ನೀರು ಪೂರೈಸದ ನಗರಸಭೆ ವಿರುದ್ಧ ಮಹಿಳೆಯರು ಪ್ರತಿಭಟನೆ

KannadaprabhaNewsNetwork |  
Published : Jun 04, 2026, 03:00 AM IST
03ಚದಹಸಜಚಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲಕಳೆದ 15 ದಿನಗಳಿಂದ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 2 ಮತ್ತು 3ಕ್ಕೆ ಸಮರ್ಪಕ ನೀರು ಪೂರೈಸದ ಕಾರಣ ಆ ವಾರ್ಡ್ ನ ಮಹಿಳೆಯರು ಸ್ಥಳೀಯ ಮುಖಂಡರು ನೇತೃತ್ವದಲ್ಲಿ ಖಾಲಿ ಕೂಡ ಪ್ರದರ್ಶಿಸಿ ನಗರಸಭೆ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಕಳೆದ 15 ದಿನಗಳಿಂದ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 2 ಮತ್ತು 3ಕ್ಕೆ ಸಮರ್ಪಕ ನೀರು ಪೂರೈಸದ ಕಾರಣ ಆ ವಾರ್ಡ್ ನ ಮಹಿಳೆಯರು ಸ್ಥಳೀಯ ಮುಖಂಡರು ನೇತೃತ್ವದಲ್ಲಿ ಖಾಲಿ ಕೂಡ ಪ್ರದರ್ಶಿಸಿ ನಗರಸಭೆ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ನಗರಸಭೆ ಅಧಿಕಾರಿಗಳು ಮತ್ತು ನೌಕರರು ಸರಿಯಾಗಿ ಮತ್ತು ಜನಪ್ರತಿನಿಧಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂದು ಇಳಕಲ್‌ ನಗರಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಸದೇ ನಾಗರಿಕರು ಪರದಾಡುವಂತಾಗಿದೆ ಎಂದು ಮುಖಂಡ ವೆಂಕಟೇಶ ಪೋತ ಆಕ್ರೋಶ ವ್ಯಕ್ತಪಡಿಸಿದರು.

ಮನೆಯಲ್ಲಿ ಕುಡಿಯಲು ಹಾಗೂ ಅಡುಗೆ ಮಾಡಲು ಸಹ ನೀರಿಲ್ಲ. ಜಳಕ ಮಾಡಿ 4 ದಿನಗಳೇ ಕಳೆದಿವೆ. ನಮ್ಮ ಸಂಕಟವನ್ನು ಯಾರ ಬಳಿ ಹೇಳಿಕೊಳ್ಳೋಣ ಎಂದು ಮಹಿಳೆಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನಮ್ಮ ಚುನಾವಣೆಗಳಲ್ಲಿ ಮನೆಗೆ ಬಂದು ಮತ ಕೇಳುತ್ತೀರಿ. ನಮಗೆ ಸಮಸ್ಯೆ ಆದಾಗ ಇಲ್ಲಿ ಯಾರು ಇರುವುದಿಲ್ಲ. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಿಂಗಳಿಂದ ಒಂದಿಲ್ಲೊಂದು ಸಬೂಬು ಹೇಳುತ್ತಲೇ ಇದ್ದಾರೆ. ಕೇವಲ ನೀರಿನ ಕರ ವಸೂಲಿಗೆ ಮಾತ್ರ ಬರುತ್ತಾರೆ. ಆದರೆ, ನೀರು ಬಿಡುತ್ತಿಲ್ಲ ಎಂದು ಆಕ್ರೋಶ ಮಹಿಳೆಯರು ವ್ಯಕ್ತಪಡಿಸಿದರು. ಇನ್ನೆರಡು ದಿನಗಳಲ್ಲಿ ಸರಿಯಾಗಿ ನೀರು ಪೂರೈಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಡಿಕೆಶಿಗೆ ಹುಕ್ಕೇರಿ ಶ್ರೀಗಳ ಆಶೀರ್ವಾದ
ಎಂ.ಬಿ.ಪಾಟೀಲ ಅಭಿಮಾನಿಗಳಿಂದ ದೀಡ ನಮಸ್ಕಾರ