ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮನುಷ್ಯನ ದೇಹ ಸೇರಿದಂತೆ ಯಂತ್ರೋಪಕರಣಗಳು, ವಸ್ತುಗಳನ್ನು ಸರಿಯಾಗಿ ಬಳಸದಿದ್ದರೆ ಹೇಗೆ ಹಾಳಾಗುತ್ತವೆಯೋ ಹಾಗೆಯೇ ಮಾತೃ ಭಾಷೆಯನ್ನು ನಿರಂತರವಾಗಿ ಬಳಕೆ ಮಾಡದೇ ಹೋದಲ್ಲಿ ಹಾಳಾಗುತ್ತದೆ. ಆದ್ದರಿಂದ ಪ್ರತಿಯೊಂದರ ಬಳಕೆಯ ಜತೆಗೆ ಹೃದಯಾಂತರಾಳದಿಂದ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಧನಶೇಖರ್ ಅಭಿಪ್ರಾಯಪಟ್ಟರು.
ಡಾ. ನಟರಾಜ್ ಅವರು ರಾಜ ಮಯೂರವರ್ಮ ಅವರ ವೇಷಭೂಷಣ ತೊಟ್ಟು ವಿಶೇಷವಾಗಿ ಆಕರ್ಷಣಿಯವಾಗಿ ಕಂಡರು. ಜತೆಗೆ ಪ್ರಾಸ್ತವಿಕ ನುಡಿಯಲ್ಲಿ ಕನ್ನಡದ ಇತಿಹಾಸ, ಕನ್ನಡ ಏಕೀಕರಣ, ಧ್ವಜದ ಮಹತ್ವ, ಜ್ಞಾನಪೀಠ ಪ್ರಶಸ್ತಿ ಹಾಗೂ ಇತರೆ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿ, ಅಭಿನಂದನೆಗೆ ಪಾತ್ರರಾದರು. ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಸಂಬಂಧಿಸಿದಂತೆ ನಡೆದ ಹಲವಾರು ಸ್ಪರ್ಧೆಗಳ ವಿಜೇತರಿಗೆ, ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಹೆಚ್ಚು ಬಹುಮಾನಗಳನ್ನು ಪಡೆದ ಅಣ್ಣೇಗೌಡ, ಡಾ.ಪ್ರತಿಭಾ ಹಾಗೂ ಪೂರ್ಣಿಮಾ ವರ್ಷದ ಕನ್ನಡಿಗ ಹಾಗೂ ಕನ್ನಡತಿ ಪ್ರಶಸ್ತಿ ಪಡೆದರು. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಡಾ. ರಾಜಣ್ಣ ಬಿ. ಮೈಸೂರು ವಿಭಾಗೀಯ ಜಂಟಿ ನಿರ್ದೇಶಕಿ ಡಾ. ಮಲ್ಲಿಕಾ, ಆಡಳಿತ ವ್ಯದ್ಯಾಧಿಕಾರಿ ಡಾ. ನಾಗೇಂದ್ರ, ಡಾ. ವಿಜಯಕುಮಾರ್, ಕಸಾಪ ತಾ. ಅಧ್ಯಕ್ಷ ಪುಟ್ಟೇಗೌಡ, ಶುಶ್ರೂಷಕ ಅಧೀಕ್ಷಕಿ ಮೀನಾಕ್ಷಿ ಎಂ.ಪಿ., ಸಹಾಯಕ ಆಡಳಿತಾಧಿಕಾರಿ ಚಿನ್ನಮ್ಮ ಎಸ್, ಇತರರು ಮಾತನಾಡಿದರು.
ಸರ್ಜನ್ ಡಾ. ವಿನಯ್ ಕುಮಾರ್ ಸ್ವಾಗತಿಸಿದರು, ಶುಶ್ರೂಷಕ ಅಧೀಕ್ಷಕ ಗ್ರೇಡ್-೨ ರವೀಂದ್ರ ಕುಮಾರ್ ವಂದಿಸಿದರು, ದಂತ ವೈದ್ಯೆ ಡಾ. ಅಶ್ವತಿ ಹಾಗೂ ಕಚೇರಿ ಅಧೀಕ್ಷಕ ಅಣ್ಣೇಗೌಡ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಡಾ. ಎಸ್ ಎಲ್ ಬೈರಪ್ಪ ಹಾಗೂ ಸಾಲುಮರದ ತಿಮ್ಮಕ್ಕ ಅವರಿಗೆ ಒಂದು ನಿಮಿ? ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.ಡಾ. ದಿನೇಶ್, ಡಾ. ಸತ್ಯಪ್ರಕಾಶ್, ಡಾ. ಅಜಯ್ ಕುಮಾರ್, ಡಾ. ಶ್ರೀನಿವಾಸ್, ಡಾ. ಲೋಕೇಶ್, ಡಾ. ಸತೀಶ್, ಡಾ. ಅನಿತಾ, ಡಾ. ಭವ್ಯ, ಡಾ.ರೇಖಾ, ಡಾ. ಬಾಲಕೃಷ್ಣ, ಡಾ. ಶ್ರೇಯಾ, ಡಾ. ಸಂದೀಪ್ ಗೌಡ, ಡಾ. ಸುಜನ್, ಜಗದೀಶ್, ಬಾನುಶ್ರೀ, ಸ್ವಾಮಿ, ಕೇಶವ ಪ್ರಸಾದ್, ಇತರರು ಇದ್ದರು.