ಕಾಡುಕೋಣ ಮೃತ್ಯು: ತನಿಖೆಗೆ ರೈತ ಸಂಘ ಆಗ್ರಹ

KannadaprabhaNewsNetwork |  
Published : Nov 19, 2026, 02:45 AM IST
ಚಿತ್ರ.4: ಸುಂಟಿಕೊಪ್ಪ ಹೋಬಳಿ ರೈತ ಸಂಘ ,ಪದಾಧಿಕಾರಿಗಳು | Kannada Prabha

ಸಾರಾಂಶ

ಕೆದಕಲ್ ನೇಗಾದಳು ಗ್ರಾಮದಲ್ಲಿ ಕಾಡುಕೋಣ ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಮಗ್ರ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕೆಂದು ಹೋಬಳಿ ರೈತ ಸಂಘ ಆಗ್ರಹಿಸಿದೆ.

ಸುಂಟಿಕೊಪ್ಪ: ಕೆದಕಲ್ ನೇಗಾದಳು ಗ್ರಾಮದಲ್ಲಿ ಕಾಡುಕೋಣ ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಮಗ್ರ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕೆಂದು ಹೋಬಳಿ ರೈತ ಸಂಘ ಆಗ್ರಹಿಸಿದೆ.ಮಂಗಳವಾರ ಸುಂಟಿಕೊಪ್ಪ ಹೋಬಳಿ ಕೆದಕಲ್ ನೇಗಾದಳು ಗ್ರಾಮದಲ್ಲಿ ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿದ ಸಂದರ್ಭ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೆರೂರು ಒತ್ತಾಯಿಸಿದ್ದಾರೆ.

ಹೇರೂರು ಮಾತನಾಡಿ, ವನ್ಯಜೀವಿಗಳ ಹತ್ಯೆ ಯಾವುದೇ ಕಾರಣಕ್ಕೂ ಸಹಿಸಲಾಗದು. ಈ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಎನ್.ಸಿ. ಕ್ಲೈವ್ ಪೊನ್ನಪ್ಪ ಮಾತನಾಡಿ, ಪ್ರಸ್ತುತ ಕಾಫಿ ಕೊಯ್ಲಿನ ಸಮಯವಾಗಿದ್ದು, ಪ್ರತಿನಿತ್ಯ ಕಾಟಿಗಳು ತೋಟಗಳಿಗೆ ಬರುತ್ತಿರುವುದರಿಂದ ರೈತರು ಹಾಗೂ ಕಾರ್ಮಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣಗಳು ತೋಟಗಳಿಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅವುಗಳನ್ನು ಕಾಡಿಗೆ ಮರಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಸುಂಟಿಕೊಪ್ಪ ರೈತ ಸಂಘದ ಅಧ್ಯಕ್ಷ ಕ್ಲೈವ್ ಪೊನ್ನಪ್ಪ,ಪದಾಧಿಕಾರಿಗಳಾದ ದಾಸಂಡ ರಮೇಶ್ ಚೆಂಗಪ್ಪ, ಕುಂಜಲಿನ ಮಂಜುನಾಥ್, ಮಾಗಲು ವಸಂತ, ಉದಯ, ಸಂಜು ಪೊನ್ನಪ್ಪ, ಸೋಮಯ್ಯ, ಜಗದೀಶ್, ಗೋಪಿನಾಥ್, ಪುಲ್ಲೇರ ವಸಂತ, ವೆಂಕಪ್ಪ ಹಾಗೂ ಸತೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ