ಉತ್ತರ ಕರ್ನಾಟಕ ಭಾಗದ ಯೋಜನೆಗೆ ತಾತ್ಸರ ಮನೋಭಾವ ಏಕೆ: ಗೌಡರ

KannadaprabhaNewsNetwork |  
Published : Oct 03, 2026, 02:30 AM IST
2ಜಿಡಿಜಿ17 | Kannada Prabha

ಸಾರಾಂಶ

ಸರ್ಕಾರ ಇಂತಹ ಯೋಜನೆಗಳಿಗೆ ಸಮಯ ವ್ಯರ್ಥ ಮಾಡದೆ ಯೋಜನೆ ಕಾರ್ಯಾರಂಭಕ್ಕೆ ಆದ್ಯತೆ ನೀಡಬೇಕು.

ಮುಂಡರಗಿ: ಸರ್ಕಾರ ದಕ್ಷಿಣ ಕರ್ನಾಟಕ ಭಾಗದ ಯೋಜನೆಗಳಿಗೆ ತೋರುವ ಕಾಳಜಿ ಉತ್ತರ ಕರ್ನಾಟಕ ಭಾಗದ ಯೋಜನೆಗೆ ತೋರುವುದಿಲ್ಲ. ನಮ್ಮ ಭಾಗದ ಯೋಜನೆಗೆ ತಾತ್ಸರ ಮನೋಭಾವನೆ ತೋರುವುದು ಏಕೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಪ್ರಶ್ನಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡ್ತಿ-ವರದಾ ನದಿ ಜೋಡಣೆಯಿಂದ ಬಯಲು ಸೀಮೆ ಭಾಗದ ಹಲವು ಜಿಲ್ಲೆಗಳಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಕರಾವಳಿ ಕೆಲವೆಡೆ ಯೋಜನೆಗೆ ಅಪಸ್ವರ ಎತ್ತಲಾಗಿದೆ. ಈ ಭಾಗಕ್ಕೆ ಯೋಜನೆಯು ಅಗತ್ಯವಿದ್ದು, ಯಾರು ಅಪಸ್ವರ ತೆಗೆಯಬಾರದು. ಸರ್ಕಾರ ಆದಷ್ಟು ಬೇಗ ಈ ಬಗ್ಗೆ ಕ್ರಮವಹಿಸಿ ಯೋಜನೆಯ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರ ಈಗಾಗಲೇ ಯೋಜನಾ ಪ್ರದೇಶ ಡ್ರೋನ್ ಸರ್ವೇಗೆ ಕ್ರಮವಹಿಸಿದೆ. ತಾಲೂಕಿನ ಹಿರೇವಡ್ಡಟ್ಟಿ ಭಾಗದಲ್ಲಿ ಈ ಯೋಜನೆಯ ಆನೆಕಟ್ಟು ನಿರ್ಮಿಸಲಾಗುತ್ತದೆ. 18 ಟಿಎಂಸಿ ನೀರು ಬಳಕೆ ಮಾಡಬಹುದಾಗಿದೆ. 1992ರಲ್ಲಿ ಯೋಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ಡಿಪಿಆರ್‌ ಸಹ ಆಗಿದೆ. ಬೊಮ್ಮಾಯಿ ಅವರ ಕನಸಿನ ಕೂಸು ಇದಾಗಿದ್ದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ಅನುಮೋದನೆಗೆ ಹೋಗಿದೆ ಎಂದು ತಿಳಿಸಿದರು.

ಸರ್ಕಾರ ಇಂತಹ ಯೋಜನೆಗಳಿಗೆ ಸಮಯ ವ್ಯರ್ಥ ಮಾಡದೆ ಯೋಜನೆ ಕಾರ್ಯಾರಂಭಕ್ಕೆ ಆದ್ಯತೆ ನೀಡಬೇಕು. ಯೋಜನೆಯಿಂದ ಹಾವೇರಿ, ಗದಗ, ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ಭಾಗಕ್ಕೂ ಅನುಕೂಲವಾಗಲಿದೆ. ತುಂಗಭದ್ರಾ ನದಿಗೂ ನೀರು ಹರಿಯಲಿದೆ. ಹೀಗಾಗಿ ಸಮಾನಾಂತರವಾಗಿ ವಿಜಯನಗರ, ಕೊಪ್ಪಳ, ಗದಗ, ಹಾವೇರಿ ಭಾಗದ ಎಲ್ಲ ಶಾಸಕರು, ಸಚಿವರು, ಸಂಸದರು ಒಟ್ಟಾಗಿ ಯೋಜನೆ ಜಾರಿ ತರಬೇಕು. ಯೋಜನೆ ಜಾರಿಗೆ ತಡೆವೊಡ್ಡಿದರೆ ರೈತರು, ಸಾರ್ವಜನಿಕರು ಸೇರಿ ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದ್ರದ ಮೀನು ಹಳ್ಳದಲ್ಲಿ ಬೇಟೆ ಕೇಣಿಯಲ್ಲಿ ಕೊಕ್ಕರಾ ಮೀನುಗಳ ಸುಗ್ಗಿ
ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ