ಜಿಲ್ಲೆಯ ಅಭಿವೃದ್ಧಿಗೆ ಆಲಗೂರು ಗೆಲ್ಲಿಸಿ: ಬಿರಾದಾರ

KannadaprabhaNewsNetwork |  
Published : Apr 16, 2024, 01:03 AM IST
15ಬಿಎಸ್ವಿ02- ಬಸವನಬಾಗೇವಾಡಿ ವಿವಿಧ ಗಲ್ಲಿಗಳಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಯಾಚಿಸಿದರು. | Kannada Prabha

ಸಾರಾಂಶ

ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರೊ.ರಾಜು ಆಲಗೂರ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಂಕರಗೌಡ ಬಿರಾದಾರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರೊ.ರಾಜು ಆಲಗೂರ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಂಕರಗೌಡ ಬಿರಾದಾರ ಮನವಿ ಮಾಡಿದರು.

ಪಟ್ಟಣದ ಲಕ್ಷ್ಮೀ ನಗರ, ಶಿವನಗುಡಿ, ಶಿವಾಜಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರು ಸಂಸತ ಅಧಿವೇಶನದಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಹತ್ತು ವರ್ಷಗಳಲ್ಲಿ ಒಮ್ಮೆಯೂ ಮಾತನಾಡಿಲ್ಲ ಎಂದು ಟೀಕಿಸಿದರು.

ವಿಜಯಪುರ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ನದಿಯ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಮಾಡಬೇಕು. ವಿಜಯಪುರದಿಂದ ಬೆಂಗಳೂರಿಗೆ, ವಿಜಯಪುರದಿಂದ ಮುಂಬೈ ಹಾಗೂ ಹೈದ್ರಾಬಾದಕ್ಕೆ ತೆರಳಲು ಸೂಕ್ತ ರೈಲಿನ ವ್ಯವಸ್ಥೆಗಳಿಲ್ಲ. ವಿಜಯಪುರ ನಗರದ ಹಿಟ್ಟನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ವಿಜಯಪುರ ನಗರದ ಬಳಿ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ಹೊರೆಯಾಗಿದೆ. ಈ ಟೋಲ್‌ ಗೇಟ್ ವಿರುದ್ಧ ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇಲ್ಲಿಯವರೆಗೆ ಮನಗೂಳಿ ಹಾಗೂ ನಿಡಗುಂದಿ ಹತ್ತಿರ ಪ್ಲೈಒವರ್ ಕಾಮಗಾರಿ ಮಾಡಿಲ್ಲ, ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ರಸ್ತೆ ಆಗಬೇಕು. ವಿಜಯಪುರ-ಕಲ್ಬುರ್ಗಿ, ಬಿಜ್ಜಳ ರಾಜ್ಯ ಹೆದ್ದಾರಿ ರಾಷ್ಟೀಯ ಹೆದ್ದಾರಿಯಾಗಿ ಪರಿವರ್ತನೆ ಆಗಬೇಕು. ವಿಮಾನ ನಿಲ್ದಾಣದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ನಗರ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ಜಗದೇವಿ ಗುಂಡಳ್ಳಿ, ಮುಖಂಡರಾದ ಸಂಗಮೇಶ ಓಲೇಕಾರ, ಶೇಖರ ಗೊಳಸಂಗಿ, ರವಿ ರಾಠೋಡ, ಮುರುಗೇಶ ನಾಯ್ಕೋಡಿ, ಭದ್ರು ಮಣ್ಣೂರ, ರಂಜಾನ ಹೆಬ್ಬಾಳ, ಪರುಶುರಾಮ ಬೆಕಿನಾಳ, ಮಹಿಬೂಬ ನಾಯ್ಕೋಡಿ, ಮಹಾಂತೇಶ ಸಾಸಾಬಾಳ, ಅಜೀಜ ಬಾಗವಾನ, ಜಟ್ಟಿಂಗರಾಯ ಮಾಲಗಾರ, ಕಮಲಸಾಬ ಕೊರಬು, ಸಂಗನಬಸು ಪೂಜಾರಿ, ಬಸವರಾಜ ಚೌರಿ, ಮಡಿವಾಳಪ್ಪ ವಾಲಿಕಾರ, ಪರುಶುರಾಮ ಜಮಖಂಡಿ, ಸಂಗಮೇಶ ಕಾಳಹಸ್ತೇಶ್ವರಮಠ, ಸಂತೋಷ ಬಿರಾದಾರ, ಬಾಬು ಬಂಗಾರಿ, ಹಣಮಂತ ಪಿರಂಗಿ, ಪರಶುರಾಮ ಮ್ಯಾಗೇರಿ, ಶಂಕರ ಮ್ಯಾಗೇರಿ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ