ಮಹಿಳಾ ಸೈಕಲ್ ಸಿಟಿ ಲೀಗ್ - ಅಸ್ಮಿತಾ 2026 ಸಂಪನ್ನ

KannadaprabhaNewsNetwork |  
Published : Jun 16, 2026, 02:45 AM IST
15ಸೈಕಲ್ | Kannada Prabha

ಸಾರಾಂಶ

ಭಾರತೀಯ ಸೈಕಲ್ ಫೆಡರೇಷನ್, ಯುವಜನ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಅಮೇಚೂರ್ ಸೈಕಲ್ಲಿಂಗ್ ಅಸೋಸಿಯೇಷನ್, ಉಡುಪಿ ಜಿಲ್ಲಾ ಅಮೇಚೂರ್ ಸೈಕಲ್ಲಿಂಗ್ ಅಸೋಸಿಯೇಷನ್ ನ ಸಹಯೋಗದೊಂದಿಗೆ ಮಹಿಳಾ ಸೈಕಲ್ ಸಿಟಿ ಲೀಗ್ - ಜಿಲ್ಲಾ ಮಟ್ಟದ ಸೈಕಲ್ ರೇಸ್/ ಸ್ಪರ್ಧೆ - ಅಸ್ಮಿತಾ 2026ಕ್ಕೆ ಭಾನುವಾರದಂದು ಉಡುಪಿಯ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಚಾಲನೆ ನೀಡಲಾಯಿತು.

ಉಡುಪಿ: ಭಾರತೀಯ ಸೈಕಲ್ ಫೆಡರೇಷನ್, ಯುವಜನ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಅಮೇಚೂರ್ ಸೈಕಲ್ಲಿಂಗ್ ಅಸೋಸಿಯೇಷನ್, ಉಡುಪಿ ಜಿಲ್ಲಾ ಅಮೇಚೂರ್ ಸೈಕಲ್ಲಿಂಗ್ ಅಸೋಸಿಯೇಷನ್ ನ ಸಹಯೋಗದೊಂದಿಗೆ ಮಹಿಳಾ ಸೈಕಲ್ ಸಿಟಿ ಲೀಗ್ - ಜಿಲ್ಲಾ ಮಟ್ಟದ ಸೈಕಲ್ ರೇಸ್/ ಸ್ಪರ್ಧೆ - ಅಸ್ಮಿತಾ 2026ಕ್ಕೆ ಭಾನುವಾರದಂದು ಉಡುಪಿಯ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಚಾಲನೆ ನೀಡಲಾಯಿತು.

ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ, ಜಿಲ್ಲಾ ಭೂದಾಖಲೆಗಳ ಇಲಾಖೆಯ ರವೀಂದ್ರ, ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಕ್ರೀಡಾಪಟು ಪೂರ್ಣಿಮಾ ಭೋಜರಾಜ್, ರಾಷ್ಟ್ರ ಮಟ್ಟದ ಸೈಕ್ಲಿಸ್ಟ್ ಕು. ಗ್ಲಿಯೊನೋ ಡಿಸೋಜಾ, ರಾಜ್ಯ ಮಟ್ಟದ ಸೈಕ್ಲಿಸ್ಟ್ ಶುಭಾ, ದಂತವೈದ್ಯರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಾ. ವಿಭಾ ಶೆಟ್ಟಿ, ಖ್ಯಾತ ಮೂಳೆತಜ್ಞರಾದ ಡಾ. ಹರೀಶ್ ನಾಯಕ್, ಡಾ. ರಾಜೇಶ್ ಭಕ್ತ ಅತಿಥಿಗಳಾಗಿ ಭಾಗವಹಿಸಿದ್ದರು.

ಬಿರುಸಿನ ಮಳೆಯ ನಡುವೆಯೂ ತೀವ್ರ ಪೈಪೋಟಿಯಿಂದ ಕೂಡಿದ ಸ್ಪರ್ಧೆಯ ವಿಜೇತರಿಗೆ ಪದಕ, ವಿಜೇತ ಪತ್ರವನ್ನು ನೀಡಲಾಯಿತು.

ಉಡುಪಿ ಜಿಲ್ಲಾ ಅಮೇಚೂರ್ ಸೈಕಲ್ಲಿಂಗ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಗುರುರಾಜ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳು ಶುಭವನ್ನು ಹಾರೈಸಿದರು. ಮಹೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರವಿಚಂದ್ರ ಉಡುಪ ಅವರು ಅಭಿನಂದನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಸಿಸಿ ಬ್ಯಾಂಕ್‌: ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ, ಪ್ರಶಸ್ತಿ ಪ್ರದಾನ
ನ್ಯಾಯದಾನಕ್ಕೆ ಮುಕ್ತ ವಾತಾವರಣ ಅಗತ್ಯ: ನ್ಯಾ. ನರೇಂದ್ರ ಪ್ರಸಾದ್