ಹಮಾಲಿಗಾರರು ಇಲ್ಲದಿದ್ದರೆ ವ್ಯಾಪಾರ ಸ್ತಬ್ದ

KannadaprabhaNewsNetwork |  
Published : May 02, 2025, 12:12 AM IST
ಸಿಕೆಬಿ-6 ಎಪಿಎಂಸಿ ಹಮಾಲಿ ಕಾರ್ಮಿಕ ಸಂಘದಿಂದ ಕಾರ್ಮಿಕ ದಿನಾಚರಣೆಯಲ್ಲಿ ಕಾರ್ಮಿಕರನ್ನು ಸನ್ಮಾನಿಸಿದರು | Kannada Prabha

ಸಾರಾಂಶ

ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿಗಾರರು ಇಲ್ಲದೆ ಹೋದರೆ ವ್ಯಾಪಾರವೆಲ್ಲವೂ ಸ್ತಬ್ದವಾಗಲಿದೆ ಎಂದು ವರ್ತಕ ಎಸ್ ವಿ ಟಿ ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿಗಾರರು ಇಲ್ಲದೆ ಹೋದರೆ ವ್ಯಾಪಾರವೆಲ್ಲವೂ ಸ್ತಬ್ದವಾಗಲಿದೆ ಎಂದು ವರ್ತಕ ಎಸ್ ವಿ ಟಿ ಸುರೇಶ್ ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಎಪಿಎಂಸಿ ಹಮಾಲಿ ಕಾರ್ಮಿಕ ಸಂಘದಿಂದ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಸುಮಾರು 60 ರಿಂದ 70 ಜನ ಕೆಲಸ ಮಾಡುತಿದ್ದಾರೆ ಅವರೆಲ್ಲರೂ ವಸತಿ ರಹಿತರಾಗಿದ್ದಾರೆ ಬಾಡಿಗೆ ಮನೆಗಳಲ್ಲಿ ಕೆಲಸ ಮಾಡುತಿದ್ದಾರೆ ಅವರಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕೆಂದು ಶಾಸಕ ಪ್ರದೀಪ್ ಈಶ್ವರ್ ಗೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗಭೂಷಣ್ ಮೂಲಕ ಅವರಿಗೆ ಮನವಿ ಪತ್ರವನ್ನೂ ಸಲ್ಲಿಸುತ್ತಿದ್ದೇವೆ ಎಂದರು. ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗಬೂಷಣ್ ಮಾತನಾಡಿ, ದಿನಪೂರ್ತಿ ಕೆಲಸ ಮಾಡಿ ದಣಿವಾರಿಸಿಕೊಳ್ಳಲು ಬಿಡುವಿಲ್ಲದೆ ದುಡಿಸಿಕೊಳ್ಳುತಿದ್ದ ಕಾರ್ಮಿಕರಿಗೆ ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡುವಂತೆ ಘೋಷಿಸಿದ ದಿನ ಕಾರ್ಮಿಕ ದಿನ ಎಂದರು

ಕಾರ್ಮಿಕ ದಿನಾಚರಣೆಗಾಗಿ ಇಂದು ಎಪಿಎಂಸಿ ಮಾರುಕಟ್ಟೆಗೆ ರಜಾ ಘೋಷಿಸಿದ್ದರು. ತಮ್ಮ ಹಬ್ಬ ಆಚರಣೆಗೆ ದುಡಿದು ದುಡಿದು ಸುಸ್ತಾಗುತಿದ್ದ ಎಲ್ಲ ಕಾರ್ಮಿಕರು ಖುಷಿಖುಷಿಯಾಗಿ ಒಂದೆಡೆ ಸೇರಿ ಮೆರವಣಿಗೆ ಮಾಡಿ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ವರ್ತಕರ ಮುಖಂಡರು ಆಗಿರುವ ಎಸ್ ವಿ ಟಿ ಸುರೇಶ್ ಗೆ ಮಹಿಳಾ ಕಾರ್ಮಿಕರು ಸನ್ಮಾನಿಸಿದರೆ, ಸುರೇಶ್ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿ ಖುಷಿಪಡಿಸಿದರು.

ಈ ಸಂಧರ್ಭದಲ್ಲಿ ಹಮಾಲಿಗಾರರ ಕಾರ್ಮಿಕ ಸಂಘದ ಅಧ್ಯಕ್ಷ ಕೃಷ್ಣಪ್ಪ, ತೆಂಗಿನ ಕಾಯಿ ವ್ಯಾಪಾರಿ ಮುನಿರಾಜು, ತರಕಾರಿ ಮಂಡಿ ಮಾಲೀಕ ಗೋವರ್ದನ್,ಸರ್ಕಾರಿ ನೌಕರರ ಸಂಘದ ಮುಖಂಡ ಶಿಕ್ಷಕ ಕೆ.ಜಿ.ಶ್ರೀನಿವಾಸ್, ಮಂಜುನಾಥ್, ಕಾರ್ಮಿಕ ಸಂಘದ ಪದಾದಿಕಾರಿಗಳು, ಕಾರ್ಮಿಕರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ