ಯಲಬುರ್ಗಾ: ತಾಲೂಕಿನ ತಿಪ್ಪನಾಳ ಗ್ರಾಮದ ರೈತರ ಜಮೀನಲ್ಲಿ ಅಳವಡಿಸಲಾಗಿದ್ದ ಪವನ ವಿದ್ಯುತ್ ಫ್ಯಾನ್ ಇದ್ದಕ್ಕಿದ್ದಂತೆ ನೆಲಕ್ಕೆ ಉರುಳಿ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಆಗ್ರಹ: ಅಲ್ಲದೆ ತಾಲೂಕಿನ ಹಿರೇವಂಕಲಕುಂಟಾ ಹೋಬಳಿಯ ಗುನ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಯಮಾವಳಿ ಗಾಳಿಗೆ ತೂರಿ ಬೃಹತ್ ಗಾತ್ರದ ಯಂತ್ರೋಪಕರಣ ಸಂಗ್ರಹಿಸುತ್ತಿರುವ ಖಾಸಗಿ ಕಂಪನಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಕೆಯಾಗಿ ತಿಂಗಳು ಕಳೆದರೂ ಯಾವುದೇ ಕಾನೂನು ಕ್ರಮ ಜರುಗಿಸದಿರುವುದು ವಿಪರ್ಯಾಸ. ಅನಧಿಕೃತವಾಗಿ ಯಂತ್ರೋಪಕರಣ ಸಂಗ್ರಹಿಸಿ, ಕಂದಾಯ ವಂಚಿಸುತ್ತಿರುವ ಕಂಪನಿಯ ವಿರುದ್ಧ ತಾಲೂಕಾಡಳಿತ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಆಗ್ರಹಿಸಿದ್ದಾರೆ.