ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮತಾಂಧ ಮುಸ್ಲಿಂ ಯುವಕರು ಲವ್ ಜಿಹಾದ್ ಮೂಲಕ ಹಿಂದೂಗಳನ್ನು ನಾಶಮಾಡಿ ಇಸ್ಲಾಮಿಕರಣ ಮಾಡಲು ಹೊರಟಿರುವಾಗ ರಾಜ್ಯ ಸರ್ಕಾರ ಮುಸ್ಲಿಂರನ್ನು ಓಲೈಸಿಕೊಂಡು ತುಷ್ಟೀಕರಣದ ರಾಜಕೀಯ ಮಾಡಿ, ಮತಬ್ಯಾಂಕ್ ಗಟ್ಟಿಗೊಳಿಸಲು ಈಗ ವಸತಿ ಜಿಹಾದ್ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಈ ಹಿಂದೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಿ, ಇನ್ನುಳಿದ ಧರ್ಮೀಯರಿಗೆ ಅನ್ಯಾಯಮಾಡಿದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ, ವಸತಿ ಯೋಜನೆಯಡಿ ಮುಸ್ಲಿಂರಿಗೆ ಶೇ.೧೫ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ. ಬುದ್ಧ, ಬಸವ, ಅಂಬೇಡ್ಕರ್ ಎಂದು ಬೊಗಳೆಬಿಡುವ ಸಿದ್ದರಾಮಯ್ಯ ಅಂಬೇಡ್ಕರ್‌ರವರು ವಿರೋಧಿಸಿದ್ದ ಧರ್ಮಾಧಾರಿತ ಮೀಸಲಾತಿಯನ್ನು ಅವರ ತತ್ವಕ್ಕೆ ತಿಲಾಂಜಲಿ ಇಟ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿ ಜಾರಿಗೆ ತರುವ ಮೂಲಕ ಅಂಬೇಡ್ಕರ್‌ರವರಿಗೆ ಅವಮಾನಿಸಿದ್ದಾರೆ ಎಂದು ದೂರಿದರು.ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದ ಸರ್ಕಾರ ಈಗ ಅಣ್ಣನ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತನ್ನು ಈಗ ಸರ್ವರೂ ಸಾಬರಪಾಲು ಎಂದು ನಿರೂಪಿಸಲು ಹೊರಟಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಎಂ. ಶಂಕರ್, ಇ. ವಿಶ್ವಾಸ್, ಶಿವಾಜಿ, ಜಾದವ್, ಚನ್ನಬಸಪ್ಪ, ಕುಬೇರಪ್ಪ, ಗೋವಿಂದಪ್ಪ ಇನ್ನಿತರರು ಉಪಸ್ಥಿತರಿದ್ದರು.