ಬೈಲೂರು ಗ್ರಾಮ ಪಂಚಾಯಿತಿ ಮುಂಭಾಗ ಖಾಲಿ ಕೊಡ ಹಿಡಿದು ನೀರಿಗಾಗಿ ಪ್ರತಿಭಟನೆ

KannadaprabhaNewsNetwork |  
Published : Jul 16, 2026, 01:45 AM IST
15ಸಿಎಚ್‌ಎನ್‌52ಹನೂರು ತಾಲೂಕಿನ  ಅರ್ಧನಾರೀಪುರ  ಹಾಗೂ ಅರೆ ಕಡವಿನ ದೊಡ್ಡಿ ಗ್ರಾಮಸ್ಥರು ಬೈಲೂರು ಗ್ರಾಮ ಪಂಚಾಯಿತಿ ಮುಂಭಾಗ ಖಾಲಿ ಕೊಡ ಹಿಡಿದು ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ತಾಲೂಕಿನ ಅರ್ಧನಾರೀಪುರ ಹಾಗೂ ಅರೆ ಕಡವಿನ ದೊಡ್ಡಿ ಗ್ರಾಮಸ್ಥರು ಬೈಲೂರು ಗ್ರಾಮ ಪಂಚಾಯ್ತಿ ಮುಂಭಾಗ ಖಾಲಿ ಕೊಡ ಹಿಡಿದು ನೀರಿಗಾಗಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಅರ್ಧನಾರೀಪುರ ಹಾಗೂ ಅರೆ ಕಡವಿನ ದೊಡ್ಡಿ ಗ್ರಾಮಸ್ಥರು ಬೈಲೂರು ಗ್ರಾಮ ಪಂಚಾಯ್ತಿ ಮುಂಭಾಗ ಖಾಲಿ ಕೊಡ ಹಿಡಿದು ನೀರಿಗಾಗಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಬೈಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರೆ ಕಡವಿನ ದೊಡ್ಡಿ ಮತ್ತು ಗಡಿ ಗ್ರಾಮದ ಅರ್ಧನಾರೀಪುರ ಗ್ರಾಮದಲ್ಲಿ ಹನಿ ನೀರಿಗಾಗಿ ನಿವಾಸಿಗಳ ಪರದಾಟ ಸಮಸ್ಯೆ ಪರಿಹರಿಸುವಂತೆ ನಿವಾಸಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಗಮನಕ್ಕೆ ತರಲಾಗಿದ್ದರು, ಕುಡಿಯುವ ನೀರಿನ ಸಮಸ್ಯೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೈಲೂರು ಗ್ರಾಪಂ ವ್ಯಾಪ್ತಿಯ ಅರ್ಧನಾರೀಪುರ ತಮಿಳುನಾಡಿನ ಗಡಿ ಭಾಗದಲ್ಲಿರುವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ತೊಂಬೆಗಳ ಮುಂದೆ ಕಾಲಿ ಕೊಡಗಳನ್ನು ಹಿಡಿದು ಮಹಿಳೆಯರು ನೀರು ಸಂಗ್ರಹಿಸಲು ಕೆಲಸ ಕಾರ್ಯಗಳನ್ನು ಬಿಟ್ಟು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಬೈಲೂರು ವ್ಯಾಪ್ತಿಯ ಅರ್ಧನಾರೀಪುರ ಮತ್ತು ಅರೆ ಕಡವಿನ ದೊಡ್ಡಿ ಗ್ರಾಮದ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮಹಿಳೆಯರು ನೀರಿಗಾಗಿ ಕಾಲಿಕೊಡ ಪ್ರದರ್ಶನ ಮಾಡುವ ಮೂಲಕ ಜನಪ್ರತಿನಿಧಿ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಂಬಂಧಪಟ್ಟ ಜಿಲ್ಲಾ ಆಡಳಿತ ಇತ್ತ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

---15ಸಿಎಚ್‌ಎನ್‌52

ರೈತರ ಪ್ರತಿಭಟನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಪತ್ರಿಕೆ ಓದುವ ಹವ್ಯಾಸದಿಂದ ಜ್ಞಾನದ ವೃದ್ಧಿ: ಅಷ್ಟೂರೆ
ರೈತ ಸಂಘದ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ರಾಜಣ್ಣ ಆಯ್ಕೆ