ಕಾರ್ಯಕರ್ತರು ಇಲ್ಲದಿದ್ದರೆ ಎಲ್ಲರೂ ಶೂನ್ಯ

KannadaprabhaNewsNetwork |  
Published : Nov 10, 2025, 01:00 AM IST
ಗೌರಿಬಿದನೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ | Kannada Prabha

ಸಾರಾಂಶ

ಕೇವಲ ನಿಮ್ಮ ಶಕ್ತಿಯಿಂದ ಪಕ್ಷ ಇರುವುದಾದರೆ ಅವಕಾಶ ಕೊಟ್ಟಾಗ ಗೆದ್ದು ತೋರಿಸಬೇಕಿತ್ತು, ಬೇರೆಯವರಿಗೆ ಅವಕಾಶ ಕೊಟ್ಟಾಗ ಅವರನ್ನು ಗೆಲ್ಲಿಸಬೇಕಿತ್ತು . ಯಾವುದೇ ಒಬ್ಬ ವ್ಯಕ್ತಿಯಿಂದ ಗೆಲುವು ಸಾಧ್ಯವಿಲ್ಲ, ಮೊದಲು ನಾನೇ ಎನ್ನುವ ಪದವನ್ನು ಬಿಟ್ಟು ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನಲ್ಲಿ ಕೆಲವರು ನಾವಿಲ್ಲದಿದ್ದರೆ ಪಕ್ಷವೇ ಇಲ್ಲ ಎನ್ನುವಂತಹ ಭಾವನೆ ಹೊಂದಿದ್ದಾರೆ, ಪಕ್ಷದ ಕಾರ್ಯಕರ್ತರನ್ನು ಚಟ್ಟಕ್ಕೆ ಹೋಲಿಸಿದ್ದಾರೆ, ನಾಯಕ ಉದ್ಭವ ಆಗುವುದಿಲ್ಲ, ಕಾರ್ಯಕರ್ತರು ಇಲ್ಲದಿದ್ದರೆ ಎಲ್ಲರೂ ಶೂನ್ಯ ಎಂದು ರವಿನಾರಾಯಣ ರೆಡ್ಡಿ ವಿರುದ್ದ ಬಿಜೆಪಿ ತಾಲೂಕು ಅಧ್ಯಕ್ಷ ರಮೇಶ್ ರಾವ್ ಶೆಲ್ಕೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಗರದ ಶನಿಮಹಾತ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅವಿವೇಕಿ ಹಿಂಬಾಲಕರು ಮಾಡುತ್ತಿರುವ ಪಿತೂರಿಯಿಂದ ವೇದಿಕೆ ಮೇಲೆ ನೀವು ಮಾತನಾಡುತ್ತೀರಿ. ಅದು ಸರಿಯಲ್ಲಿ ಎಂದರು.

ಕೊಟ್ಟ ಅವಕಾಶ ಬಳಸಿಕೊಳ್ಳಲಿಲ್ಲ

ಕೇವಲ ನಿಮ್ಮ ಶಕ್ತಿಯಿಂದ ಪಕ್ಷ ಇರುವುದಾದರೆ ಅವಕಾಶ ಕೊಟ್ಟಾಗ ಗೆದ್ದು ತೋರಿಸಬೇಕಿತ್ತು, ಬೇರೆಯವರಿಗೆ ಅವಕಾಶ ಕೊಟ್ಟಾಗ ಅವರನ್ನು ಗೆಲ್ಲಿಸಬೇಕಿತ್ತು . ಯಾವುದೇ ಒಬ್ಬ ವ್ಯಕ್ತಿಯಿಂದ ಗೆಲುವು ಸಾಧ್ಯವಿಲ್ಲ, ಮೊದಲು ನಾನೇ ಎನ್ನುವ ಪದವನ್ನು ಬಿಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಮಾತನಾಡಿ, ಇತ್ತೀಚೆಗೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆ ಮಾನ್ಯತೆ ಪಡೆಯದ ಸಭೆ. ಅವರು ಬಿಜೆಪಿ ಪಕ್ಷದ ಬ್ಯಾನರ್ ಹಾಕಿ ಸಭೆ ನಡೆಸಿದ್ದಾರೆ. ತಾಲೂಕಿನಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದಾಗಿನಿಂದ ಕೈ ಹಿಡಿದು ನಡೆಸಿದ್ದು ಬಿಜೆಪಿ ಪಕ್ಷ, ಆದರೆ ಈಗ ಅವರಿಗೆ ಬೇಡವಾಗಿದೆ ಎಂದರು.

ಯಾವುದೇ ಹುದ್ದೆಗೆ ಆಸೆಪಟ್ಟಿಲ್ಲ

ಬಿಜೆಪಿ ಮುಖಂಡ ಮಾರ್ಕೆಟ್ ಮೋಹನ್ ಮಾತನಾಡಿ, ತಾಲೂಕಿನಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕಾಗಲಿ ಹುದ್ದೆಗಳಿಗಾಗಲಿ ಹೋರಾಟ ಮಾಡುತ್ತಿಲ್ಲ, ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ, ಯಾವುದೇ ಹುದ್ದೆ ನೀಡದೆ ಇದ್ದರೂ ಸಹ ದೇಶಕ್ಕಾಗಿ ಎಲ್ಲಾ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದೇವೆ. ಪಕ್ಷ ನೀಡಿದ ಕೆಲಸವನ್ನು ಸಾಮಾನ್ಯ ಕಾರ್ಯಕರ್ತರಂತೆ ಹೆಮ್ಮೆಯಿಂದ ಮಾಡಿದ್ದೇನೆ, ನಾವು ಯಾವುದೇ ಹುದ್ದೆಬೇಕೆಂದು ಅಪೇಕ್ಷೆ ಪಟ್ಟಿಲ್ಲ. ಅವರು ನೀಡಿದರೆ ಯಾವುದೇ ಜವಾಬ್ದಾರಿ ನಿಭಾಯಿಸುತ್ತೇವೆ ಎಂದರು.

ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ

ಸಕ್ರಿಯ ಕಾರ್ಯಕರ್ತರೆ ಪಕ್ಷದ ಜೀವಾಳ, ಕೆಲವರಿಗೆ ಪಕ್ಷ ಬೇಕಿಲ್ಲ, ಬೂತ್ ಮಟ್ಟದಲ್ಲಿ ಲೀಡ್ ನೀಡಲು ಆಗದೆ ಇರುವವರು ಸಹ ನಾಯಕರಂತೆ ಬಿಂಬಿಸಿಕೊಳ್ಳುತ್ತಾರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ, ಎಂದು ಪಕ್ಷದ ಬಿಜೆಪಿ ಮುಖಂಡ ಕೋಡಿರ್ಲಪ್ಪ ಹೇಳಿದರು.ಇದೇ ಸಂದರ್ಭದಲ್ಲಿ ಹರೀಶ್, ವೇಣು ಮಾಧವ್, ಸತೀಶ್, ರಾಮಕೃಷ್ಣ ರೆಡ್ಡಿ, ಮಧು ಸೂರ್ಯ ನಾರಾಯಣ ರೆಡ್ಡಿ, ಸತೀಶ್,ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್