ರಾಮನಗರ: ಸರ್ಕಾರಗಳು ಮಹಿಳೆಯರಿಗಾಗಿ ಸಮಾನ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರೂ ನಾವುಗಳು ಅದನ್ನು ಸದುಪಯೋಗ ಪಡೆದುಕೊಳ್ಳುವುದಲ್ಲಿ ವಿಫಲರಾಗಿದ್ದೇವೆ ಎಂದು ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಪಿತಾ ಹರೀಶ್ ಕುಮಾರ್ ಹೇಳಿದರು.
ರಾಜಕೀಯ ಹೊರತುಪಡಿಸಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ರಾಜಕೀಯವಾಗಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಸೌಲಭ್ಯವಿದೆ. ಇದು ಶೇಕಡ 50ರಷ್ಟಕ್ಕೆ ಹೆಚ್ಚಳವಾಗಬೇಕು ಎಂದರು.
ಮಹಿಳೆಯರ ಸಾಧನೆಗಳನ್ನು ಆಚರಿಸಲು, ಅಸ್ತಿತ್ವದಲ್ಲಿರುವ ಅಸಮಾನತೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಹೊಂದಿರುವ ಭವಿಷ್ಯಕ್ಕಾಗಿ ಪ್ರತಿಪಾದಿಸಲು ಈ ವಿಶ್ವ ಮಹಿಳಾ ದಿನಾಚರಣೆಯು ಒಂದು ನಿರ್ಣಾಯಕ ವೇದಿಕೆಯಾಗಿದೆ ಎಂದು ಅರ್ಪಿತಾ ಹೇಳಿದರು.ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಸುರೇಶ್, ಕಾರ್ಯದರ್ಶಿ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷರಾದ ಚಿಕ್ಕಸ್ವಾಮಿ, ಸದಸ್ಯರಾದ ಪ್ರೇಮ, ಗೀತಾ, ಜಿಲ್ಲಾ ಒಕ್ಕೂಟದ ಪ್ರತಿನಿಧಿ ವಿನೋದ್ ಕುಮಾರ್, ಮಾರುತಿ ಸಂಜಿವಿನಿ ಒಕ್ಕೂಟದ ಕ್ಲಸ್ಟರ್ ಮಟ್ಟದ ಸೂಪರ್ ವೈಸರ್ ಪ್ರೇಮ, ತರಬೇತುದಾರರಾದ ಪದ್ಮಾವತಿ ಜಿಲ್ಲಾ ಮನೋವೈದ್ಯಾಧಿಕಾರಿ ಮಹೇಂದ್ರ ಮತ್ತಿತರರು ಹಾಜರಿದ್ದರು.
---------22ಕೆಆರ್ ಎಂಎನ್ 3.ಜೆಪಿಜಿ
ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಅರ್ಪಿತಾ ಹರೀಶ್ ಕುಮಾರ್ ಉದ್ಘಾಟಿಸಿದರು.----------