ಮೂವರು ಸಾಧಕಿಯರಿಗೆ ಮಹಿಳಾ ಪ್ರಶಸ್ತಿ

KannadaprabhaNewsNetwork |  
Published : Mar 13, 2025, 12:48 AM IST
ಕೆ.ಎಂ. ಶ್ರೀದೇವಿ | Kannada Prabha

ಸಾರಾಂಶ

ವರದಕ್ಷಿಣೆ ವಿರೋಧಿ ವೇದಿಕೆ ತುಮಕೂರು ನಗರ ಸಾಂತ್ವನ ಕೇಂದ್ರ ಪ್ರತಿವರ್ಷ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ ಸಾಧಕ ಮಹಿಳೆಯರಿಗೆ ಈ ಕೆಳಕಂಡಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರುವರದಕ್ಷಿಣೆ ವಿರೋಧಿ ವೇದಿಕೆ ತುಮಕೂರು ನಗರ ಸಾಂತ್ವನ ಕೇಂದ್ರ ಪ್ರತಿವರ್ಷ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ ಸಾಧಕ ಮಹಿಳೆಯರಿಗೆ ಈ ಕೆಳಕಂಡಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಲೆಮಾರಿ, ಕುರಿಗಾಹಿಗಳಿಗೆ ಲಸಿಕೆ, ಔಷಧೋಪಚಾರ, ಆರೋಗ್ಯದ ಅರಿವು ಮೂಡಿಸುತ್ತಾ ಬಂದಿರುವ, ರಸ್ತೆ ಬದಿಯ ಗಿಡ ಮರಗಳಿಗೆ ಗೊಬ್ಬರ ಹಾಕಿ ಅವುಗಳ ರಕ್ಷಣೆಗೆ ಅರಿವು ಮೂಡಿಸುತ್ತಿರುವ, ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುತ್ತಾ ಅವರನ್ನೊಳಗೊಂಡ ಹಕ್ಕಿ ಪಕ್ಕ ಬಳಗ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಗುಬ್ಬಿ ತಾಲೂಕು ಅಳ್ಳೇನಹಳ್ಳಿಯ ಗೀತಾ ಜೆ ಅವರಿಗೆ ಡಾ.ಜಿ. ಪರಮೇಶ್ವರ ಅವರು ಸ್ಥಾಪಿತ ಗಂಗಮಾಳಮ್ಮ ಗಂಗಾಧರಯ್ಯ ನೆನಪಿನ ಮಹಿಳಾ ಚೇತನ ಪ್ರಶಸ್ತಿ ನೀಡಲಾಗುತ್ತಿದೆ.ಚಿಕ್ಕನಾಯಕನಹಳ್ಳಿ ತಾಲೂಕು ಗಡಿಭಾಗದ ಹೊಯ್ಸಳಕಟ್ಟೆಯಲ್ಲಿ ಕಳೆದ 20 ವರ್ಷಗಳಿಂದ ನೂರಾರು ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಿ ಅವರಲ್ಲಿ 20೦ ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ವೃತ್ತಿ ಸೃಜಿಸಿಕೊಳ್ಳಲು ನೆರವಾಗಿರುವ, ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಲು ನೆರವಾಗಿ ಆ ಸಂಘಗಳ ಸದಸ್ಯರಲ್ಲಿ ಉಳಿತಾಯ ಮನೋಭಾವ, ಉತ್ಪಾದಕ ಚಟುವಟಿಕೆಗಳ ಅರಿವು ಮೂಡಿಸುತ್ತಿರುವ ಬಿ.ಎಂ. ಶ್ರೀದೇವಿ ಅವರಿಗೆ ದಿ. ಸಿ. ಚೆನ್ನಿಗಪ್ಪ ಅವರು ಸ್ಥಾಪಿಸಿರುವ ಚೆನ್ನಮ್ಮ ಚನ್ನರಾಯಪ್ಪ ನೆನಪಿನ ಮಹಿಳಾ ಸಾಧಕಿ ಪ್ರಶಸ್ತಿ ನೀಡಲಾಗುತ್ತಿದೆ. 31 ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ಆ ನಂತರವೂ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಮಹಿಳೆಯರ ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಸ್ವಯಂ ಸೇವಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಾ ಮಹಿಳೆಯರ ವಿವಿಧ ತರಬೇತಿಗಳನ್ನು ನೀಡಿ ಅವರಲ್ಲಿ ಜಾಗೃತಿ ಮೂಡಿಸುತ್ತಿರುವ ತುಮಕೂರು ನಗರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಟಿ. ಎಂ. ಚಂದ್ರಪ್ಪ ಅವರ ಪುತ್ರಿ ಟಿ.ಸಿ. ಜಯಂತಿ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಅವರು ತಮ್ಮ ಪತ್ನಿ ಸರೋಜ ಹೆಸರಲ್ಲಿ ಸ್ಥಾಪಿಸಿರುವ ಶ್ರಮಜ್ಯೋತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪ್ರಶಸ್ತಿಯು ತಲಾ 5 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ವರದಕ್ಷಿಣೆ ವಿರೋಧಿ ವೇದಿಕೆ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಈಶ್ವರಿ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 15ರಂದು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಏರ್ಪಾಟಾಗಿರುವ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''