ಶಾಸಕರ ನಿಂದನೆ ಸಹಿಸುವುದಿಲ್ಲ: ಗುಬ್ಬಿ ಕಾಂಗ್ರೆಸ್‌

KannadaprabhaNewsNetwork |  
Published : Jun 03, 2025, 12:34 AM IST
ಗುಬ್ಬಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕ್ ಕಾಂಗ್ರೆಸ್ ಅಧ್ಯಕ್ಷ ಕೆ ಆರ್ ವೆಂಕಟೇಶ್. | Kannada Prabha

ಸಾರಾಂಶ

ಎಸ್‌.ಡಿ .ದಿಲೀಪ್ ಕುಮಾರ್ ನಮ್ಮ ಶಾಸಕ ಎಸ್ ಆರ್ ಶ್ರೀನಿವಾಸ್ ಬಗ್ಗೆ ಏನಾದರೂ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ ಆರ್ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಎಸ್‌.ಡಿ .ದಿಲೀಪ್ ಕುಮಾರ್ ನಮ್ಮ ಶಾಸಕ ಎಸ್ ಆರ್ ಶ್ರೀನಿವಾಸ್ ಬಗ್ಗೆ ಏನಾದರೂ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ ಆರ್ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೇಮಾವತಿ ಲಿಂಕ ಕೆನಾಲ್ ಹೋರಾಟ ಮಾಡಿದಕ್ಕೆ ನಮಗೆ ಖುಷಿ ಇದೆ. ನಾವು ಮತ್ತು ನಮ್ಮ ಶಾಸಕರು ಸಹ ಇದಕ್ಕೆ ಸಹಮತವನ್ನೇ ವ್ಯಕ್ತಪಡಿಸಿದ್ದೇವೆ. ಆದರೆ ಬಿಜೆಪಿ ದಿಲೀಪ್ ಕುಮಾರ್ ಶಾಸಕರ ವಿರುದ್ಧ ರೈತರನ್ನ ಎತ್ತಿ ಕಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆಯನ್ನು ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಎರಡು ಬಾರಿ ತಾಲೂಕಿನ ಜನತೆ ಕೈಗೆ ಬಳೆಯನ್ನು ತೊಡಿಸಿ ಕಳಿಸಿದ್ದಾರೆ. ಮೂರನೇ ಬಾರಿ ಸೀರೆ ಉಡಿಸಿ ಕೈಗೆ ಬಳೆ ಕೊಡುವುದಂತೂ ಸತ್ಯ. ಹೋರಾಟ ಮಾಡುವುದನ್ನು ಮಾಡಲಿ ಅದನ್ನು ಬಿಟ್ಟು ಈ ರೀತಿ ಕೆಟ್ಟದಾಗಿ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಸೋಮಣ್ಣ ನಿನ್ನನ್ನ ಎಲ್ಲಿ ನಿಲ್ಲಿಸಿದ್ದಾರೆ ಎಂಬುದನ್ನು ನೋಡಿಕೋ ಎಂದು ಏಕವಚನದಲ್ಲಿ ಕಿಡಿ ಕಾರಿದರು.ಜಿಲ್ಲಾ ಉಪಾಧ್ಯಕ್ಷ ಶಂಕರಾನಂದ ಮಾತನಾಡಿ , ಜಿಲ್ಲೆಯಲ್ಲಿ ಬಿಜೆಪಿ -ಜೆಡಿಎಸ್ ಶಾಸಕರು ಇದ್ದಾರೆ. ಆದರೆ ಅವರು ಸರಿಯಾದ ಮಾರ್ಗದಲ್ಲಿ ಹೋರಾಟವನ್ನು ಕರೆದುಕೊಂಡು ಹೋಗಲಿ. ಅದನ್ನು ಬಿಟ್ಟು ಜನತೆಯನ್ನು ತಪ್ಪು ದಾರಿಗೆ ಎಳೆಯಬೇಡಿ. ವಸ್ತು ಸ್ಥಿತಿಯ ಬಗ್ಗೆ ಅರಿವು ಮೂಡಿಸಿ. ರೈತರನ್ನ ಶಾಸಕರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡಬೇಡಿ. ಶಾಸಕರು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತಾರೆ ಈಗಾಗಲೇ ಹಲವು ಬಾರಿ ಡಿಕೆ ಶಿವಕುಮಾರ್ ಜೊತೆ ಚರ್ಚೆಯನ್ನು ನಡೆಸಿದ್ದಾರೆ. ಸಂಪೂರ್ಣವಾಗಿ ಶಾಸಕರ ವಿರೋಧವೂ ಇದೆ ಅದನ್ನ ನೀವು ಅರ್ಥಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೋ ರಾಮನಗರ ಭಾಗಕ್ಕೆ ನೀರನ್ನು ಬಿಡುವ ಪ್ರಶ್ನೆಯೇ ಇಲ್ಲ ಮಾಗಡಿ ಗೆ ಮಾತ್ರ 0.6 ಟಿ ಎಂ ಸಿ ಹಂಚಿಕೆಯಾಗಿದೆ. ಕುಣಿಗಲ್ ಗೆ 3.06 ಹಂಚಿಕೆಯಾಗಿದೆ ಈ ವಿಚಾರದಲ್ಲಿ ಅವಲೋಕನ ಮಾಡಿ. ಕುಣಿಗಲ್ ನಲ್ಲಿ ಕಾಮಗಾರಿಯೇ ನಡೆದಿಲ್ಲ ಮೊದಲು ಕಾಮಗಾರಿ ಮಾಡಿ ನೀರು ಹರಿಸಿಕೊಳ್ಳಿ ಎಂದು ಶಾಸಕ ರಂಗನಾಥ್ ಅವರಿಗೂ ತಿಳಿಸಿದರು. ಕೆಪಿಸಿಸಿ ಸದಸ್ಯ ತಾತಯ್ಯ ಮಾತನಾಡಿ, ನೀವು ಮಾತನಾಡುವಾಗ ಸರಿಯಾದ ರೀತಿಯಲ್ಲಿ ಮಾತನಾಡಬೇಕು ಇಲ್ಲದೆ ಹೋದರೆ ನೀವೇ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಮುಖಂಡರಿಗೆ ನೀಡಿದರಿ. ಈ ವೇಳೆ ಮುಖಂಡರಾದ ಗುರು ರೇಣುಕಾರಾಧ್ಯ, ಕುಡಿಯಾಲ ಮಹದೇವ, ಭಾಗ್ಯಮ್ಮ ,ಮಂಜುನಾಥ್ ಚಿಕ್ಕ ರಂಗೇಗೌಡ, ಬಿದರೆ ಯತೀಶ್, ಈಶ್ವರಯ್ಯ ನಾಗಭೂಷಣ್, ರಾಘವೇಂದ್ರ ,ವೆಂಕಟೇಶ್ ಹಲವು ಮುಖಂಡರು ಪತ್ರಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.

PREV

Recommended Stories

ಕೊಡಗಿನಲ್ಲಿ ಮಳೆಯಬ್ಬರ: ಹಲವು ಕಡೆ ಮನೆಗಳಿಗೆ ಹಾನಿ
ಗ್ರಾಮ ಆಡಳಿತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸ್ಪಂದನೆ ಅವಶ್ಯ: ಕೃಷ್ಣ ಬೈರೇಗೌಡ