ಗಾಳಿ ಮಳೆ ಅಬ್ಬರ: ತುಂಬಿ ಹರಿಯುತ್ತಿರುವ ತುಂಗಾ ನದಿ

KannadaprabhaNewsNetwork |  
Published : Jul 05, 2026, 01:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿ: ತಾಲೂಕಿನಾದ್ಯಂತ ಗಾಳಿ ಮಳೆ ಅಬ್ಬರಿಸುತ್ತಿರುವ ಪರಿಣಾಮ ತುಂಗಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಶುಕ್ರವಾರ ರಾತ್ರಿಯಿಡೀ ಗಾಳಿ ಸಹಿತ ಭಾರೀ ಮಳೆ ಯಿಂದ ಶನಿವಾರ ಗಾಳಿ ಮಳೆಯ ಆರ್ಭಟ ಮುಂದುವರಿದಿತ್ತು. ತುಂಗಾನದಿ ಉಗಮಸ್ಥಳ ಪಶ್ಚಿಮಘಟ್ಟಗಳ ತಪ್ಪಲು ಎಸ್‌ ಕೆ.ಬಾರ್ಡರ್, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಪ್ರವಾಹದ ಭೀತಿ ಎದುರಾಗಲಿದೆ.

ಮಳೆಯಿಂದ ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆವರೆಗೂ ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್, ದೂರವಾಣಿ ಸಂಪರ್ಕ ಕೂಡ ಅಸ್ತವ್ಯಸ್ಥಗೊಂಡಿತ್ತು. ಕಳೆದ ನಾಲ್ಕೈದು ದಿನ ಗಳಿಂದ ಮುಂಗಾರು ಪ್ರವೇಶದಿಂದ ಶೃಂಗೇರಿ ತಾಲೂಕಿನಲ್ಲಿ ಮಳೆ ಸುರಿಯಲಾರಂಭಿಸಿತ್ತು. ಶುಕ್ರವಾರ ರಾತ್ರಿಯಿಂದ ಮಳೆಯೊಂದಿಗೆ ಗಾಳಿ ಆರ್ಭಟವೂ ಜೋರಾಗಿದೆ.

ಗಾಳಿ ಆರ್ಭಟಕ್ಕೆ ಕೆಲವೆಡೆ ಸಣ್ಣಪುಟ್ಟ ಮರಗಳು ಉರುಳಿ ಬೀಳುತ್ತಿದ್ದು ಯಾವುದೇ ಹಾನಿ ಉಂಟಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿ ದರೆ ಈ ವರ್ಷ ಮಳೆ ಪ್ರಮಾಣ ತೀರ ಕಡಿಮೆಯಾಗಿದೆ. ಕಳೆದ ಬಾರಿ ಜೂನ್ ತಿಂಗಳ ಆರಂಭದಿಂದಲೇ ಮಳೆ ಆರಂಭವಾಗಿತ್ತು. ತುಂಗಾನದಿಯಲ್ಲಿ ಸಾಕಷ್ಟು ಬಾರಿ ಪ್ರವಾಹ ಬಂದಿದೆ. ಪ್ರವಾಹದ ಮಟ್ಟದಲ್ಲಿಯೇ ನೀರು ಹರಿಯುತ್ತಿತ್ತು. ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು ಬತ್ತದ ಗದ್ದೆಗಳಲ್ಲಿ ಸಸಿ ಮಡಿ ಕೆಲಸಗಳಿಗೆ ತಯಾರಿ ನಡೆಯುತ್ತಿದೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಅಡಕೆ ತೋಟಗಳಲ್ಲಿ ಔಷಧಿ ಸಿಂಪಡಣೆಗೆ ಹಿನ್ನೆಡೆಯಾಗಿದೆ. ಶನಿವಾರ ಸಂಜೆ ವರೆಗೂ ಮಳೆ ಗಾಳಿ ಆರ್ಭಟ ಮುಂದುವರಿದಿತ್ತು.

4 ಶ್ರೀ ಚಿತ್ರ 3-

ಶೃಂಗೇರಿ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿರುವುದರಿಂದ ತುಂಗಾನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ