ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಜಡೇಕುಂಟೆ ಗ್ರಾಮದಲ್ಲಿ ಶ್ರೀವಿದ್ಯಾ ಹೋಮ್ ಪ್ರಾಡೆಕ್ಟ್ ನೂತನ ಘಟಕವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹಲವಾರು ವಿಚಾರಗಳಬಗ್ಗೆ ಮಹಿಳೆಯರು ಚರ್ಚೆ ನಡೆಸುತ್ತಾರೆ. ಗ್ರಾಮದಲ್ಲಿ ಆರಂಭವಾದ ವಿದ್ಯಾಹೋಮ್ ಪ್ರಾಡೆಕ್ಟ್÷್ಸನಿಂದ ನೂರಾರು ಮಹಿಳೆಯರು ಸ್ವಯಂ ಉದ್ಯೋಗವಂತರಾಗುವ ಎಲ್ಲಾ ಲಕ್ಷಣಕಾಣುತ್ತಿವೆ. ಓರ್ವ ಮಹಿಳೆ ವಿದ್ಯಾವಂತೆ ಮತ್ತು ಉದ್ಯೋಗವಂತೆಯಾದರೆ ಇಡೀ ಗ್ರಾಮದಲ್ಲೇ ಅಭಿವೃದ್ದಿ ಪರ್ವಆರಂಭವಾಗದಂತೆ. ಒಬ್ಬ ಮಹಿಳೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದರೆ ಹತ್ತಾರು ಮಹಿಳೆಯರು ಅವರನ್ನು ಅನುಕರಿಸುತ್ತಾರೆಲ್ಲದೆ, ಅವರೂ ಸ್ವಂತ ಉದ್ಯೋಗ ಹೊಂದುವ ನಿಟ್ಟಿನಲ್ಲಿ ಕಾಯೋನ್ಮುಖರಾಗುತ್ತಾರೆ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಮಹಿಳೆಯರಿಗೆ ವಿವಿಧ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅತಿಕಡಿಮೆ ಬಡ್ದದರಲ್ಲಿ ಧೀರ್ಘಕಾಲದ ಸಾಲಪಡೆಯಲು ಮಹಿಳೆಯರಿಗೆ ಅವಕಾಶ ನೀಡಿದೆ. ಸಾಮಾನ್ಯವಾಗಿ ಯಾವುದೇ ಮಹಿಳೆ ಸ್ವಯಂ ಉದ್ಯೋಗವನ್ನು ಆಯ್ಕೆಮಾಡಿಕೊಂಡರೆ ನಷ್ಟವಾಗದಂತೆ ಎಚ್ಚರಿಕೆ ವಹಿಸುತ್ತಾರೆಂದರು.ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ, ಇಒ ಎಚ್.ಶಶಿಧರ, ಉಪಕೃಷಿ ನಿರ್ದೇಶಕ ಡಾ.ಎನ್.ಉಮೇಶ್, ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ಸಹಾಯಕಕೃಷಿನಿರ್ದೇಶಕ ಟಿ.ರಮೇಶ್, ಕೆ.ವಿಜಯ್, ನಿವೃತ್ತ ಪಶುವೈದ್ಯಾಧಿಕಾರಿ ಡಾ.ಬಿ.ಟಿ.ರವೀಂದ್ರನಾಥ, ವೈದ್ಯಾಧಿಕಾರಿ ಡಾ.ಪಿ.ಎನ್.ನಾಗರಾಜು, ಕಲಮರಹಳ್ಳಿಶಿವಣ್ಣ, ಹೆಗ್ಗೆರೆ ಆನಂದಪ್ಪ, ಮಹಾಲಿಂಗಪ್ಪ, ಭಾಗ್ಯಮ್ಮ, ಶಶಿಕಲಾ, ತಿಪ್ಪೇರುದ್ರಸ್ವಾಮಿ, ಪ್ರೇಮಾ, ಜೆ.ತಿಪ್ಪೇಸ್ವಾಮಿ, ಶ್ವೇತ ಇತರರು ಹಾಜರಿದ್ದರು.