ಕನ್ನಡಪ್ರಭ ವಾರ್ತೆ ಬೆಂಗಳೂರು
ಇಟ್ಟಗಲಪುರದ ನಿವಾಸಿ ಅಭಿಜಿತ್ ಪಂಡಿತ್ (25) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ಅರ್ಚನಾ ಹಾಗೂ ಆಕೆಯ ಪ್ರಿಯಕರ ಪುಷನ್ ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮುತ್ತಗೂರಿನ ನಿರ್ಜನ ಪ್ರದೇಶದಲ್ಲಿ ಅಭಿಜಿತ್‌ನನ್ನು ಕೊಂದು ಬಳಿಕ ಅದೇ ಊರಿನ ಕೆರೆ ದಂಡೆಯಲ್ಲಿ ಮೃತದೇಹ ಎಸೆದು ಪಾಲ್ ಹಾಗೂ ಆತನ ಸ್ನೇಹಿತರು ಪರಾರಿಯಾಗಿದ್ದರು. ತನ್ನ ಪತಿ ನಾಪತ್ತೆ ಬಗ್ಗೆ ಮೃತಳ ಪತ್ನಿ ಅರ್ಚನಾ ಕೊಟ್ಟಿದ್ದ ದೂರೇ ಆಕೆಗೆ ಮುಳ್ಳಾಗಿ ಚುಚ್ಚಿದೆ. ಈ ದೂರಿನ ತನಿಖೆಗಿಳಿದ ಪೊಲೀಸರು ಶಂಕೆ ಮೇರೆಗೆ ಪಾಲ್‌ನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಕೊಲೆ ಕೃತ್ಯ ಬಯಲಾಗಿದೆ.ಪ್ರೀತಿ ಕೊಂದ ಕೊಲೆಗಾತಿ:
ತನ್ನ ಪ್ರಿಯತಮೆ ಸೂಚನೆ ಮೇರೆಗೆ ಆಕೆಯ ಪತಿ ಕೊಲೆಗೆ ಪಾಲ್ ಸಂಚು ರೂಪಿಸಿದ್ದ. ಅಂತೆಯೇ ಮೇ.27 ರಂದು ಮುತ್ತಗನೂರು ಸಮೀಪದ ನಿರ್ಜನ ಪ್ರದೇಶಕ್ಕೆ ಅಭಿಜಿತ್‌ನನ್ನು ಕರೆದೊಯ್ದು ಪಾಲ್ ಹಾಗೂ ಆತನ ಸಹಚರರು ಉಸಿರುಗಟ್ಟಿಸಿ ಕೊಂದಿದ್ದರು. ನಂತರ ಮೃತದೇಹವನ್ನು ಅದೇ ಊರಿನ ಕೆರೆ ದಂಡೆಯಲ್ಲಿ ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು. ಮರು ದಿನ ಮರುದಿನ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ರಾಜಾನುಕುಂಟೆ ಪೊಲೀಸ್ ಠಾಣೆಗೆ ಅರ್ಚನಾ ದೂರು ನೀಡಿದ್ದಳು. ಈ ದೂರಿನ ಬಗ್ಗೆ ತನಿಖೆಗಿಳಿದ ಪೊಲೀಸರು, ಮೃತನ ಸಹೋದ್ಯೋಗಿಗಳನ್ನು ವಿಚಾರಿಸಿದಾಗ ಪಾಲ್ ಮೇಲೆ ಶಂಕೆ ಮೂಡಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ತೀವ್ರವಾಗಿ ಪೊಲೀಸರು ಪ್ರಶ್ನಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.