ಮುಳಗುಂದ: ಆಡು ಮುಟ್ಟದ ಗಿಡ ಇಲ್ಲ, ಮಹಿಳೆ ಇಲ್ಲದ ವೃತ್ತಿ ರಂಗವಿಲ್ಲ ಎನ್ನುವಂತೆ ಪ್ರಸ್ತುತ ದಿನಗಳಲ್ಲಿ ಪುರುಷರ ಸಮನಾಗಿ ಮಹಿಳೆಯರು ಕೂಡಾ ಎಲ್ಲ ವೃತ್ತಿ ರಂಗದಲ್ಲಿ ಮುಂದಡಿ ಇಟ್ಟು ಭಾಗವಹಿಸಿ, ಯಶಸ್ವಿ ಆಗಿದ್ದಾರೆ ಎಂದು ಕುಟುಂಬ ಕಲ್ಯಾಣ ಇಲಾಖೆಯ ಸಖಿ ಒನ್ ಸೆಂಟರ್‌ನ ಆಪ್ತ ಸಮಾಲೋಚಕಿ ನಾಗರತ್ನಾ ನಾಲ್ಕರವಿ ಹೇಳಿದರು.
ಗದಗ ತಾಲೂಕು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಂಜುಳಾ ಕಮತರ ಮಾತನಾಡಿ, ಸರ್ಕಾರವು ಬೀದಿ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿ ಜತೆಗೆ ಇನ್ನೂ ಹಲವು ಯೋಜನೆಗಳನ್ನ ಜಾರಿಗೊಳಿಸಿದೆ. ಬೀದಿ ವ್ಯಾಪಾರಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಸದಸ್ಯರಾದ ಹೊನ್ನಪ್ಪ ಹಳ್ಳಿ, ಮಹಾದೇವಪ್ಪ ಗಡಾದ, ನೀಲವ್ವ ಅಸುಂಡಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಸಮುದಾಯ ಯೋಜನಾಧಿಕಾರಿ ವಾಣಿಶ್ರೀ ನಿರಂಜನ, ವೈದ್ಯಾಧಿಕಾರಿ ಡಾ. ಪ್ರವೀಣ ತುಪ್ಪದ, ಕೃಷಿ ಸಾಧಕಿ ಮಂಗಳಾ ನೀಲಗುಂದ, ಆರೋಗ್ಯ ಸಂರಕ್ಷಣಾಧಿಕಾರಿ ಸುಮೀತ್ರಾ ಹೊಂಬಳ, ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಅಧ್ಯಕ್ಷ ಭೀಮಪ್ಪ ಕೋಳಿ ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಟೀ ಶರ್ಟ್, ಕನ್ನಡಕ ವಿತರಣೆ ಮಾಡಲಾಯಿತು.