ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರು ಭಯದಲ್ಲಿ ಬದುಕುವಂತಾಗಿದೆ

KannadaprabhaNewsNetwork |  
Published : Apr 23, 2024, 12:48 AM IST
ಫೊಟೊ : ೨೨ಎಚ್‌ಎನ್‌ಎಲ್೩  | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮಹಿಳೆಯರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿಗೆ೩ ಕಠಿಣ ಶಿಕ್ಷೆ ನೀಡಬೇಕು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಹಾನಗಲ್ಲ ಆಗ್ರಹಿಸಿದರು.

ಹಾನಗಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮಹಿಳೆಯರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿಗೆ೩ ಕಠಿಣ ಶಿಕ್ಷೆ ನೀಡಬೇಕು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಹಾನಗಲ್ಲ ಆಗ್ರಹಿಸಿದರು.ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹಿಂದೂ ಯುವತಿಯರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗಳನ್ನು ಗಮನಿಸಿದರೆ ಜಿಹಾದಿ ಕೃತ್ಯಗಳೆನ್ನುವುದು ಸಾಬೀತಾಗುತ್ತಿದೆ. ನೇಹಾಳನ್ನು ೯ ಬಾರಿ ಇರಿದು ಘೋರವಾಗಿ ಕೊಲೆ ಮಾಡಿದ ಆರೋಪಿಯನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ನೆಪದಲ್ಲಿ ಅವರು ಮಾಡುವ ಎಲ್ಲ ಅಪರಾಧಿ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಈ ರಾಜ್ಯದ ಜನತೆಯ ದೌರ್ಭಾಗ್ಯವಾಗುತ್ತಿದೆ. ಇಂಥ ಕೃತ್ಯಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲಿಸಿದರೆ ಕರ್ನಾಟಕದಲ್ಲಿ ಇಂಥ ಘಟನೆಗಳು ಮರುಕಳಿಸುವುದು ನಿಶ್ಚಿತ. ನ್ಯಾಯಾಲಯಗಳು ತ್ವರಿತಗತಿಯಲ್ಲಿ ನ್ಯಾಯ ನಿರ್ಣಯ ಕೈಗೊಳ್ಳಬೇಕು. ಹಾವೇರಿ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ೧೨ ಲವ್ ಜಿಹಾದ್ ಪ್ರಕರಣಗಳು ನಡೆದಿವೆ. ಈ ಕೃತ್ಯಗಳ ಹಿಂದೆ ದೊಡ್ಡ ಷಡ್ಯಂತ್ರಗಳಿವೆ. ಇವುಗಳನ್ನು ಪೊಲೀಸ್ ಇಲಾಖೆ ಭೇದಿಸಬೇಕು. ಕೇರಳ ಘಟನೆ, ಕುಕ್ಕರ್ ಬಾಂಬ್ ಘಟನೆ ಸೇರಿದಂತೆ ಹಲವು ಪ್ರಕರಣಗಳ ಕುರಿತು ಕಾಂಗ್ರೆಸ್ ಸರ್ಕಾರ ರಾಜಕೀಯ ಹೇಳಿಕೆ ನೀಡಿತ್ತು. ಘಟನೆಗಳನ್ನು ಗಂಭೀರವಾಗಿ ಪರಿಗಣಿಸದ ಸಿಎಂ, ಡಿಸಿಎಂ ಉಡಾಫೆ ಉತ್ತರಗಳನ್ನು ನೀಡುವುದು ಖೇದದ ಸಂಗತಿ ಎಂದರು.ಬಿಜೆಪಿ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ನೇಹಾ ಪ್ರಕರಣವನ್ನು ಸರ್ಕಾರ ''''ಲವ್ ಜಿಹಾದ್'''' ಎಂದು ಒಪ್ಪಿಕೊಳ್ಳುತ್ತಿಲ್ಲ. ಹು-ಧಾ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯನ ಮಗಳಿಗೇ ಅನ್ಯಾಯವಾಗಿದ್ದರೂ ಇದರಲ್ಲಿ ರಾಜಕೀಯ ಮಾಡುತ್ತಿರುವುದನ್ನು ಗಮನಿಸಿದರೆ, ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಮಟ್ಟಹಾಕುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ. ರಾಜ್ಯ ಸರ್ಕಾರದಿಂದ ನ್ಯಾಯದೊರಕುವ ವಿಶ್ವಾಸವಿಲ್ಲದಂತಾಗಿದೆ. ಬೆಂಗಳೂರಿನ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮನೆ ಮೇಲೆ ದಾಳಿ ನಡೆದಾಗಲೂ ಕಾಂಗ್ರೆಸ್ ಇದೇ ರೀತಿ ವರ್ತಿಸಿತ್ತು. ಕಾಂಗ್ರೆಸ್ ಆಡಳಿತ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದರು.ಜಂಗಮ ಸಮಾಜದ ಅಧ್ಯಕ್ಷ ರವಿಕುಮಾರ ಪಾಟೀಲ ಮಾತನಾಡಿ, ಕಾಲೇಜ್ ಆವರಣದಲ್ಲಿ ಹಿಂದೂ ಯುವತಿಯನ್ನು ಕೊಲೆ ಮಾಡಿದ ಆರೋಪಿ ಫಯಾಜ್‌ಗೆ ಕಠೋರವಾದ ಶಿಕ್ಷೆಯಾಗಬೇಕು. ಹಾಡುಹಗಲೇ ಕೊಲೆಗಳು ನಡೆಯುತ್ತಿರುವುದು ದುರ್ದೈವ. ಈ ಘಟನೆಯಲ್ಲಿ ಸರ್ಕಾರ ಜಾತಿ, ಪಕ್ಷ ಯಾವುದನ್ನೂ ನೋಡದೇ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಗಣೇಶ ಭಜಂತ್ರಿ, ನ್ಯಾಯ ಜಾಗರಣ ವೇದಿಕೆಯ ಗಜೇಂದ್ರ ಕುಂದಾಪುರ, ತಾಲೂಕು ಮಾತೃ ಸುರಕ್ಷಾ ವೇದಿಕೆಯ ಲಿಖಿತ ಹದಳಗಿ, ಕಾರ್ತಿಕ ವಿರುಪಣ್ಣನವರ, ಪ್ರಸಾದ ಪಾವಲಿ, ಕೃಷ್ಣಾ ಕೊರಚರ, ಭೋಜರಾಜ ಕರೂದಿ, ರವಿಚಂದ್ರ ಪುರೋಹಿತ, ಪ್ರವೀಣ ಸುಲಾಖೆ, ಮನೋಜ ಕಲಾಲ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಡಾ.ಸುನೀಲ್ ಹಿರೇಮಠ, ಮಧುಮತಿ ಪೂಜಾರ, ರೇಖಾ ಶೆಟ್ಟರ, ಶೋಭಾ ಉಗ್ರಣ್ಣನವರ, ರವಿ ಪುರದ, ಗುರು ಗೊಲ್ಲರ, ತುಳಜೇಶ ಮೂಲಿಮನಿ, ಶಿವಯೋಗಿ ಹಿರೇಮಠ, ಶಿವಯೋಗಿ ಅರಳೆಲಿಮಠ, ಮುತ್ತಣ್ಣ ಮುಚ್ಚಂಡಿ, ವಿಶ್ವನಾಥ ಭಿಕ್ಷಾವರ್ತಿಮಠ, ಸಿದ್ದಲಿಂಗೇಶ ತುಪ್ಪದ, ಷಣ್ಮುಖಯ್ಯ ಹಿರೇಮಠ ಇತರರು ಪಾಲ್ಗೊಂಡಿದ್ದರು. ಮಹಾತ್ಮಾ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಕೈಗೊಂಡು ನಂತರ ತಹಸೀಲ್ದಾರ್ ಎಸ್. ರೇಣುಕಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!