ಕನ್ನಡಪ್ರಭ ವಾರ್ತೆ ಆಲಮಟ್ಟಿ
ಜುಲೈನಲ್ಲಿ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗುವ ಹಂತಕ್ಕೆ ಬಂದಿತ್ತು. ಒಳಹರಿವು ಹೆಚ್ಚಿದ್ದರಿಂದ ಜಲಾಶಯ ಪೂರ್ಣ ಭರ್ತಿ ಮಾಡದೇ ನದಿಗೆ ನೀರು ಹರಿಸಲಾಗುತ್ತಿತ್ತು. ಮಳೆಯ ಲಕ್ಷಣ ಕಂಡು ಬಾರದ ಹಿನ್ನೆಲೆ ಸೆ.12ರಂದು ಜಲಾಶಯ ಪೂರ್ಣ ಭರ್ತಿ ಮಾಡಲಾಗಿತ್ತು.
ಕುಸಿದ ಒಳಹರಿವು;ಮಹಾರಾಷ್ಟ್ರದಲ್ಲಿ ಮಳೆ ಸಂಪೂರ್ಣ ನಿಂತ ಕಾರಣ ಜಲಾಶಯದ ಒಳಹರಿವು ಬುಧವಾರ ಶೂನ್ಯಕ್ಕೆ ತಲುಪಿದ್ದು, ಜಲಾಶಯದ ಮಟ್ಟ 519.60 ಮೀ ತಲುಪುವುದು ಕಷ್ಟ ಸಾಧ್ಯ. ಆದರೆ ಕಾಲುವೆಗಳ ಜಾಲಕ್ಕೆ ಮುಂಗಾರು ಹಂಗಾಮಿಗೆ ನೀರು, ಕೆರೆಗಳ ಭರ್ತಿ ಹಿನ್ನೀರಿನ ಬಳಕೆ, ಭಾಷ್ಪಿಭವನ ಕಾರಣ ನಿತ್ಯ 13,692 ಕ್ಯುಸೆಕ್ ನೀರು ಜಲಾಶಯದಿಂದ ಹೊರಹೋಗುತ್ತಿದ್ದು, ಇದರಿಂದ ಜಲಾಶಯದ ಮಟ್ಟ ತೀವ್ರ ಕುಸಿಯತೊಡಗಿದೆ.
ಕಳೆದ ತಿಂಗಳು ಕೂಡಲಸಂಗಮಕ್ಕೆ ಮುಖ್ಯಮಂತ್ರಿಗಳು ಬಂದ ವೇಳೆ ಕೃಷ್ಣೆ, ಮಲಪ್ರಭಾ ಸಂಗಮ ಸ್ಥಳದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದರು. ಹೀಗಾಗಿ ಕೃಷ್ಣೆಗೆ ಈ ಬಾರಿ ಬಾಗಿನ ಅರ್ಪಿವುರೋ, ಇಲ್ಲವೋ ಎಂಬ ಕುತೂಹಲ ರೈತರಲ್ಲಿ ಮೂಡಿದೆ.2002 ರಿಂದ ಆಯಾ ಕಾಲಘಟ್ಟದ ಮುಖ್ಯಮಂತ್ರಿಗಳಿಂದ ನಡೆದುಕೊಂಡ ಬಂದ ಆಲಮಟ್ಟಿ ಜಲಾಶಯದ ಬಾಗಿನ ಸಂಪ್ರದಾಯ ಈ ವರ್ಷ ನಿಲ್ಲಿಸಬಾರದು ಎಂಬುದು ರೈತ ಮುಖಂಡರ ವಾದ.ಕೃಷ್ಣೆಯ ಬಗ್ಗೆ ಮಲತಾಯಿ ಧೋರಣೆ ತಾಳದೇ, ಕಾವೇರಿಯಷ್ಟೇ ಪ್ರಾಮುಖ್ಯತೆ ಕೃಷ್ಣೆಗೂ ನೀಡಬೇಕು. ಯುಕೆಪಿ ಮೂರನೇ ಹಂತದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಒದಗಿಸಬೇಕು. ಜಲಾಶಯದ ಮಟ್ಟ ಇನ್ನಷ್ಟು ಕಡಿಮೆಯಾಗುವ ಮೊದಲೇ ಬಾಗಿನ ಅರ್ಪಿಸಬೇಕು. ಅರವಿಂದ ಕುಲಕರ್ಣಿ ರಾಜ್ಯ ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ---ಕೋಟ್
-ಶಿವಾನಂದ ಅವಟಿ ಜಿಪಂ ಮಾಜಿ ಸದಸ್ಯ