ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಎಲೆಕೆರೆಯ ರುತ್ವಿ ಅಕ್ಷಯ ಕನ್ವೆನ್ಷನ್ ಹಾಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ, ವಕೀಲರಾದ ತೇಜಸ್ವಿನಿ ಚೆಲುವೆಗೌಡ, ಸಾಮಾಜಿಕ ಜಾಲತಾಣದ ಪಿಡುಗಿನಿಂದ ಮಕ್ಕಳ ರಕ್ಷಣೆಯಲ್ಲಿ ಪೋಷಕರ ಪಾತ್ರ ವಿಷಯದಲ್ಲಿ ಉಪನ್ಯಾಸ ನೀಡಿ, ಎಳೆಯ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿದ ಪರಿಣಾಮ ಇವತ್ತು ಮೊಬೈಲ್ ಗೀಳು ಹೆಚ್ಚಾಗಿದೆ. ಇದರಿಂದಾಗಿ ಅನೇಕ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗಿವೆ. ಆಂತರಿಕ ಗೌಪ್ಯ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪರಿಣಾಮ ವೈಯಕ್ತಿಕ ಜೀವನ ಹಾಳಾಗುತ್ತಿದೆ ಎಂದು ಎಚ್ಚರಿಸಿದರು.ಮಹಿಳಾ ಆರೋಗ್ಯದ ಬಗ್ಗೆ ಡಾ.ಎಚ್.ಆರ್.ಮಣಿಕರ್ಣಿಕಾ ಅವರು ಮಹಿಳೆ ಮತ್ತು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿ, ಮಹಿಳೆ ಮನೆಮಂದಿಗೆ ಕೊಡುವ ಸಮಯದ ಜೊತೆಗೆ ತನಗಾಗಿ ಸ್ವಲ್ಪ ಸಮಯ ಇಟ್ಟುಕೊಳ್ಳಬೇಕು. ದಿನಚರಿಯಲ್ಲಿ ಆಹಾರ ವಿಹಾರ, ವ್ಯಾಯಾಮ, ವಿರಾಮ, ದ್ಯಾನ ಇವುಗಳನ್ನು ಅಳವಡಿಸಬೇಕು. ಸಕಾರಾತ್ಮಕ ಅಲೋಚನೆಯಲ್ಲಿ ಇರಬೇಕು. ಹಿತಮಿತವಾದ ಆಹಾರ ಕ್ರಮಗಳಿರಬೇಕೆಂದರು.
ವಿಶೇಷ ಆಕರ್ಷಣೆಯಲ್ಲಿ ಮಹಿಳೆಯರಿಗೆ ರಂಗೋಲಿ, ಪುಷ್ಪಗುಚ್ಚ, ಸ್ವ-ಉದ್ಯೋಗ ಮಳಿಗೆ, ಪೌಷ್ಟಿಕ ಆಹಾರ , ಕರಕುಶಲ ಮತ್ತು ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.