ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸ್ತ್ರೀಚೇತನ ಅಭಿಯಾನ: ಜಿಪಂ ಸಿಇಒ ರುಚಿ ಬಿಂದಲ್

KannadaprabhaNewsNetwork |  
Published : Mar 12, 2025, 12:47 AM IST
11ಎಚ್‌ವಿಆರ್1-ರುಚಿ ಬಿಂದಲ್ | Kannada Prabha

ಸಾರಾಂಶ

ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಿಸಲು ಸ್ತ್ರೀಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಹಾವೇರಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳಾ ಕೂಲಿಕಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದಲ್ಲಿ ಗ್ರಾಮೀಣ ಕುಟುಂಬಗಳ ಸುಧಾರಣೆ, ಮಕ್ಕಳ ಶಿಕ್ಷಣಕ್ಕೆ ನೆರವಾಗುವುತ್ತದೆ. ಈ ಹಿನ್ನೆಲೆ ಈ ಸಾಲಿನಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಶೇ. 10ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಾ. 31ರ ವರೆಗೆ ಸ್ತ್ರೀ ಚೇತನ ಅಭಿಯಾನ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ರುಚಿ ಬಿಂದಲ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶ ಮಹಿಳೆಯರಿಗೂ ಸಮಾನ ಅವಕಾಶ ಸಮಾನ ವೇತನ ಸೌಲಭ್ಯವನ್ನು ಕಲ್ಪಿಸಲಾಗುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಶೇ. 50ಕ್ಕಿಂತ ಹೆಚ್ಚಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಯೋಜನೆಯಡಿ ಕೆಲಸಕ್ಕಾಗಿ ನೋಂದಾಯಿಸಿಕೊಂಡ ಮಹಿಳಾ ಕೂಲಿಕಾರರಲ್ಲಿ ಶೇ. 50ರಷ್ಟು ಕೂಡ ಭಾಗವಹಿಸುತ್ತಿಲ್ಲ ಎಂದರು.

ಈ ಹಿಂದೆ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಲುವಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಜಿಲ್ಲೆಯಲ್ಲಿ ಶೇ. 48.68ರಷ್ಟು ತಲುಪಲು ಸಾಧ್ಯವಾಗಿದೆ. ಹಾಗಾಗಿ ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಿಸಲು ಸ್ತ್ರೀಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಭಿಯಾನ ರೂಪುರೇಷೆ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಂದಾಯಿತ ಅರ್ಹ ಮಹಿಳಾ ಕೂಲಿಕಾರರಿಗೆ ಜಾಗೃತಿ ಮೂಡಿಸಿ, ಮಹಿಳೆಯರಿಂದ ಒಂದು ತಿಂಗಳ ಕೂಲಿಕಗೆ ಬೇಡಿಕೆ ಪಡೆಯಲಾಗಿದೆ. ಸ್ತ್ರೀಚೇತನ ಅಭಿಯಾನದಡಿ ಒಂದು ತಿಂಗಳ ಕಾಲ ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ನೀಡಲು ಅಗತ್ಯ ಕಾಮಗಾರಿಗಳನ್ನು ಸಿದ್ಧತೆ ಮಾಡಿಕೊಳ್ಳುವುದು(ಚಾಲ್ತಿಯಲ್ಲಿರುವ ಕಾಮಗಾರಿ ಸೇರಿದಂತೆ), ಅಂತಾರಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ತ್ರೀಚೇತನ ಅಭಿಯಾನ ಕಾರ್ಯಕ್ರಮ ಆಯೋಜಿಸಿ, ಗ್ರಾಮ ಪಂಚಾಯಿತಿ ಮಟ್ಟದ ಚುನಾಯಿತ ಸದಸ್ಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನು ಆಹ್ವಾನಿಸಬೇಕು. ಮಾ. 10ರಿಂದ ಮಹಿಳಾ ಕೂಲಿಕಾರರು ಭಾಗವಹಿಸುವಿಕೆ ಶೇ. 60ಕ್ಕಿಂತ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿದಿನ 100 ಮಹಿಳಾ ಕೂಲಿಕಾರರಿಗೆ ಮಾನವ ದಿನ ಕೆಲಸ ಸೃಜನೆ ಮಾಡುವುದು, ಶೇ. 60ಕ್ಕಿಂತ ಮೇಲ್ಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿದಿನ ಸೃಜಿಸಲಾಗುವ ಮಾನವ ದಿನಗಳಲ್ಲಿ ಶೇ. 60 ಮಹಿಳಾ ಕೂಲಿಕಾರರು ಭಾಗವಹಿಸುವಿಕೆ ಕಾಯ್ದುಕೊಳ್ಳುವುದು ಹಾಗೂ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿಶೇಷ ಪ್ರಯತ್ನಗಳನ್ನು ನಡೆಸುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಯನ್ನು ಗುರುತಿಸಿ ಅವರನ್ನು ಜಿಲ್ಲಾಮಟ್ಟದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.ನರೇಗಾ ಯೋಜನೆಯಡಿ ನೋಂದಾಯಿತ ಎಲ್ಲ ಮಹಿಳಾ ಕೂಲಿಕಾರರಿಗೆ ಸಮಾನ ಅವಕಾಶ ನೀಡಿರುವ ಬಗ್ಗೆ ಜಾಗೃತಿ ಮೂಡಿಸುವುದು, ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಶೇ.10ರಷ್ಟು ಹೆಚ್ಚಿಸುವುದು ಹಾಗೂ ಗ್ರಾಮೀಣ ಕುಟುಂಬಗಳನ್ನು ಸಬಲವಾಗಿಸುವ ಹಾಗೂ ಪ್ರತಿ ಮಹಿಳಾ ಕಾಯಕ ಬಂಧುವಿಗೆ ಪ್ರೋತ್ಸಾಹಧನ ಕಡ್ಡಾಯವಾಗಿ ಪಾವತಿಸುವುದು ಸ್ತ್ರೀಚೇತನ ಅಭಿಯಾನ ಉದ್ದೇಶವಾಗಿದೆ ಎಂದಿದ್ದಾರೆ.

ಇಂದು ಭಕ್ತರ ಸಂಪರ್ಕ ಅಭಿಯಾನ

ರಾಣಿಬೆನ್ನೂರು: ನಗರದ ಮೆಡ್ಲೇರಿ ರಸ್ತೆಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಮಾ. 12ರಂದು ಬೆಳಗ್ಗೆ 10ಕ್ಕೆ ವಿಶ್ವವೀರಾಂಜನೇಯ ಮಹಾಸಂಸ್ಥಾನ ಹೇಮಪುರ ಮಹಾಪೀಠದ ಭಕ್ತರ ಸಂಪರ್ಕ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊನ್ನಾವರ ತಾಲೂಕಿನ ಗೇರಸೊಪ್ಪದ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ