ಕಾಫಿಯ ನಾಡಲ್ಲಿ ಕಾಡಾನೆಗಳ ಕಾರುಬಾರು

KannadaprabhaNewsNetwork |  
Published : Feb 20, 2024, 01:46 AM IST
ರಮೇಶ್‌ಬಾಬು ಡಿಎಫ್‌ಓ, ಚಿಕ್ಕಮಗಳೂರು  | Kannada Prabha

ಸಾರಾಂಶ

ಕಾಫಿಯ ನಾಡು ಕಾಡಾನೆಗಳ ಬೀಡು ಆಗ್ತಾ ಇದೀಯಾ ?- ಈ ಪ್ರಶ್ನೆ ಕಳೆದ 6 ತಿಂಗಳಿಂದ ಜನರ ನಡುವೆ ಮಾತ್ರವಲ್ಲ, ಅರಣ್ಯ ಇಲಾಖೆ ಮುಂದೆಯೂ ಓಡಾಡುತ್ತಿದೆ. ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳಲ್ಲಿ ಕಳೆದ 6 ತಿಂಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಕಾಡಾನೆಗಳು ಜನ ವಸತಿ ಪ್ರದೇಶಗಳಲ್ಲಿ ಕಂಡು ಬಂದಿವೆ. ಈಗಲೂ ಕೂಡ ಹಲವೆಡೆ ಬೀಡು ಬಿಟ್ಟಿವೆ. ಹೆಣ್ಣು, ಗಂಡು ಮರಿ ಆನೆಗಳೊಂದಿಗೆ ರಾಜಾರೋಷವಾಗಿ ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಜೀವನದಲ್ಲಿ ಇದೇ ಮೊದಲ ಬಾರಿಗೆ ಆನೆಗಳ ಹಿಂಡನ್ನು ಕಣ್ಣು ತುಂಬಾ ನೋಡಿ ಖುಷಿ ಆಯ್ತು ಎಂದು ಗ್ರಾಮೀಣ ಭಾಗದ ಜನರು ಹೇಳುತ್ತಿದ್ದಾರೆ.

6 ತಿಂಗಳಲ್ಲಿ 100 ಕ್ಕೂ ಹೆಚ್ಚು ಆನೆಗಳು ಪ್ರತ್ಯೇಕ್ಷ । ಜನ ವಸತಿ ಪ್ರದೇಶಗಳಲ್ಲಿ ಗಜಪಡೆ ನಡೆದಿದ್ದೆ ದಾರಿ

ಆರ್.ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿಯ ನಾಡು ಕಾಡಾನೆಗಳ ಬೀಡು ಆಗ್ತಾ ಇದೀಯಾ ?

- ಈ ಪ್ರಶ್ನೆ ಕಳೆದ 6 ತಿಂಗಳಿಂದ ಜನರ ನಡುವೆ ಮಾತ್ರವಲ್ಲ, ಅರಣ್ಯ ಇಲಾಖೆ ಮುಂದೆಯೂ ಓಡಾಡುತ್ತಿದೆ. ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳಲ್ಲಿ ಕಳೆದ 6 ತಿಂಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಕಾಡಾನೆಗಳು ಜನ ವಸತಿ ಪ್ರದೇಶಗಳಲ್ಲಿ ಕಂಡು ಬಂದಿವೆ. ಈಗಲೂ ಕೂಡ ಹಲವೆಡೆ ಬೀಡು ಬಿಟ್ಟಿವೆ. ಹೆಣ್ಣು, ಗಂಡು ಮರಿ ಆನೆಗಳೊಂದಿಗೆ ರಾಜಾರೋಷವಾಗಿ ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಜೀವನದಲ್ಲಿ ಇದೇ ಮೊದಲ ಬಾರಿಗೆ ಆನೆಗಳ ಹಿಂಡನ್ನು ಕಣ್ಣು ತುಂಬಾ ನೋಡಿ ಖುಷಿ ಆಯ್ತು ಎಂದು ಗ್ರಾಮೀಣ ಭಾಗದ ಜನರು ಹೇಳುತ್ತಿದ್ದಾರೆ. ಬೆಳಕಿನ ಸಮಯದಲ್ಲಿ ಕಾಡಾನೆಗಳ ಸಂಚಾರ ವಿರಳವಾಗಿರುತ್ತದೆ. ರಾತ್ರಿ ಸಮಯದಲ್ಲಿ ಅವುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಿವೆ. ಮೂಡಿಗೆರೆ ತಾಲೂಕಿನ ದೇವರಮನೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳು ಹಗಲು ಹೊತ್ತಿನಲ್ಲಿ ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಜನರನ್ನು ಕಂಡರೂ ತಮ್ಮ ಪಾಡಿಗೆ ನಡೆದುಕೊಂಡು ಹೋಗುತ್ತಿವೆ. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿವೆ.

ಎಲ್ಲೆಲ್ಲಿ ಎಷ್ಟೆಷ್ಟು ಆನೆಗಳು ?

ಅಜ್ಜಂಪುರ ಹೊರತುಪಡಿಸಿದರೆ ಇನ್ನಿತರೆ ಎಲ್ಲಾ ತಾಲೂಕುಗಳಲ್ಲಿ ಕಾಡಾನೆಗಳ ಸಂಚಾರ ಎಂದಿನಂತೆ ಇದೆ. ಅವುಗಳು ತಮ್ಮ ಮೂಲ ಟ್ರ್ಯಾಕ್ ಬಿಟ್ಟು ಆಹಾರ ಅರಸಿ ಹೊಸ ದಾರಿಯಲ್ಲಿ ಸಾಗುವುದು ಸ್ವಾಭಾವಿಕ. ಆದರೆ, ಈ ಬಾರಿ ಹೆಚ್ಚು ಆನೆ ಗಳು ಜಿಲ್ಲೆಗೆ ಕಾಲಿಟ್ಟಿವೆ. ಕೆಲವು ಇಲ್ಲೇ ಉಳಿದುಕೊಂಡಿದ್ದರೆ ಮತ್ತೆ ಕೆಲವು ಇಲ್ಲಿಗೆ ಬಂದು ಮರಳಿ ತಮ್ಮ ಸ್ವಸ್ಥಾನಕ್ಕೆ ಹೋಗುತ್ತಿವೆ. ಸದ್ಯದ ಮಾಹಿತಿ ಪ್ರಕಾರ ಕಾಮೇನಹಳ್ಳಿಯಲ್ಲಿ 4, ಮೂಡಿಗೆರೆ ತಾಲೂಕಿನ ಭೈರಾಪುರ- 3, ಗುತ್ತಿ, ಕೋಗಿಲೆ- 2, ಸಾರಗೋಡು- 20, ಕಣತಿ- 3, ಕೊಳಗಾಮೆಯಲ್ಲಿ 5 ಆನೆಗಳು ಓಡಾಡುತ್ತಿವೆ. ಇದಲ್ಲದೆ ಬೀಟಮ್ಮ ತಂಡದಲ್ಲಿನ 25 ಆನೆಗಳು ಹಾಗೂ ಭದ್ರಾ ಹಿನ್ನಿರಿನಲ್ಲಿ 17 ಆನೆಗಳು ತಮ್ಮ ಮೂಲ ಸ್ಥಾನ ಬಿಟ್ಟು ತಮಗೆ ತೋಚಿದ ದಾರಿಯಲ್ಲಿ ಓಡಾಡುತ್ತಿವೆ. ---- ಬಾಕ್ಸ್ -----ತಂಡದಿಂದ ನಿರ್ಗಮಿಸಿದ ಭೀಮ

ಕಳೆದ ಜನವರಿ 27 ರಂದು ಬೀಟಮ್ಮ ತಂಡದೊಂದಿಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶ ಮಾಡಿದ್ದ ಭೀಮ ಭಾನುವಾರ ರಾತ್ರಿ ಈ ತಂಡವನ್ನು ಬಿಟ್ಟು ಏಕಾಂಗಿಯಾಗಿ ಕೆ.ಆರ್.ಪೇಟೆ ಮಾರ್ಗವಾಗಿ ಬೇಲೂರು ತಾಲೂಕು ಪ್ರವೇಶ ಮಾಡಿದ್ದಾನೆ. ಬೆಳ್ಳಂಬೆಳಿಗ್ಗೆ ಹಳ್ಳಿ ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಹೋಗಿರುವುದು ಹಳ್ಳಿಯ ಜನರು ನೋಡಿ ಖುಷಿ ಪಟ್ಟಿದ್ದಾರೆ. ಸುಮಾರು 22 ದಿನಗಳ ಕಾಲ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದ ಭೀಮ, ಬೀಟಮ್ಮ ಆ್ಯಂಡ್‌ ಟೀಮ್‌ನ್ನು ಅಂಗ ರಕ್ಷಕನಂತೆ ಕಾವಲು ಕಾಯುತ್ತಿದ್ದ. ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಎಲ್ಲರನ್ನೂ ಅರ್ಧ ದಾರಿಯಲ್ಲಿಯೇ ಬಿಟ್ಟು ತನ್ನ ಸ್ವಸ್ಥಾನಕ್ಕೆ ತೆರಳಿದ್ದಾನೆ. ಬೀಟಮ್ಮ ತಂಡ ಕೆ.ಆರ್.ಪೇಟೆ ನಂದಿಕೆರೆ ಗ್ರಾಮದ ಬಳಿ ಸೋಮವಾರ ಸಂಜೆ ಬೀಡು ಬಿಟ್ಟಿತ್ತು. ಬಂದ ದಾರಿಯಲ್ಲಿಯೇ ವಾಪಸ್ ಹೋಗುವ ಸಾಧ್ಯತೆ ಕಂಡು ಬರುತ್ತಿದೆ. ಅವುಗಳು ಭದ್ರಾ ಅಭಯಾರಣ್ಯಕ್ಕೆ ಹೋಗಿದ್ದರೆ ಮತ್ತೆ ಬರುವ ಸಾಧ್ಯತೆ ಕಡಿಮೆ ಇತ್ತು. ಆದರೆ, ಬಂದ ದಾರಿಯಲ್ಲಿಯೇ ಬೇಲೂರು ತಾಲೂಕಿಗೆ ಹೋದರೆ ಮತ್ತೆ ಯಾವತ್ತಾದರೂ ಬರಬಹುದು. ಅಂದರೆ, ಕಾಡಾನೆಗಳ ಸಂಚಾರ ಜನ ವಸತಿ ಪ್ರದೇಶಗಳಲ್ಲಿ ಸಹಜ ಎನ್ನುವ ಪರಿಸ್ಥಿತಿ ಮುಂದೊಂದು ದಿನ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. -----ಬೀಟಮ್ಮ ತಂಡ ಜಿಲ್ಲೆಗೆ ಬಂದು 23 ದಿನಗಳು ಆಗಿದ್ದು, ಅವುಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಅವುಗಳು ಭಾರೀ ಸಂಖ್ಯೆಯಲ್ಲಿ ಹಾಗೂ ಮರಿಯಾನೆಗಳು ಇರುವುದರಿಂದ ಕಾರ್ಯಾಚರಣೆ ಮೂಲಕ ಹಿಮ್ಮೆಟ್ಟುವುದು ಕಷ್ಟ ಸಾಧ್ಯ. ಹಾಗಾಗಿ ಅವುಗಳ ಚಲನವಲನದ ಮೇಲೆ ಕಣ್ಣಿಡಲಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಸದ್ಯದಲ್ಲೇ ಅವುಗಳು ಬಂದ ದಾರಿಯಲ್ಲೇ ವಾಪಸ್ ಹೋಗುವಂತೆ ಕಾಣುತ್ತಿವೆ.

ರಮೇಶ್‌ಬಾಬು ಡಿಎಫ್‌ಓ, ಚಿಕ್ಕಮಗಳೂರು

ಪೋಟೋ ಫೈಲ್‌ ನೇಮ್ 19 ಕೆಸಿಕೆಎಂ 3-----ಬೀಟಮ್ಮ ಮತ್ತು ತಂಡ ಕಾಡಿನಲ್ಲಿ ಬೀಡು ಬಿಟ್ಟಿರುವುದು.ಪೋಟೋ ಫೈಲ್‌ ನೇಮ್‌ 19 ಕೆಸಿಕೆಎಂ 4

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ