ಕೊಮ್ಮಸಂದ್ರದಲ್ಲಿ ದ್ರಾಕ್ಷಿ ತೋಟಕ್ಕೆ ವಾಮಚಾರ

KannadaprabhaNewsNetwork |  
Published : Dec 22, 2024, 01:32 AM IST
ವಿಜೆಪಿ ೨೧ವಿಜಯಪುರ ಪಟ್ಟಣದ ಸಮೀಪದ ಕೊಮ್ಮಸಂದ್ರ ಗ್ರಾಮದ ನಿವಾಸಿಯಾದ ಗ್ರಾಮದ ಪಾಟೇಲ್ ನಾರಾಯಣಪ್ಪ ಎಂಬುವವರ ದ್ರಾಕ್ಷೀ ತೋಟದಲ್ಲಿ ಕುಂಬಳಕಾಯಿ ದಾರ ಕಟ್ಟಿ ವಾಮಾಚಾರ ಮಾಡಿರುವದು | Kannada Prabha

ಸಾರಾಂಶ

ವಿಜಯಪುರ: ಹೋಬಳಿಯ ಕೊಮ್ಮಸಂದ್ರ ಗ್ರಾಮದ ರೈತ ಪಟೇಲ್ ನಾರಾಯಣಪ್ಪ ಅವರ ದ್ರಾಕ್ಷಿ ತೋಟದಲ್ಲಿ ಕುಂಬಳಕಾಯಿ ದಾರ ಕಟ್ಟಿ ವಾಮಾಚಾರ ಮಾಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ದಾಕ್ಷಿ ತೋಟದಲ್ಲಿ ಯಾರೇ ಕಿಡಿಗೇಡಿಗಳು ರಾತ್ರಿ ವೇಳೆ ವಾಮಾಚಾರ ಮಾಡಿದ್ದಾರೆ ಎಂದು ರೈತ ಪಾಟೇಲ್ ನಾರಾಯಣಪ್ಪ ತಿಳಿಸಿದ್ದಾರೆ.

ವಿಜಯಪುರ: ಹೋಬಳಿಯ ಕೊಮ್ಮಸಂದ್ರ ಗ್ರಾಮದ ರೈತ ಪಟೇಲ್ ನಾರಾಯಣಪ್ಪ ಅವರ ದ್ರಾಕ್ಷಿ ತೋಟದಲ್ಲಿ ಕುಂಬಳಕಾಯಿ ದಾರ ಕಟ್ಟಿ ವಾಮಾಚಾರ ಮಾಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ದಾಕ್ಷಿ ತೋಟದಲ್ಲಿ ಯಾರೇ ಕಿಡಿಗೇಡಿಗಳು ರಾತ್ರಿ ವೇಳೆ ವಾಮಾಚಾರ ಮಾಡಿದ್ದಾರೆ ಎಂದು ರೈತ ಪಾಟೇಲ್ ನಾರಾಯಣಪ್ಪ ತಿಳಿಸಿದ್ದಾರೆ. ಬ್ಯಾಂಕ್ ನಲ್ಲಿ ೧೬ ಲಕ್ಷ ಲೋನ್ ಪಡೆದು ದ್ರಾಕ್ಷಿ ತೋಟ ಬೆಳೆದಿರುವ ನಾರಾಯಣಪ್ಪ, ಮೂರು ವರ್ಷಗಳಿಂದ ದ್ರಾಕ್ಷಿ ತೋಟಕ್ಕೆ ಸುಮಾರು ಹಣ ಖರ್ಚು ಮಾಡಿ ಚಪ್ಪರ, ಮತ್ತಿತರೆ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ತೋಟ ಮತ್ತು ಚಪ್ಪರ ಎರಡಕ್ಕೂ ರಾತ್ರೋರಾತ್ರಿ ಗಿಡಗಳಿಗೆ ಮತ್ತು ಚಪ್ಪರಕ್ಕೆ ದಾರ ಕಟ್ಟಿ ವಾಮಾಚಾರ ಮಾಡಿ ರೈತ ಕುಟುಂಬದಲ್ಲಿ ಆತಂಕ ಹುಟ್ಟಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ನಾರಾಯಣಪ್ಪ ದೂರು ನೀಡಿದ್ದು, ಪೊಲೀಸರು ಸ್ಥಳ ಪರೀಶಿಲಿಸಿ ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ