ಕನ್ನಡಪ್ರಭ ವಾರ್ತೆ ಕಲಬುರಗಿ
ಭೀಮಾ ತೀರದಲ್ಲಿ ನಿರಂತರ ಸಂಚಾರದಲ್ಲಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಳೆ, ಹೊಳೆಯಿಂದಾಗಿ ತೊಂದರೆಯಲ್ಲಿರುವ ರೈತರಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೈ ಹಿಡಿದಿದೆ. ಹಿಂದೆಯೂ ಈ ಕೆಲಸ ಮಾಡಿದೆ. ಇಂದೂ ಆ ಕೆಲಸವಾಗಿದೆ. ರೈತರು ಧೃತಿಗೆಡದೆ ಸರ್ಕಾರದ ಪರಿಹಾರದ ನೆರವು ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಕರೆ ನೀಡಿದ್ದಾರೆ.ಪ್ರವಾಹ ಪೀಡಿತ ಜೇವರ್ಗಿಯ ಮಾವೂರು, ರಾಸಣಗಿ, ಯಕ್ಕಂಚಿ, ಮಂದರವಾಡ ಸೇರಿದಂತೆ ಹಲವಾರು ಊರುಗಳಿಗೆ ಭೇಟಿ ನೀಡಿ, ರೈತರ ಸಭೆ ನಡೆಸಿ ಅವರೊಂದಿಗೆ ಸಂವಾದಿಸುತ್ತ ಪ್ರವಾಹ, ಮಳೆಯ ಹಾನಿಗೆ ಧೃತಿಗೆಡಬೇಡಿರಿ, ಸರ್ಕಾರ ಸಹಾಯಕ್ಕೆ ಬರುತ್ತಿದೆ ಎಂದು ತಿಳಿ ಹೇಳಿದ್ದಾರೆ.
ಸೆ. 17ರಂದು ಸಿಎಂ ಬಂದಾಗಲೂ ತೊಗರಿ ಹಾನಿ ಕಂಡಿದ್ದಾರೆ. ಸಮೀಕ್ಷೆ ಮಾಡಿ ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಯಮದ ಪ್ರಕಾರ ಖುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8500 ರು. ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 17 ಸಾವಿರ, ಬಹು ವಾರ್ಷಿಕ ಬೆಳೆಗೆ 22,500 ರು. ಇದ್ದು, ಈ ಪರಿಹಾರದ ಮೊತ್ತದ ಜೊತೆಗೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಪಾಲಿನ ರೂಪದಲ್ಲಿ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8, 500 ರು. ಪರಿಹಾರ ಘೋಷಿಸಿದ್ದು, ನೊಂದ ರೈತರ ಸಮೂಹಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.ಮಹಾರಷ್ಟ್ರ ಬಿಡುತ್ತಿರುವ ಬಾರಿ ಪ್ರಮಾಣದ ನೀರು, ಸ್ಥಳೀಯವಾಗಿ ಹೆಚ್ಚು ಸುರಿದ ಮಳೆ ಇವೆರಡರಿಂದಲೂ ಸಂಕಟ ಎದುರಾಗಿದೆ. ಸಿದ್ದರಾಮಯ್ಯನವರು ವೈಮಾನಿಕ ಸಮೀಕ್ಷೆಯಲ್ಲಿ ಹೊಲಗದ್ದೆ ನೀರು ನುಗ್ಗಿದ್ದನ್ನು ಕಂಡು ದಂಗಾಗಿದ್ದಾಗಿ ಹೇಳಿದ್ದಾರೆ. ರೈತರು, ಜನರ ಕಣ್ಣೀರಿಗೆ ಸಿದ್ದರಾಮಯ್ಯ ಒರೆಸುವ ಕೆಲಸ ಮಾಡಿದ್ದಾರೆ.
10 ಲಕ್ಷ ಹೆಕ್ಟರ್ ಬೆಳೆ ಹಾನಿಗೆ ಹೆಚ್ಚುವರಿ ಪಾಲು ಸೇರಿಸಿ 2, 500 ಕೋಟಿ ರು. ನಷ್ಟು ಪರಿಹಾರ ಹಣ ನೊಂದವರ ಕೈ ಸೇರಲಿದೆ. ಸಮೀಕ್ಷೆ ಮುಗಿದ ತಕ್ಷಣ ಹಣ ಬಿಡುಗಡೆ ಆಗುವುದಾಗಿ ಸಿಎಂ ಹೇಳಿದ್ದು, ರೈತರು ಧೈರ್ಯದಿಂದ ಇದ್ದು ಸಂಕಷ್ಟವನ್ನು ಎದುರಿಸಬೇಕು. ರಾಜ್ಯ ಸರ್ಕಾರ ಸದಾಕಾಲ ಬಡವರು, ರೈರ ಪರವಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.ಜೇವರ್ಗಿ ಭೀಮಾ ತೀರದಲ್ಲೇ ಹೆಚ್ಚಿನ ಹಾನಿ ಸಂಭವಿಸಿದೆ. ನದಿ ತೀರದ ಗ್ರಾಮಗಳಲ್ಲಿ 20ರಷ್ಟು ನೆರೆ ಹಾನಿಗೆ ತುತ್ತಾಗಿವೆ. ನೂರಾರು ಜನರನ್ನು ಸ್ಥಳಾಂತರಿಸಲಾಗಿದ್ದು ಆಸರೆ ನೀಡಲಾಗಿದೆ.
ರೈತರು ಧೃತಿಗೆಡದೆ ಪರಿಹಾರ ಕ್ರಮಗಳಿಗೆ ಸಹಕರಿಸಿ ಹೊಸ ಬದುಕು ಕಟ್ಟಿಕೊಳ್ಳಲಿ ಎಂದು ಡಾ. ಅಜಯ್ ಸಿಂಗ್ ರೈತ ಸಮೂಹದಲ್ಲಿ ಮನವಿ ಮಾಡಿದ್ದಾರೆ.ಜೇವರ್ಗಿಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದರಿಂದ ತಕ್ಷಣ ನೆರವಿಗೆ ಜಿಲ್ಲಾ ಮಟ್ಟದಲ್ಲಿ 6 ನೋಡಲ್ ಅಧಿಕಾರಿಗಳಿದ್ದರು. 30 ನೆರೆ ಪೀಡಿತ ಗ್ರಾಮಗಳನ್ನು ಗುರುತಿಸಿ 30 ಕಾಳಜಿ ಕೇಂದ್ರ ತೆರೆಯಲಾಗಿತ್ತು. 3, 500 ರಷ್ಟು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಆಸರೆ ನೀಡಲಾಗಿದೆ. ನಾವು ಜನರಿಗೆ ತೊದಂರೆ ಆಗಲು ಬಿಡೋದಿಲ್ಲ. ನೆರವಿಗೆ ಧಾವಿಸುತ್ತೇವೆ ಎಂಬುದನ್ನು ಜನತೆ ಅರಿತು ಸಹಕರಿಸಬೇಕು ಎಂದೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.