ಸಂಡೂರು: ಮಹಿಳೆಯರು ಸಹನಶೀಲರು, ಕೆಚ್ಚೆದೆಯ ಹೋರಾಟಗಾರರು, ಸಾಧಕರು ಎಂದು ಹೊಸಪೇಟೆಯ ವಿಜಯನಗರ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ.ಮೀನಾಕ್ಷಿ ಜಂಗಮನಿ ತಿಳಿಸಿದರು.
ಮಹಾ+ ಇಳೆ= ಮಹಿಳೆ. ಅಂದರೆ ಭೂಮಿಯಷ್ಟೇ ಮಹಿಳೆ ಸಹನಶೀಲಳು ಹಾಗೂ ತ್ಯಾಗಮಯಿ ಹಾಗೂ ಸಾಧಕರು ಎಂಬುದನ್ನು ಅವರು ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ಸುಧಾಮೂರ್ತಿ ಮುಂತಾದ ಮಹಿಳೆಯರ ಉದಾಹರಣೆಯೊಂದಿಗೆ ವಿವರಿಸಿದರು.
ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ, ಮಹಿಳಾ ದಿನಾಚರಣೆ ಮಹಿಳೆಯರಿಗೆ ಅರಿವು ಹಾಗೂ ಸ್ಫೂರ್ತಿಯ ದಿನವಾಗಬೇಕು. ಇನ್ನೂ ಸಮಾಜದಲ್ಲಿ ಹಲವು ರೀತಿಯ ಮೂಢನಂಬಿಕೆಗಳು, ತಾರತಮ್ಯ ಕಾಣುತ್ತಿದ್ದೇವೆ. ಮೂಢನಂಬಿಕೆಗಳನ್ನು ಹೋಗಲಾಡಿಸಿ, ಸಮಾಜದಲ್ಲಿ ಸಮಾನತೆ ನೆಲೆಗೊಳ್ಳಬೇಕು. ಸಂಡೂರಿನ ಅಕ್ಕನ ಬಳಗ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಲು ಶ್ರಮಿಸುತ್ತಿದೆ. ಶರಣರ ವಿಚಾರಗಳನ್ನು ಇತರರಿಗೂ ಪ್ರಚಾರ ಮಾಡಬೇಕು ಎಂದರು.ವಿಶಾಲಾಕ್ಷಿ ಕುಮಾರಸ್ವಾಮಿ ಉಗ್ರಾಣದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕನ ಬಳಗದ ಗೌರವಾಧ್ಯಕ್ಷೆ ಶಾಂತಮ್ಮ ಅಂಕಮನಾಳ್ ಅವರು ಪಟ್ಟಣದಲ್ಲಿ ಅಕ್ಕನಬಳಗ ಬೆಳವಣಿಗೆ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ನಾಗರಾಜ್ ಗುಡೆಕೋಟೆ ತಮ್ಮ ಮೂರು ವರ್ಷಗಳ ಅವಧಿಯಲ್ಲಿ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳ ಕುರಿತು ವಿವರಿಸಿದರು. ಅಕ್ಕನ ಬಳಗದ ನೂತನ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ ಸರೋಜಾ ಪ್ರಕಾಶ್ ಜ್ಯೋತಿ ಅವರು ತಮ್ಮ ಮುಂದಿನ ಕಾರ್ಯಯೋಜನೆಗಳ ಕುರಿತು ತಿಳಿಸಿದರು.
ಪದಗ್ರಹಣ ಮಾಡಿದ ಅಕ್ಕನ ಬಳಗದ ನೂತನ ಪದಾಧಿಕಾರಿಗಳು: ಶಾಂತಮ್ಮ ಪ್ರಭುರಾಜ್ ಅಂಕಮನಾಳ (ಗೌರವಾಧ್ಯಕ್ಷೆ), ಸರೋಜಾ ಪ್ರಕಾಶ್ ಜ್ಯೋತಿ (ಅಧ್ಯಕ್ಷೆ), ವಿಶಾಲ ಕುಮಾರಸ್ವಾಮಿ ಉಗ್ರಾಣದ (ಉಪಾಧ್ಯಕ್ಷೆ), ನಿರ್ಮಲ ಬಸವರಾಜ ಗೋನಾಳ್ (ಕಾರ್ಯದರ್ಶಿ), ಶಾಂತಮ್ಮ ಚರಂತಯ್ಯ ಬಿ.ಎಂ (ಸಹ ಕಾರ್ಯದರ್ಶಿ), ಅನುಪಮಾ ಬಸವರಾಜ ಕೊಟ್ಟಿಗೆ (ಖಜಾಂಚಿ), ಶಿವಲೀಲಾ ವೀರೇಶ್ ಜಿ, ವೀನಾ ಕೊಟ್ರೇಶ್ ಅಂಕಮನಾಳ, ಆಶಾ ವೀರೇಶ್ ಬಂಡೆಮೇಗಳ, ಕಲ್ಪನಾ ಪರಮೇಶಪ್ಪ ಗುಡೆಕೋಟೆ, ಶೃತಿ ಹರೀಶ್ ಜ್ಯೋತಿ, ಸುಮಿತ್ರಾ ಹೊಳಗುಂದಿ, ಸಿದ್ದಮ್ಮ ಸಿದ್ದಪ್ಪ, ರೇಣುಕಾ ಗುಡುದಾರ್ ಹಾಗೂ ವಿದ್ಯಾ ಶಶಿಧರ್ (ನಿರ್ದೇಶಕರು).