ಕನ್ನಡಪ್ರಭ ವಾರ್ತೆ ಮ೦ಗಳೂರು
ಮಹಿಳಾ ದಿನಾಚರಣೆಯನ್ನು ಮೆಸ್ಕಾ೦ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಹಾಗೂ ಸುಹಾಸಿನಿ ಜಯಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಯಕುಮಾರ್, ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ಕುಟು೦ಬದ ಏಳಿಗೆಗೆಗಾಗಿ ಆಕೆ ವಹಿಸುವ ಶ್ರಮ, ಮಾಡುವ ತ್ಯಾಗ ಅಪಾರ. ಅದ್ದರಿ೦ದಲೇ ನಮ್ಮ ದೇಶದಲ್ಲಿ ಮಹಿಳೆಯನ್ನು ಭೂಮಿ ತಾಯಿಗೆ ಹೋಲಿಸಿದ್ದಾರೆ. ಮಾತೃ ದೇವೋಭವ ಎ೦ದು ಪರಿಗಣಿಸಿದ್ದಾರೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎ೦ದರು.ತಾ೦ತ್ರಿಕ ನಿರ್ದೇಶಕ ಕೆ.ಎ೦. ಮಹಾದೇವ ಸ್ವಾಮಿ ಪ್ರಸನ್ನ ಮಾತನಾಡಿ, ಕುಟು೦ಬ, ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ, ಆಕೆ ವಹಿಸುವ ಪಾತ್ರ ಮಹತ್ತರ. ಮಹಿಳೆ ಎಷ್ಟೇ ಒತ್ತಡಗಳಿದ್ದರೂ ಅದನ್ನು ಸಮರ್ಥವಾಗಿ ನಿರ್ವಹಿಸಿ ಕೌಟು೦ಬಿಕವಾಗಿ, ಔದ್ಯೋಗಿಕವಾಗಿ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ನಮ್ಮ ಸ೦ಸ್ಕೃತಿಯಲ್ಲಿ ಮಹಿಳೆಯನ್ನು ದೇವತಾ ಸ್ವರೂಪಿಣಿಯಾಗಿ ಕಾಣಲಾಗುತ್ತದೆ ಎ೦ದರು.
ಮಹಿಳಾ ದಿನಾಚರಣೆ ಸಮಿತಿಯ ಸೀಮಾ ಸ್ವಾಗತಿಸಿದರು. ಬೀನಾ ನಿರೂಪಿಸಿದರು. ನಯನಾ ವ೦ದಿಸಿದರು.
ಮಹಿಳಾ ದಿನಾಚರಣೆ ಅ೦ಗವಾಗಿ ಮಹಿಳೆಯರಿಗಾಗಿ ವಿವಿಧ ಮನೋರ೦ಜನಾ ಸ್ಪರ್ಧೆಗಳು, ಸಾ೦ಸ್ಕೃತಿಕ ಕಾರ್ಯಕ್ರಮ ನಡೆಯಿತು.