ಬೇಲೂರು ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ

KannadaprabhaNewsNetwork |  
Published : Apr 19, 2026, 01:45 AM IST
18ಎಚ್ಎಸ್ಎನ್3 :  | Kannada Prabha

ಸಾರಾಂಶ

ಕಾರ್ಯಾಚರಣೆಯಲ್ಲಿ ಪ್ರಮುಖ ಘಟ್ಟವಾಗಿ, ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆಯೇ, ಒಂಟಿಕೋರೆ ಕಾಡಾನೆ ಹಾಗೂ ಅದರ ಜೊತೆಯಲ್ಲಿದ್ದ ‘ಕ್ಯಾಪ್ಟನ್’ ಕಾಡಾನೆ ಏಕಾಏಕಿ ಓಡಲು ಆರಂಭಿಸಿತು. ಇದರಿಂದ ಕೆಲಕಾಲ ಗೊಂದಲ ಉಂಟಾದರೂ, ಕಾರ್ಯಾಚರಣಾ ತಂಡವು ಸಮರ್ಥವಾಗಿ ಎರಡೂ ಕಾಡಾನೆಗಳನ್ನು ಬೇರ್ಪಡಿಸಲು ಯಶಸ್ವಿಯಾಯಿತು. ಸ್ವಲ್ಪ ದೂರ ಓಡಿದ ಬಳಿಕ ಅರವಳಿಕೆಯ ಪರಿಣಾಮದಿಂದ ನರಹಂತಕ ಕಾಡಾನೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ತಕ್ಷಣವೇ ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದು ಭದ್ರತೆ ಒದಗಿಸಿತು. ನಂತರ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ನಡೆಸಿ, ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟುವ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿಕೋರೆ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮೂರನೇ ದಿನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಜನರಲ್ಲಿ ಭೀತಿ ಮೂಡಿಸಿದ್ದ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆಯು ವಿಶೇಷ ತಂಡವನ್ನು ರಚಿಸಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿತ್ತು.ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ತಂಡವು ಬೇಲೂರು ತಾಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಯಿರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿತು. ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಹಾಗೂ ಅನುಭವಿಗಳಾದ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸುತ್ತುವರಿದು ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ಆರಂಭಿಸಲಾಯಿತು.ಕಾರ್ಯಾಚರಣೆಯಲ್ಲಿ ಪ್ರಮುಖ ಘಟ್ಟವಾಗಿ, ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆಯೇ, ಒಂಟಿಕೋರೆ ಕಾಡಾನೆ ಹಾಗೂ ಅದರ ಜೊತೆಯಲ್ಲಿದ್ದ ‘ಕ್ಯಾಪ್ಟನ್’ ಕಾಡಾನೆ ಏಕಾಏಕಿ ಓಡಲು ಆರಂಭಿಸಿತು. ಇದರಿಂದ ಕೆಲಕಾಲ ಗೊಂದಲ ಉಂಟಾದರೂ, ಕಾರ್ಯಾಚರಣಾ ತಂಡವು ಸಮರ್ಥವಾಗಿ ಎರಡೂ ಕಾಡಾನೆಗಳನ್ನು ಬೇರ್ಪಡಿಸಲು ಯಶಸ್ವಿಯಾಯಿತು. ಸ್ವಲ್ಪ ದೂರ ಓಡಿದ ಬಳಿಕ ಅರವಳಿಕೆಯ ಪರಿಣಾಮದಿಂದ ನರಹಂತಕ ಕಾಡಾನೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ತಕ್ಷಣವೇ ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದು ಭದ್ರತೆ ಒದಗಿಸಿತು. ನಂತರ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ನಡೆಸಿ, ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟುವ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದರು.ಈ ಯಶಸ್ವಿ ಕಾರ್ಯಾಚರಣೆಯಿಂದ ಹಲವು ದಿನಗಳಿಂದ ಆತಂಕದಲ್ಲಿದ್ದ ಬೇಲೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಧೈರ್ಯಶಾಲಿ ಕ್ರಮ ಹಾಗೂ ಸಮನ್ವಯದಿಂದ ದೊಡ್ಡ ಅಪಾಯ ತಪ್ಪಿದಂತಾಗಿದೆ. ಸ್ಥಳಾಂತರದ ನಂತರ ಕಾಡಾನೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದ್ದು, ಮುಂದಿನ ಕ್ರಮಗಳನ್ನು ಇಲಾಖೆಯು ಕೈಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್‌ ಬೆದರಿಕೆ
ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‌:ಕೆಎಸ್‌ಸಿಎ ಸದಸ್ಯನ ವಿಚಾರಣೆ