ಕನ್ನಡಪ್ರಭ ವಾರ್ತೆ, ತರೀಕೆರೆ
ತೋಟಕ್ಕೆ ಮೂರು ಕಾಡಾನೆಗಳು ಪ್ರತಿನಿತ್ಯ ರಾತ್ರಿ ವೇಳೆಯಲ್ಲಿ ನುಗ್ಗಿ ತಂತಿ ಬೇಲಿ ಮುರಿದು ತೋಟದ ಒಳ ನುಗ್ಗಿ ತೆಂಗಿನ ಮರಗಳು, ಅಡಕೆ ಮರಗಳನ್ನು ಮುರಿದು ನಾಶ ಮಾಡಿದೆ. ಅಲ್ಲದೆ ತೋಟದಲ್ಲಿ ಬೆಳೆದಿದ್ದ ಫಸಲು ಬಿಡುತ್ತಿದ್ದ ಬಾಳೆ ಮರ ಗಳನ್ನು ತುಳಿದು ನಾಶ ಪಡಿಸಿದೆ ಎಂದು ಟಿ.ಆರ್.ಬಸವರಾಜು ತಿಳಿಸಿದ್ದಾರೆ.
ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಕೂಡಲೇ ಕಾಡಾನೆಗಳನ್ನು ತಡೆಯಬೇಕು, ತೋಟಗಳಿಗೆ ಆನೆಗಳು ಬರದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.--12ಕೆಟಿಆರ್.ಕೆ.4ಃ ತರೀಕೆರೆ ಬಳಿ ಜೋಡಿಗೋವಿಂದಪುರದಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಮರಗಳನ್ನು ನಾಶ ಪಡಿಸಿದೆ.