ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಿದ್ದರೇ ಲೋಪದೋಷಗಳು ಆಗಿದ್ದೇಕೆ?

KannadaprabhaNewsNetwork |  
Published : Feb 02, 2026, 02:30 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಪುರಸಭೆ ಮಾಜಿ ಸದಸ್ಯರು | Kannada Prabha

ಸಾರಾಂಶ

ಆಶ್ರಯ ಫಲಾನುಭವಿಗಳ ಆಯ್ಕೆ ಮೊದಲೇ ಗೊಂದಲದ ಗೂಡಾಗಿದೆ, ಇಂತಹ ಸಮಯದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಪಟ್ಟಿ ಸಿದ್ಧಮಾಡಿದ್ದೇವೆ ಎಂದು ಹೇಳಿರುವ ಮಾತಿನಲ್ಲಿ ಎಳ್ಳಷ್ಟು ಸತ್ಯವಿಲ್ಲ, ಒಂದು ವೇಳೆ ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಿದ್ದರೇ ಲೋಪದೋಷಗಳು ಆಗಿದ್ದೇಕೆ..? ಎಂಬುದನ್ನು ಬಹಿರಂಗಪಡಿಸಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಸವಾಲು ಹಾಕಿದರು.

ಬ್ಯಾಡಗಿ: ಆಶ್ರಯ ಫಲಾನುಭವಿಗಳ ಆಯ್ಕೆ ಮೊದಲೇ ಗೊಂದಲದ ಗೂಡಾಗಿದೆ, ಇಂತಹ ಸಮಯದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಪಟ್ಟಿ ಸಿದ್ಧಮಾಡಿದ್ದೇವೆ ಎಂದು ಹೇಳಿರುವ ಮಾತಿನಲ್ಲಿ ಎಳ್ಳಷ್ಟು ಸತ್ಯವಿಲ್ಲ, ಒಂದು ವೇಳೆ ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಿದ್ದರೇ ಲೋಪದೋಷಗಳು ಆಗಿದ್ದೇಕೆ..? ಎಂಬುದನ್ನು ಬಹಿರಂಗಪಡಿಸಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಸವಾಲು ಹಾಕಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಡವರಿಗೆ ನೀಡುವ ನಿವೇಶನ ಹಂಚಿಕೆಯಲ್ಲಿ ನಾವು ರಾಜಕೀಯ ಮಾಡಿಲ್ಲ, ಮಾಡುವುದು ಇಲ್ಲ ಇದನ್ನ ಮೊದಲು ಸಮಿತಿ ಅಧ್ಯಕ್ಷರು ಮನವರಿಕೆ ಮಾಡಿಕೊಳ್ಳಲಿ ಅಧಿಕಾರ ಶಾಶ್ವತವಲ್ಲ, ನಮ್ಮನ್ನು ಪರಿಗಣಿಸದೇ ಪಟ್ಟಿ ತಯಾರು ಮಾಡಿದ್ದಾರೆ ಎಂಬ ಹೇಳಿಕೆಗೆ ನಾವು ಈಗಲೂ ಬದ್ಧ ಅವರು ಒಪ್ಪುವುದಾದರೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಎಂದರು.

ನಾವು ರಾಜಕೀಯ ಮಾಡಲ್ಲ: ಮಾಜಿ ಉಪಾಧ್ಯಕ್ಷ ಸುಭಾಷ ಮಾಳಗಿ ಮಾತನಾಡಿ, ನಿವೇಶನ ಹಂಚಿಕೆ ಸಮಯದಲ್ಲಿ ನಾವು ನಮ್ಮ ವಾರ್ಡಿನ ಬಡ ಜನರ ಲಿಸ್ಟ್ ಕೊಟ್ಟಿದ್ದು ಸತ್ಯ. ಇದರಲ್ಲಿ ಎಲ್ಲವನ್ನು ಪರಿಶೀಲನೆ ಮಾಡಿ ಹಂಚಿಕೆ ಮಾಡುವುದು ಅವರ ಕೆಲಸ ಆಯ್ಕೆಯಲ್ಲಿ ಅನರ್ಹರನ್ನು ಆಯ್ಕೆ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಅಲ್ಲದೆ ಕೊನೆಯವರೆಗೂ ನಮಗೆ ಪಟ್ಟಿ ಕೊಡದೇ ಮಂತ್ರಿಗಳನ್ನ ಕರೆದು ಕಾರ‍್ಯಕ್ರಮ ಮಾಡಿ ಹಂಚಿಕೆ ಮಾಡಿದ ನಂತರ ನಮಗೆ ಪಟ್ಟಿ ಸಿಕ್ಕಿದೆ. ಹಾಗಾದರೇ ಇವರು ಯಾವಾಗ ನಮ್ಮನ್ನು ಗಣನೆಗೆ ತೆಗೆದುಕೊಂಡಿದ್ದಾರೆ ತಿಳಿಸಲಿ ಎಂದರು.ಉತ್ತರ ಕೊಡದೇ ಪಲಾಯನ:ರಾಮಣ್ಣ ಕೋಡಿಹಳ್ಳಿ ಮಾತನಾಡಿ, ನಮ್ಮ ಕೈಯಲ್ಲಿ ಲಿಸ್ಟ್ ಕೊಡದೇ ಹಂಚಿಕೆ ಮಾಡಿ ಮರುದಿನ ಪುರಸಭೆ ಎದುರು ಜನರು ಬಂದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಜನರಿಗೆ ಉತ್ತರ ಕೊಡಲಾಗದೇ ಮೊಬೈಲ್ ಸ್ವಿಚ್ ಆಫ್ ಮಾಡಿ ಎಲ್ಲಿ ಮಾಯವಾಗಿದ್ದರು, ನಿಜವಾಗಿ ಅರ್ಹ ಬಡವರಿಗೆ ಮನೆ ಕೊಟ್ಟಿದ್ದರೆ ಪಲಾಯನ ಮಾಡುವ ಅವಶ್ಯಕತೆ ಏನಿತ್ತು ತಿಳಿಸಲಿ ಎಂದರು. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಫಲಾನುಭವಿಗಳ ಆಯ್ಕೆಯಲ್ಲಿ ಆಗಿರುವ ತಪ್ಪನ್ನು ಸರಿ ಮಾಡಲು ನಾವು ಈಗಲೂ ಸಿದ್ಧ, ಆಶ್ರಯ ಸಮಿತಿ ಅಧ್ಯಕ್ಷ ಸದಸ್ಯರು ದಿನಾಂಕ ನಿಗದಿ ಮಾಡಲಿ, ನಾವೆಲ್ಲರೂ ಸೇರಿ ಉಂಟಾಗಿರುವ ಗೊಂದಲ ಸರಿ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡೋಣ ಎಂದರು.

ಈ ವೇಳೆ ಮಾಜಿ ಸದಸ್ಯರಾದ ವಿನಯಕುಮಾರ ಹಿರೇಮಠ, ಹನುಂತಪ್ಪ ಮ್ಯಾಗೇರಿ, ಶಿವರಾಜ ಅಂಗಡಿ, ಚಂದ್ರಣ್ಣ ಶೆಟ್ಟರ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಗಾಯತ್ರ‍್ರಿ ರಾಯ್ಕರ, ಮಲ್ಲಮ್ಮ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ, ಶಿಕ್ಷಣಕ್ಕೆ ಲಯನ್ಸ್‌ ಕ್ಲಬ್‌ ಆದ್ಯತೆ: ಡಾ. ರವಿ ಹೆಗಡೆ ಹೂವಿನಮನೆ
ಕೇಂದ್ರ ಬಜೆಟ್ ಬಜೆಟ್‌: ಸಾರ್ವಜನಿಕ ಶಿಕ್ಷಣ ಕಾರ್ಪೊರೇಟೀಕರಣಗೊಳಿಸಲು ನೀಲನಕ್ಷೆ