- ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ರೋಡ್ ಶೋ, ಮತಯಾಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ದಕ್ಷಿಣ ಕ್ಷೇತ್ರದ 18, 7, 8 ಹಾಗೂ 10ನೇ ವಾರ್ಡ್‌ಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ರೋಡ್ ಶೋ ಮೂಲಕ ಮತ ಯಾಚಿಸಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರವೂ ಭಾರತ ದೇಶ ಇದ್ದಂತೆ. ಇಲ್ಲಿ ಎಲ್ಲ ಜಾತಿ, ಧರ್ಮೀಯರೂ ಸಹಬಾಳ್ವೆಯಿಂದ ಇದ್ದಾರೆ. ಸದಾ ಈ ಭಾಗದ ಜನತೆ ತಮಗೆ ಬೆಂಬಲ ನೀಡುತ್ತಾ, ಉತ್ತಮ ವಾತಾವರಣಕ್ಕೆ ಕಾರಣರಾಗಿದ್ದೀರಿ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನಗೆ ಅತಿ ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ತಿಳಿಸಿದರು.
ಬಳ್ಳಾರಿ ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಉದ್ಯಮಿಗಳಾದ ಅಥಣಿ ವೀರಣ್ಣ, ಎಸ್.ಕೆ.ವೀರಣ್ಣ, ಮೇಯರ್ ವಿನಾಯಕ ಪೈಲ್ವಾನ್, ಬ್ಲಾಕ್ ಅಧ್ಯಕ್ಷ ಅಯೂಬ್ ಪೈಲ್ವಾನ್, ನಾಯಕ ಸಮಾಜದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ, ಮಾಜಿ ಸದಸ್ಯ ಪಿ.ಎನ್.ಚಂದ್ರಶೇಖರ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ದೂಡಾ ಮಾಜಿ ಅಧ್ಯಕ್ಷ ಮಾಲತೇಶ ರಾವ್ ಜಾಧವ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಎನ್.ಚಂದ್ರಪ್ಪ, ಮಾಜಿ ಸದಸ್ಯ ಬಾಬುರಾವ್ ಸಾಳಂಕಿ, ವಾರ್ಡ್ ಅಧ್ಯಕ್ಷರಾದ ಪರಮೇಶ, ಶಂಭು, ವಿಶ್ವನಾಥ, ಡಿಶ್ ಮಂಜುನಾಥ, ಸತೀಶ, ಕ್ಯಾಪ್ಟನ್ ನಾಗರಾಜ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.- - - -2ಕೆಡಿವಿಜಿ18, 19:
ದಾವಣಗೆರೆ ದಕ್ಷಿಣಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ರೋಡ್ ಶೋ ಮೂಲಕ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತಯಾಚಿಸಿದರು.