ಶ್ರದ್ಧೆಯಿಲ್ಲದಿರೆ ಜ್ಞಾನ ವೃದ್ಧಿಯಾಗುವುದಿಲ್ಲ: ರಮೇಶ್ ಬೊಂಗಾಳೆ

KannadaprabhaNewsNetwork |  
Published : Jan 06, 2026, 01:30 AM IST
ಕಳಸಾಪುರದ ಸ.ಪ.ಪೂ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಚಿಕ್ಕಮಗಳೂರಿನ ಉಪನ್ಯಾಸಕಿ ಜಿ.ಬಿ. ಸುಕನ್ಯ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರುಈಗಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಸ್ನೇಹಿಯಾಗಿದ್ದರೂ ಶ್ರದ್ಧೆ ಇಲ್ಲದಿದ್ದರೆ ಜ್ಞಾನವೃದ್ಧಿಯಾಗುವುದಿಲ್ಲ. ಏಕಾಗ್ರತೆಯಿಂದ ಆಸಕ್ತಿಯನ್ನು ಕಾಪಾಡಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಚಿಕ್ಕಮಗಳೂರಿನ ವಾಸವಿ ವಿದ್ಯಾ ಸಂಸ್ಥೆ ಶಿಕ್ಷಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿ ಸದಸ್ಯ ರಮೇಶ್ ಬೊಂಗಾಳೆ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಈಗಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಸ್ನೇಹಿಯಾಗಿದ್ದರೂ ಶ್ರದ್ಧೆ ಇಲ್ಲದಿದ್ದರೆ ಜ್ಞಾನವೃದ್ಧಿಯಾಗುವುದಿಲ್ಲ. ಏಕಾಗ್ರತೆಯಿಂದ ಆಸಕ್ತಿಯನ್ನು ಕಾಪಾಡಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಚಿಕ್ಕಮಗಳೂರಿನ ವಾಸವಿ ವಿದ್ಯಾ ಸಂಸ್ಥೆ ಶಿಕ್ಷಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿ ಸದಸ್ಯ ರಮೇಶ್ ಬೊಂಗಾಳೆ ಹೇಳಿದರು.ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕ್ರೀಡಾ, ಸಾಂಸ್ಕೃತಿಕ ಸಂಘಗಳು, ಇಎಲ್‌ಸಿ ಹಾಗೂ ಇಕೋ ಕ್ಲಬ್‌ಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆತ್ಮವಿಶ್ವಾಸದಿಂದ ಸ್ವಯಂ ಶಕ್ತಿಯಾಗಿ ಬೆಳೆಯಲು ಎಲ್ಲರಿಗೂ ಸಾಧ್ಯವಿದೆ. ಆದರೆ, ಅದಕ್ಕೆ ಸತತ ಸಾಧನೆ ಬೇಕು. ಪ್ರಕೃತಿಯಲ್ಲಿ ಹೇಗೆ ಪ್ರತಿ ಜೀವಿಗೂ ಬದುಕುವ ಅವಕಾಶ ವಿದೆಯೋ ಹಾಗೇ ಪ್ರತಿ ಮನುಷ್ಯರಿಗೂ ತಮ್ಮ ಎಲ್ಲಾ ಪ್ರತಿಭೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಶಾಲಾ ಶಿಕ್ಷಣ ಮಾತ್ರ ವಿದ್ಯೆಯಲ್ಲ. ನಮ್ಮ ಪ್ರತಿಯೊಂದು ಚಟುವಟಿಕೆಗಳೂ ವಿದ್ಯೆಯೆ. ಇದನ್ನು ಅರ್ಥ ಮಾಡಿಕೊಂಡಾಗ ಜೀವನ ಸಮಾಜ ಮುಖಿಯಾಗುತ್ತದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕಿ ಜಿ.ಬಿ.ಸುಕನ್ಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಶಾಂತತೆಯೇ ವರದಾನ. ಇಲ್ಲಿ ಬೇರಾವ ಚಟುವಟಿಕೆಗಳಿಗೂ ಅವಕಾಶವಿಲ್ಲ. ವಿದ್ಯೆ ಕಲಿಯಲು ಪೂರಕ ವಾತಾವರಣ, ಬೆಂಬಲಿಸಿ ಹರಸುವ ಉಪನ್ಯಾಸಕ ವೃಂದ ಕಳಸಾಪುರದಲ್ಲಿದೆ. ಯೋಜನೆ ರೂಪಿಸಿಕೊಂಡು ವೇಳಾ ಪಟ್ಟಿ ಮಾಡಿಕೊಂಡು ಕಲಿತರೆ, ಇಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯುವುದು ಕಷ್ಟವೇನಲ್ಲ ಎಂದರು. ಉಪನ್ಯಾಸಕ ಶಾಂತಕುಮಾರ್ ಮಾತನಾಡಿ, ಕಳಸಾಪುರದ ಸ.ಪ.ಪೂ ಕಾಲೇಜಿನಲ್ಲಿ ಮನೆ ವಾತಾವರಣವಿದೆ. ಇಲ್ಲಿನ ವಿದ್ಯಾರ್ಥಿಗಳು ನಾಡಿನ ವಿವಿಧೆಡೆ ಗೌರವ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು. ಉಪನ್ಯಾಸಕ ರಾಜೇಶ್, ಹೊನ್ನಪ್ಪ, ಕಾವ್ಯ ಎಸ್.ಕುಮಾರ್, ಗೀತಾ ದೀಪಕ್, ವಿ.ಜೆ. ಸರಿತಾ, ಸುಗಂಧ ಕುಮಾರ್ ಉಪಸ್ಥಿತರಿದ್ದರು. ಮಧುರ ಸ್ವಾಗತಿಸಿದರು. ಭುವನ್, ಚಂದನ್ ನಿರೂಪಿಸಿದರು. ಧನ್ಯಶ್ರೀ ವಂದಿಸಿದರು. 5 ಕೆಸಿಕೆಎಂ 2ಕಳಸಾಪುರದ ಸ.ಪ.ಪೂ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಚಿಕ್ಕಮಗಳೂರಿನ ಉಪನ್ಯಾಸಕಿ ಜಿ.ಬಿ. ಸುಕನ್ಯ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ