತರಿಸುತ್ತಿದೆ ಎಂದು ತಿಳಿಸಿದರು.

ಪಕ್ಷದ ವೀಕ್ಷಕ ಮೋಹನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ, ಕೆಪಿಸಿಸಿ ವಕ್ತಾರರಾದ ಡಿ.ಬಸವರಾಜ, ದಿನೇಶ ಕೆ.ಶೆಟ್ಟಿ, ಎಚ್.ಬಿ.ಮಂಜಪ್ಪ, ತುರ್ಚಘಟ್ಟ ಎಸ್.ಬಸವರಾಜಪ್ಪ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಜಿ.ಎಸ್.ಮಂಜುನಾಥ ಗಡಿಗುಡಾಳ್, ಎಚ್‌.ಜೆ.ಮೈನುದ್ದೀನ್‌, ಮನೋಜಿ ರಾವ್‌, ಎಂ.ಶಿವಕುಮಾರ, ಜಬೀವುಲ್ಲಾ ಇದ್ದರು.

ಫೋಟೊ: 25ಕೆಡಿವಿಜಿ1ದಾವಣಗೆರೆಯಲ್ಲಿ ಭಾನುವಾರ ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಟಿ, ಬಿಟಿ ಕಂಪನಿಗಳಿಂದ ಕನ್ನಡ ಭಾಷೆಯ ಅರ್ಜಿ ತಿರಸ್ಕಾರಕ್ಕೆ ಕಿಡಿ
ಶಿಕ್ಷಣ ಕಾಶಿ ಜತೆ ದಾವಣಗೆರೆ ಈಗ ಸಾಹಿತ್ಯ ನಗರಿ!