ತ್ಯಾಗ ಬಲಿದಾನಕ್ಕೆ ಮಹಿಳೆಯರು ಆದರ್ಶಪ್ರಾಯ: ಸುಧಾ ಕಲ್ಯಾಣ್‌

KannadaprabhaNewsNetwork | Published : Mar 8, 2024 1:48 AM

ಸಾರಾಂಶ

ದೇಶ ಮತ್ತು ಧರ್ಮ ರಕ್ಷಣೆಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರು ತ್ಯಾಗ ಬಲಿದಾನಗಳನ್ನು ಮಾಡುವುದರ ಮೂಲಕ‌ ಆದರ್ಶ ಪ್ರಾಯರಾಗಿದ್ದಾರೆ ಎಂದು ಬಿಜೆಪಿ ನಗರ ಮಹಿಳಾ ಮೋರ್ಚ ಅಧ್ಯಕ್ಷೆ ಸುಧಾ ಕಲ್ಯಾಣ್ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ದೇಶ ಮತ್ತು ಧರ್ಮ ರಕ್ಷಣೆಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರು ತ್ಯಾಗ ಬಲಿದಾನಗಳನ್ನು ಮಾಡುವುದರ ಮೂಲಕ‌ ಆದರ್ಶ ಪ್ರಾಯರಾಗಿದ್ದಾರೆ ಎಂದು ಬಿಜೆಪಿ ನಗರ ಮಹಿಳಾ ಮೋರ್ಚ ಅಧ್ಯಕ್ಷೆ ಸುಧಾ ಕಲ್ಯಾಣ್ ಕುಮಾರ್‌ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗ್ರಾಮಾಂತರ ಮತ್ತು ನಗರ ಮಹಿಳಾ ಮೋರ್ಚಾದ ಸಂಯುಕ್ತಾಶ್ರಯದಲ್ಲಿ ನಾರಿ ಶಕ್ತಿ- ರಾಷ್ಟ್ರ ಶಕ್ತಿ ಕಾರ್ಯಕ್ರಮವನ್ನು ಎಲ್.ಇ.ಡಿ ಸ್ಕ್ರೀನ್ ಮುಖಾಂತರ ವೀಕ್ಷಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ವರ್ಷಗಳಲ್ಲಿ ನರೇಂದ್ರ ಮೋದಿ ಕೇಂದ್ರ ಸರ್ಕಾರವು ಅರ್ಥಿಕ ಭದ್ರತೆ ನೀಡುವುದರ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ.

ಬೇಟಿ ಬಚಾವೋ ಬೇಟಿ ಪಡಾವೋ, ಆತ್ಮ ನಿರ್ಭರ್, ಸಶಸ್ತ್ರ ಪಡೆಯಲ್ಲಿ ಮೀಸಲು, ಮಹಿಳೆಯರ ನ್ಯಾಯ ಹೋರಾಟಕ್ಕಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪನೆ, ಅಪ್ರಾಪ್ತ ಬಾಲಕಿಯರ ರಕ್ಷಣೆ, ಸಂರಕ್ಷಿತ ಮತ್ತು ಸ್ವಾಸ್ಥ್ಯ ಮಾತೃತ್ವ, ವಿದ್ಯಾಲಯ ಮತ್ತು ವಿದ್ಯಾರ್ಥಿನಿಯರ ಅಭಿವೃದ್ಧಿಗಾಗಿ, ಮಹಿಳಾ ಉದ್ಯಮಿಗಳಿಗಾಗಿ ಆತ್ಮ ವಿಶ್ವಾಸವೃದ್ಧಿಗಾಗಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೂಲಕ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮಹಿಳೆಯರಿಂದ ಸ್ಥಳಿಯವಾಗಿ ಉತ್ಪನ್ನವಾಗುವ ಪದಾರ್ಥಗಳಿಗೆ ಉತ್ತೇಜಿಸುವ ಮೂಲಕ‌ ಅರ್ಥಿಕ ಸಧೃಡತೆ ತಂದುಕೊಡಲಾಗುತ್ತಿದ್ದು, ಕಟ್ಟ ಕಡೆಯ ಕುಗ್ರಾಮಗಳಿಗೂ ಮೋದಿಯವರ ಯೋಜನೆಗಳು ತಲುಪುವಂತಾಗಲು ಪ್ರತಿ ಕಾರ್ಯಕರ್ತರು ಶ್ರಮ ವಹಿಸಬೇಕಿದೆ ಎಂದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುರುಷೋತ್ತಮ‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾರಿ ಶಕ್ತಿ ಎಂಬುದು ಸನಾತನ ಧರ್ಮದಲ್ಲಿ ತನ್ನದೇ ಪಾತ್ರವನ್ನು ವಹಿಸುತ್ತಿದೆ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಅರ್ಥಿಕ ಕ್ಷೇತ್ರದಲ್ಲೂ ಮುಂಚೂಣಿಗೆ ಬರುತ್ತಿದ್ದಾರೆ. ಈ ಬೆಳವಣಿಗೆಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಸಾಧನೆ ಮತ್ತು ಮಹಿಳೆಯರಿಗಾಗಿ ರೂಪಿಸಿದ ಯೋಜನೆಗಳು ಮೂಲ ಕಾರಣವಾಗಿವೆ. ಈ ದೇಶದ ಬಹುತೇಕ ಎಲ್ಲ ವರ್ಗಗಳ ಹೆಣ್ಣು ಮಕ್ಕಳಿಗೆ ನೀಡುರುವ ವಿಶೇಷ ಆದ್ಯತೆಗಳು ದೇಶ ವಿದೇಶಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಮುಂಬರುವವೆಂಪಿ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೋಟ್ಯಾಂತರ ಮಹಿಳೆಯರು ನರೇಂದ್ರ ಮೋದಿಯವರನ್ನು 400 ಸ್ಥಾನಗಳಿಗೂ ಹೆಚ್ಚು ಬಲಪಡಿಸಬೇಕು ಎಂದು ತೀರ್ಮಾನಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮಹಿಳಾ ಮೋರ್ಚ ಕಾರ್ಯಕರ್ತರು ತಾಲೂಕಿನ ಮನೆ ಮನೆ ತಲುಪಿ ಮತ ಕೇಳಬೇಕು. ದೇಶದ ಉಳಿವಿಗಾಗಿ ಸುಭದ್ರತೆಗಾಗಿ ಭಯೋತ್ಪಾದನೆಯ ನಿರ್ಣಾಮಕ್ಕಾಗಿ ಹಿಂದುತ್ವದ ಉಳಿವಿಗಾಗಿ ಪಕ್ಷಕ್ಕೆ ಮತ ನೀಡಲು ಮತದಾರರಿಗೆ ಪ್ರೇರೇಪಿಸಬೇಕು ಎಂದರು. ಹೋಕಲ್ ಫಾರ್ ಲೋಕಲ್ ವಸ್ತು ಉತ್ಪಾದನೆಯಲ್ಲಿ ಸಾಧನೆ ಮಾಡುವುದರ ಮೂಲಕ ಡಾಕ್ಟರೇಟ್ ಪಡೆದ ಉದ್ಯಮಿ ರತ್ನಮ್ಮ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಮ್ಮ ಮಾತನಾಡಿದರು. ನಗರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ವಿಜಯಕುಮಾರ್ ಅಣ್ಣಾಯಕನಹಳ್ಳಿ , ಅವಿನಾಶ್ ನಾಯ್ಡು, ಸುನೀಲ್ ಶಾಸ್ತ್ರೀ ಹಾಗೂ ಮತ್ತಿತರರು ಭಾಗವಹಿಸಿದ್ದರು.

Share this article