ಆಷಾಢ ಶುಕ್ರವಾರಕ್ಕೆ ಸಂಪೂರ್ಣ ಸಜ್ಜಾದ ಜಿಲ್ಲಾಡಳಿತ

KannadaprabhaNewsNetwork |  
Published : Jun 22, 2025, 01:18 AM ISTUpdated : Jun 22, 2025, 11:53 AM IST
41 | Kannada Prabha

ಸಾರಾಂಶ

ಬಸ್ ನಿಲ್ದಾಣದ ಕೌಂಟರ್ ಗಳಲ್ಲಿ ಟಿಕೆಟ್ ಪಡೆದುಕೊಳ್ಳಬೇಕು ಹಾಗೂ ಲಲಿತ ಮಹಲ್ ಪಾರ್ಕಿಂಗ್ ಲಾಟ್ ನಲ್ಲಿ ಮೂರು ಕೌಂಟರ್ ಗಳನ್ನು ತೆರಯಲಾಗುತ್ತಿದೆ

 ಮೈಸೂರು : ಆಷಾಢ ಶುಕ್ರವಾರಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರವು ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.ಮೊದಲ ಆಷಾಢ ಶುಕ್ರವಾರ ಜೂ. 27 ರಿಂದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಅಗತ್ಯ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪುತ್ತಿದೆ. ಚಾಮುಂಡೇಶ್ವರಿ ದೇವಾಲಯಕ್ಕೆ ಅಗತ್ಯವಿರುವ ಬಸ್‌ಸೌಲಭ್ಯ ಕಲ್ಪಿಸಲಾಗುತ್ತಿದೆ. 

ನಗರ ಬಸ್ ನಿಲ್ದಾಣದಲ್ಲಿ 300 ರೂ. ದರ್ಶನದ ಟಿಕೆಟ್‌ಪಡೆಯಬಹುದು. ಈ ಟಿಕೆಟ್‌ಗಳನ್ನು ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಕೊಡಲಾಗುವುದಿಲ್ಲ.ಬಸ್ ನಿಲ್ದಾಣದ ಕೌಂಟರ್ ಗಳಲ್ಲಿ ಟಿಕೆಟ್ ಪಡೆದುಕೊಳ್ಳಬೇಕು ಹಾಗೂ ಲಲಿತ ಮಹಲ್ ಪಾರ್ಕಿಂಗ್ ಲಾಟ್ ನಲ್ಲಿ ಮೂರು ಕೌಂಟರ್ ಗಳನ್ನು ತೆರಯಲಾಗುತ್ತಿದೆ. ಅಲ್ಲಿ ಜನರಲ್, 300 ರೂ. ಹಾಗೂ 2000 ರೂ. ಪಾಯಿಯ ಕೌಂಟರ್ ತೆರೆಯಲಾಗುತ್ತಿದೆ. ಲಲಿತ ಮಹಲ್ ಹೆಲಿಪಾಡ್ ನಲ್ಲಿ ಹತ್ತರಿಂದ ಹದಿನೈದು ಟಿಕೆಟ್ ಕೌಂಟರ್ ತೆರೆಯಲಾಗುತ್ತಿದೆ. 

ಯುಪಿಐ, ಫೋನ್‌ಪೇ, ಗೂಪಲ್‌ಪೇ ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.ಎಐ ಕ್ಯಾಮೆರಾ ಗಳು ಅಗತ್ಯ ವಿದ್ಯುತ್‌ಸೌಲಭ್ಯವನ್ನು ವಾಹನ ನಿಲುಗಡೆ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಬಸ್‌ನಲ್ಲಿ ತೆರಳಲು ಪ್ರತ್ಯೇಕ ಸರಧಿ ಇರುತ್ತದೆ ಹಾಗೂ 2000 ರೂ. ಪಾವತಿಸಿ ಹೋಗುವವರಿಗೆ ವೋಲ್ವೋ ಬಸ್ ಸಲಭ್ಯವನ್ನು ಪ್ರತ್ಯೇಕವಾಗಿ ಮಾಡಲಾಗಿದೆ.ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಶೌಚಾಲಯ, ವಿದ್ಯುತ್‌ದೀಪ ಮತ್ತು ಸಿಸಿ ಕ್ಯಾಮರ ಅಳವಡಿಸಲಾಗಿದೆ. ಭಕ್ತರು ತಂದ ಪ್ರಸಾದ ಹಂಚಲು ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳು, ಕಾರು, ಬಸ್ಸು, ದ್ವಿಚಕ್ರ ವಾಹನವನ್ನು ಬೆಟ್ಟದ ಮೇಲೆ ಬಿಡುವುದಿಲ್ಲ. 

ವಿಶೇಷ ದರ್ಶನದ ಸಾಲಿನಲ್ಲಿದ್ದವರಿಗೆ ಡ್ರೈ ಫ್ರೂಟ್ ನೀಡಲಾಗುವುದು. ವಿಶೇಷಚೇತನರಿಗೆ ವ್ಹೀಲ್‌ಚೇರ್‌, ವೈದ್ಯಕೀಯ ಸೌಲಭ್ಯ ಇರುತ್ತದೆ ಎಂದರು.ಸದಾ ಚಾಮುಂಡಿ ಬೆಟ್ಟದ. ದೇವಸ್ಥಾನದ ಬಳಿ ಅಂಬುಲೆನ್ಸ್ ವ್ಯವಸ್ಥೆ ಇರುತ್ತದೆ. 300 ರೂಪಾಯಿ ಕೊಟ್ಟು ಬಂದ ಭಕ್ತಾದಿಗಳಿಗೆ ಮೂವತ್ತು ರೂಪಾಯಿ ಟಿಕೆಟ್ ಬಳಿ ಸೇರಿಸಲಾಗುತ್ತದೆ. ಧರ್ಮದರ್ಶನದ ಕ್ಯೂ ಬೇರೆ ಇರುತ್ತದೆ. ಈ ಸಾಲಿನಲ್ಲಿ ಬರುವ ಭಕ್ತಾಧಿಗಳಿಗಾಗಿ ವಾಟರ್ ಬಾಟಲ್ ಶೌಚಾಲಯದ ವ್ಯವಸ್ಥೆಯನ್ನು ಚಾಮುಂಡಿ ಬೆಟ್ಟದಲ್ಲಿ ಮಾಡಲಾಗಿದೆ.300 ರೂ. ಟಿಕೆಟ್ ಕೊಟ್ಟು ಬಂದವರಿಗಾಗಿ ಬಾದಾಮಿ ಹಾಲು ವಿತರಿಸಲಾಗುತ್ತದೆ. 

3 ವಲಯಗಳನ್ನಾಗಿ ಮಾಡಲಾಗಿದೆ. 

ಚಾಮುಂಡಿ ಬೆಟ್ಟದ ಸಾಲಿನಲ್ಲಿ ನಿಂತವರಿಗೆ ಐದು ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ದರ್ಶನ ಪಡೆದು ಹೊರಬರುವವರಿಗೆ ಒಂದೇ ಗೇಟ್ ನಲ್ಲಿ ಬರಬೇಕು.ವಿವಿಐಪಿ ಬಂದವರು ಮಹಿಷಾಸುರನ ಬಳಿ ಇಳಿದುಕೊಂಡು ಅಲ್ಲಿಂದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪ್ರತಿ ಪಾಯಿಂಟ್ ನಲ್ಲೂ ಇನ್‌ಸ್ಪೆಕ್ಟರ್‌ಗಳು ಇರುತ್ತಾರೆ. ಅವರು ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. 2000 ರೂ. ಟಿಕೆಟ್ ತೆಗೆದುಕೊಂಡವರಿಗೆ ಪ್ರತ್ಯೇಕ ಸಾಲು ಇರುತ್ತದೆ. ಚಾಮುಂಡಿ ಬೆಟ್ಟ ಹತ್ತುವವರಿಗೆ ನಮ್ಮ ಮೈಸೂರು ಫೌಂಡೇಶನ್. ವತಿಯಿಂದ ಸಹಾಯವಾಣಿ ತೆರೆಯಲಾಗಿದೆ. ನಮ್ಮ ಮೈಸೂರು ಫೌಂಡೇಶನ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ ಶುಚಿತ್ವದ ಹೊಣೆ ಹೊತ್ತಿದ್ದಾರೆ. 

ಚಾಮುಂಡಿ ಬೆಟ್ಟ ಮೆಟ್ಟಿಲು ಹತ್ತು ಬರುವ ಭಕ್ತರಿಗಾಗಿ . 30 ರೂಪಾಯಿ ಟಿಕೆಟ್ ಕೌಂಟರ್ ಬಳಿ ಸೇರಿಸಲಾಗುತ್ತದೆ. ಅವರನ್ನು ಸಾಮಾನ್ಯ ಸರದಿಗೆ ಸೇರಿ ಅಲ್ಲಿಂದ ಅವರು ದರ್ಶನ ಪಡೆಯಬಹುದು. ಈ ಬಾರಿ ವಿಶೇಷವೆಂದರೆ. 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗಾಗಿ ಕುಂಕುಮ ಬಳೆ ಹಾಗೂ ಮಡಲಕ್ಕಿ ಪಾಕೆಟ್‌ನೀಡಲಾಗುತ್ತದೆ.2000 ಟಿಕೆಟ್ ಪಡೆದವರಿಗೆ ಒಂದು ಲೀಟರ್ ನೀರಿನ ಬಾಟಲ್, ಲಾಡು,. ಕುಂಕುಮ ಕೊಡಲಾಗುತ್ತದೆ. ವಿಶೇಷವಾಗಿ ತಯಾರಿಸಿದ ಶ್ರೀಚಕ್ರ, ಒಂದು ಗಂಡುಬೇರುಂಡ. ಕೈಗೆ ಕಟ್ಟುವ ರಕ್ಷಾದಾರ ಹಾಗೂ ಬಾಕ್ಸ್ ನೀಡಲಾಗುವುದು.ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ದಿನ ನಂದಿನಿ ಹಾಲಿನ ಡೈರಿ/fxo ಗೋದಿ ಲಡ್ಡುಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು.ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್‌ಆಯುಕ್ತರ ನೇತೃತ್ವದಲ್ಲಿ ಐದು ಭಾರಿ ಪೂರ್ವ ಸಿದ್ಧತ ಸಭೆ ನಡೆಸಲಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್‌ಬಾಟಲ್‌ಮತ್ತು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ ತರದಂತೆ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮನವಿ ಮಾಡಿದ್ದಾರೆ.

PREV
Read more Articles on

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!