ನೆಲಜಿ ಗ್ರಾಮದಲ್ಲಿ ಕಾಡಾನೆ ಉಪಟಳ: ಭತ್ತದ ಬೆಳೆ ನಾಶ

KannadaprabhaNewsNetwork |  
Published : Oct 30, 2026, 03:00 AM IST
ಬಲ್ಲಮಾವಟ್ಟಿ ಗ್ರಾಮಪಂಚಾಯತಿಯ ನೆಲಜಿ ಗ್ರಾಮದ ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಎಂಬುವರ ಭತ್ತದ ಗದ್ದೆಗೆ ದಾಳಿನಡೆಸಿದ ಕಾಡಾನೆಗಳ ಹಿಂಡು, ಪೈರುಗಳನ್ನು ತುಳಿದು ಹಾಳುಮಾಡುವ ಮೂಲಕ ಅಪಾರ ಪ್ರಮಾಣದ ನಷ್ಟಉಂಟುಮಾಡಿದು. | Kannada Prabha

ಸಾರಾಂಶ

ನೆಲಜಿ ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಉಪಟಳದಿಂದ ಭತ್ತದ ಬೆಳೆ ನಾಶವಾಗಿದ್ದು ಕೃಷಿಕರು ತೀವ್ರ ಹೈರಾಣಾಗಿದ್ದಾರೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ನೆಲಜಿ ಗ್ರಾಮದ ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಎಂಬುವರ ಭತ್ತದ ಗದ್ದೆಗೆ ದಾಳಿ ನಡೆಸಿದ ಕಾಡಾನೆಗಳ ಹಿಂಡು, ಪೈರು ಹಾಳುಮಾಡುವ ಮೂಲಕ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ.

ನಾಪೋಕ್ಲು: ನೆಲಜಿ ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಉಪಟಳದಿಂದ ಭತ್ತದ ಬೆಳೆ ನಾಶವಾಗಿದ್ದು ಕೃಷಿಕರು ತೀವ್ರ ಹೈರಾಣಾಗಿದ್ದಾರೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ನೆಲಜಿ ಗ್ರಾಮದ ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಎಂಬುವರ ಭತ್ತದ ಗದ್ದೆಗೆ ದಾಳಿ ನಡೆಸಿದ ಕಾಡಾನೆಗಳ ಹಿಂಡು, ಪೈರು ಹಾಳುಮಾಡುವ ಮೂಲಕ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ.

ಭತ್ತದ ಬಿತ್ತನೆ ಹಾಗೂ ನಾಟಿ ಸಂದರ್ಭದಲ್ಲೂ ಕಾಡಾನೆಗಳಹಾವಳಿ ಇತ್ತು. ಇದೀಗ ಪೈರುಗಳು ಉತ್ತಮವಾಗಿ ಬೆಳೆದು ಕದಿರು ಬಿಡುವ ಹಂತ ತಲುಪಿರುವಾಗಲೇ ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶಪಡಿಸಿರುವುದು ರೈತರನ್ನು ಕಂಗೆಡಿಸಿದೆ.

ರಾತ್ರಿ ವೇಳೆ ಕಾಡಾನೆಗಳು ಮತ್ತೆ ದಾಳಿ ನಡೆಸಿ ಉಳಿದ ಪೈರುಗಳನ್ನು ನಾಶಪಡಿಸುವ ಭೀತಿ ಎದುರಾಗಿದೆ. ಅರಣ್ಯ ಇಲಾಖೆಯು ಕೂಡಲೇ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಬೇಕು ಮತ್ತು ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನಷ್ಟ ತಡೆಗೆ ಹಾಲಿನ ದರ 8 ರು. ಏರಿಕೆ - ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು?
ರೇ* ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ