ಕನ್ನಡಪ್ರಭ ವಾರ್ತೆ ವಿಜಯಪುರ
ಪಟ್ಟಣದ ಗಾಂಧಿಚೌಕದಲ್ಲಿರುವ ಮಹಂತಿನ ಮಠದಲ್ಲಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಡೆಯರ್ ಆಡಳಿತ ದಾರಿಯು ಎಲ್ಲಾ ಕಾಲದಲ್ಲೂ ಜನರ ಪರವಾಗಿ, ಅಭಿವೃದ್ಧಿಯ ಪರವಾಗಿ, ಮಾನವನ ಸಂಪನ್ಮೂಲ ಮನರಂಜನೆ ಮತ್ತು ಅದರ ಸದುಪಯೋಗಕ್ಕಾಗಿ ತಮ್ಮ ಆಡಳಿತದಲ್ಲಿ ದೊಡ್ಡ ಶಕ್ತಿಯಾಗಿ ದೇಶದ ಮುಂದೆ ಕಾಣಿಸುತ್ತಿದ್ದರು. ಬುದ್ಧ ಹೇಳಿರುವಂತೆ ನಿನಗೆ ನೀನೆ ಗುರು ನಿನಗೆ ನೀನೆ ಬೆಳಕು ಎಂಬುವಂತೆ ನಮಗೆ ಶಿಕ್ಷಣ ಬೇಕೇ ಬೇಕು ಎಂದು ಶಿಕ್ಷಣಕ್ಕೆ ಮಹತ್ವ ನೀಡಿದವರು ಎಂದು ತಿಳಿಸಿದರು.
ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು:ಮೈಸೂರಿನ ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ನಮ್ಮ ಕಣ್ಮುಂದೆ ಇದೆ. ದಲಿತರು, ಹಿಂದುಳಿದವರು, ಮಹಿಳೆಯರು ಎಲ್ಲರಿಗೂ ಶಿಕ್ಷಣವು ಸಿಗಬೇಕು ಎನ್ನುವ ಸಲುವಾಗಿ ಶಿಕ್ಷಣದ ಮಹತ್ವದ ಬಗ್ಗೆ ಅವರು ನಿಲುವನ್ನು ಪಡೆದರು. ಶಿಕ್ಷಣದ ಬಗ್ಗೆ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತನ್ನು ಕೊಟ್ಟು ಸಮಾಜವನ್ನು ಆರೋಗ್ಯವಾಗಿ ಇಡುವುದರ ಜೊತೆಗೆ ಎಲ್ಲರ ಸಹಭಾಗಿತ್ವವನ್ನು ಬಯಸುವಂತಹ ಒಬ್ಬ ಶ್ರೇಷ್ಠ ರಾಜನಾಗಿದ್ದರು ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಮೈಸೂರು ಎಂದರೆ ಸ್ವತಂತ್ರ ಬರುವುದಕ್ಕಿಂತ ಮುಂಚೆ ಕತ್ತಲಲ್ಲಿ ಇದ್ದರೂ, ನಾಗರಿಕತೆಯ ಗುಣಲಕ್ಷಣಗಳು ಅಷ್ಟಾಗಿ ಗೊತ್ತಿರಲಿಲ್ಲ. ಶಿಕ್ಷಣ ಇರಲಿಲ್ಲ, ಅಸಮಾನತೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯಗಳು, ದೇವದಾಸಿ ಪದ್ಧತಿ ಜೀವಂತವಾಗಿದ್ದ ಕಾಲವಾಗಿತ್ತು. ಆದರೂ ನಾವು ಏಷ್ಯಾದಲ್ಲಿ ಮೊದಲನೆಯ ರಾಜ್ಯ ಹೈಡೋ ಎಲೆಕ್ಟ್ರಾನಿಕ್‌ನಿಂದ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವಂತದ್ದು, ಇಡೀ ಏಷ್ಯಾ ಖಂಡದಲ್ಲಿ ಮೈಸೂರಲ್ಲಿ ಮೊದಲಿಗೆ ಬೀದಿ ದೀಪವನ್ನು ಆಳವಡಿಸಲಾಯಿತು ಎಂದು ತಿಳಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಚಿ.ಮಾ.ಸುಧಾಕರ್, ಪುರಸಭೆ ಸದಸ್ಯ ಬೈರೇಗೌಡ, ರಾಮು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಹಡಪದ್, ಕಸಾಪ ಸದಸ್ಯರಾದ ಮುನಿರಾಜು, ವಿ.ವಿಶ್ವನಾಥ್, ಪರಮೇಶ್, ಮುರಳಿ ಮಗು , ಮಂಜುನಾಥ್, ಪ್ರಕಾಶ್ ಇದ್ದರು.