ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ವರ್ತಕರ ಭವನದಲ್ಲಿ ಪ್ರದೇಶ ಮಟ್ಟದ ಒಕ್ಕೂಟಗಳು (ಡೇ-ನಲ್ಮ್) ನಗರಸಭೆ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷ ನವೆಂಬರ್ ತಿಂಗಳನ್ನು ಕನ್ನಡ ತಿಂಗಳು ಎಂದು ಇಡೀ ಕನ್ನಡಿಗರೆಲ್ಲ ಮನಮನೆಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಹಾಗೆಯೇ ಮಾರ್ಚ್ ತಿಂಗಳನ್ನು ಮಹಿಳಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಎಲ್ಲ ಮಹಿಳೆಯರನ್ನು ಒಂದು ಕಡೆ ಸೇರಿಸಿ ಮಹಿಳೆಯರನ್ನು ಕರಿತು ಮಾತನಾಡುತ್ತೇವೆ. ಮಹಿಳೆಯರ ಶಕ್ತಿ ಈ ಜಗತ್ತಿನ ಶಕ್ತಿ. ಎಲ್ಲಿ ಮಹಿಳೆಯರ ಮುಖದಲ್ಲಿ ನಗು, ಸಂತಸ, ಸೋಜಿಗ, ಸಂಭ್ರಮ ಕಾಣತ್ತೋ ಆದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಅದು ಇವತ್ತು ಇಲ್ಲಿ ನಮಗೆ ಭಾಸವಾಗುತ್ತಿದೆ ಎಂದು ಹೇಳಿದರು. 1910ರಲ್ಲಿ ಅಮೆರಿಕ ದೇಶದಲ್ಲಿ ಕಾರ್ಮಿಕ ಒಕ್ಕೂಟದ ಮೂಲಕ ಮಹಿಳಾ ಹೋರಾಟ ಆರಂಭಾಯಿತು. ಮಹಿಳೆಯರ ಸಬಲೀಕರಣ ಆಗಬೇಕು ಎಂಬ ವಿಚಾರವನ್ನಿಟ್ಟುಕೊಂಡು 1975ರಲ್ಲಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾರಿಗೆ ತಂದಿದ್ದು, ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಇಡೀ ಮಾರ್ಚ್ ತಿಂಗಳಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿಕೊಂಡು ಬರುತ್ತಿವೆ ಎಂದು ಹೇಳಿದರು.ಬಸವರಾಜೇಂದ್ರ ಆಸ್ಪತ್ರೆ ಸ್ತ್ರೀರೋಗ ತಜ್ಞರಾದ ಡಾ. ಶ್ವೇತಾ ಶಶಿಧರ್ ಮಾತನಾಡಿ, ಮಹಿಳಾ ದಿನಾಚರಣೆ ಮಾರ್ಚ್ ಒಂದು ತಿಂಗಳಲ್ಲ, ಪ್ರತಿ ದಿನವು ಮಹಿಳಾ ದಿನಾಚರಣೆಯಾಗಬೇಕು. ಮಹಿಳೆ ಇಲ್ಲದೆ ಬಾಳು ಇಲ್ಲ. ಮಹಿಳೆ ಇದ್ದರೆ ಎಲ್ಲವೂ ಸಾಕಾರವಾಗುತ್ತದೆ. ಇಡೀ ಸಂಸಾರ ಆಧರಿತವಾಗಿರುವುದು ಹೆಣ್ಣಿನಿಂದ. ಹೆಣ್ಣು ಇದ್ದರೆ ಇಡೀ ಸಂಸಾರದ ಕಣ್ಣು ಆಗುತ್ತಾಳೆ. ಹೆಣ್ಣು ಇಲ್ಲದಿದ್ದರೆ ಇಡೀ ಸಂಸಾರವೇ ಅಸ್ತವ್ಯಸ್ತವಾಗುತ್ತದೆ ಎಂದು ಹೇಳಿದರು.
ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಸುರೇಖಾ, ಕಾರ್ಯಪಾಲಕ ಅಭಿಯಂತರಾದ ರೂಪಾ, ಸಿಪಿಆರ್ ಗಳಾದ ಜ್ಯೋತಿ, ನರ್ಗೀಸ್ ಭಾನು, ರೂಪ ಅವರನ್ನು ಸನ್ಮಾನಿಸಲಾಯಿತು.
31ಸಿಎಚ್ಎನ್14
---------
ಚಾಮರಾಜನಗರದ ವರ್ತಕರ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.