ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರ ಸ್ಥಾನಮಾನದ ಕುರಿತು ಇಂದಿನ ದಿನಗಳಲ್ಲಿ ಪುರುಷರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಹಿರಿಯ ನ್ಯಾಯಾಧೀಶ ಅರವಿಂದ ಹಾಗರಗಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಳ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ್ದರು. ನ್ಯಾಯಾಲಯ ಇಲಾಖೆಯಲ್ಲಿ ಇಂದು ಶೇಕಡಾ.೭೦ರಷ್ಟು ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಸಿಗಲಿದೆ ಎಂದು ಹೇಳಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜಿ.ಬಿರಾದಾರ ಮಾತನಾಡಿ, ಮಹಿಳೆಯರು ತುಂಬಾ ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾರೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಇಂದಿನ ದಿನಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ಮಾತನಾಡಿ, ವಿಶ್ವದ ಶ್ರೇಷ್ಠ ಜೀವಿ ಎಂದರೆ ಅದು ತಾಯಿ. ಮಹಿಳೆಯರಿಗೆ ಸರ್ಕಾರ ನೀಡುವ ವಿವಿಧ ಸೌಲಭ್ಯಗಳನ್ನು ಅವರು ಪಡೆದುಕೊಂಡು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಸುಮಾರು ₹ ೫.೨೦ ಲಕ್ಷ ಹಣಕಾಸಿನ ಸಹಾಯಧನವನ್ನು ಶಿಷ್ಯವೇತನದ ರೂಪದಲ್ಲಿ ನೀಡಿದ ಮಲಬಾರ ಗೋಲ್ಡ್ ಮತ್ತು ಡೈಮಂಡ್ಸ್ ಕಂಪನಿಯ ಜಿಲ್ಲಾ ಮುಖ್ಯಸ್ಥ ದೀಪಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ.ಚಿದಾನಂದ ಆನೂರ, ಡಾ.ರಾಜಶೇಖರ ಬೆನಕನಹಳ್ಳಿ, ಸಿದ್ದಣ್ಣ ಬಿಡಗೊಂಡ, ಡಾ.ಎಂ.ಆರ್.ಕೆಂಭಾವಿ, ಪ್ರೊ.ರಮೇಶ ಬಳ್ಳೊಳ್ಳಿ, ಪ್ರೊ. ಅರ್ಪಿತಾ ಪಾಟೀಲ, ಪ್ರೊ.ಭಾರತಿ ಹಾಲು, ಡಾ.ಆನಂದ ಕುಲಕರ್ಣಿ, ಡಾ.ರಾಮಣ್ಣ ಕಳ್ಳಿ, ಡಾ.ಶಕೀರಾಬಾನು ಕಿತ್ತೂರ, ಡಾ.ನೀಲಕಂಠ ಹಳ್ಳಿ, ಡಾ.ಸದಾಶಿವ ಚಲವಾದಿ, ಪ್ರೊ.ಮಂಜುನಾಥ ಗಾಣಿಗೇರ, ಪ್ರೊ.ತೌಸಿಫ್ ಗೋಡೆಸವಾರ, ಪ್ರೊ.ಆಸೀಫ್ ರೋಜಿನದಾರ, ಶಿವಾನಂದ ಸಾಂಗೋಲಿ, ನವೀನಗೌಡ ಬಿರಾದಾರ, ವೀರನಗೌಡ ಪಾಟೀಲ, ಸುಜಾತಾ ಬಿರಾದಾರ, ಡಾ.ರಾಘವೇಂದ್ರ ಗುರಜಾಲ, ಪ್ರೊ.ಶ್ರೀಕಾಂತ ಬ್ಯಾಳಿ, ಪ್ರೊ.ನಾತುರಾಮ ಜಾಧವ, ಡಾ.ದಾವಲಸಾ ಪಿಂಜಾರ, ಡಾ.ಬೌರಮ್ಮ ಗಂಜ್ಯಾಳ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು. ಡಾ.ಭಾರತಿ ಹೊಸಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಎಂ.ಆರ್.ಜೋಶಿ ಸ್ವಾಗತಿಸಿದರು. ಪ್ರೊ.ಲಕ್ಷ್ಮೀ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು.