ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಮಹಿಳಾ ದಿನವನ್ನು ಗಂಡು ಮಕ್ಕಳು ಸೇರಿ ಆಚರಿಸುವುದರಿಂದ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಹಸೀಲ್ದಾರ್ ಪ್ರೇಮ ಕುಮಾರಿ ಹೇಳಿದರು.ತಾಲೂಕಿನ ಹ್ಯಾಂಡ್ ಪೋಸ್ಟ್ ಜೀವಿಕ ತರಬೇತಿ ಕೇಂದ್ರದಲ್ಲಿ ಜೀವಿಕ ಮತ್ತು ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ವತಿಯಿಂದ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಇಂದು ಮಹಿಳಾ ದಿನವನ್ನು ಕೇವಲ ಹೆಣ್ಣು ಮಕ್ಕಳು ಸೇರಿ ಆಚರಿಸುವ ಬದಲು ಗಂಡಸರೆ ಸೇರಿ ಆಚರಿಸುವ ಮೂಲಕ ಮಹಿಳೆಯರ ಮೇಲೆ ಇಂದಿನ ದಿನಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಎಷ್ಟರ ಮಟ್ಟಿಗೆ ನಡೆಯುತ್ತಿವೆ, ಯಾಕೆ ನಡೆಯುತ್ತಿವೆ, ಯಾರಿಂದ ಎನ್ನುವ ಚರ್ಚೆ ನಡೆಸಿದಾಗ ಮಾತ್ರ ದಿನಾಚರಣೆ ಅರ್ಥ ಬರುತ್ತೆ ಎಂದು ಮಹಿಳೆಯರ ಮೇಲಾಗುವ ಸಮಸ್ಯೆಗಳ ಕುರಿತಾಗಿ ಅವರು ಮಾತನಾಡಿದರು. ಸೆಂಟ್ ಮೇರೀಸ್ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯೆ ಡಾ. ಜ್ಯೋತಿ ಫರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾನ್ಯವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದ್ದು, ಇದಕ್ಕೆ ಕಾರಣ ಗರ್ಭಾವಸ್ಥೆಯಲ್ಲಿಯೇ ಗಂಡ ಹೆಂಡತಿಯರ ನಡುವಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು ಪ್ರಭಾವ ಬೀರಿ ಮುಂದೆ ಮಕ್ಕಳ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ, ಇದರಿಂದ ಮುಂದೆ ಮಕ್ಕಳ ಬೆಳವಣಿಗೆಯಲ್ಲಿ ಸವಾಲುಗಳ ಎದುರಾಗಲಿವೆ ಅದರಲ್ಲೂ ಹೆಣ್ಣುಮಕ್ಕಳ ಮೇಲೆ ದೊಡ್ಡ ಅನಾಹುತಗಳು ನಡೆಯುವ ಸಾದ್ಯತೆಗಳಿವೆ ಎಂದರು.ಮುಖ್ಯಅತಿಥಿಯಾಗಿ ಉಪನ್ಯಾಸಕಿ ಬೋರಮ್ಮ, ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ, ಜಿಲ್ಲಾ ಸಂಚಾಲಕ ಬಸವರಾಜ್, ಸಾಂತ್ವನ ಕೇಂದ್ರದ ಜಸ್ಸಿಲ್ಲ, ತಾಲೂಕು ಸಂಚಾಲಕ ಚಂದ್ರಶೇಖರ ಮೂರ್ತಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆ ಕುರಿತು ಮಾತಾನಾಡಿದರು. ಒಕ್ಕೂಟದ ಉಪಾಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು.ಸರಗೂರು ತಹಸೀಲ್ದಾರ್ ಮೋಹನ್ ಕುಮಾರಿ, ಶಿವರಾಜ್, ನಾಗಮ್ಮ, ನಾಗೇಂದ್ರ, ಶ್ರೀನಿವಾಸ್, ಒಕ್ಕೂಟದ ಮುಖಂಡರಾದ ಮಹದೇವ, ಲಕ್ಷ್ಮಮ್ಮ, ಸೋಮಣ್ಣ, ನಿಂಗಯ್ಯ, ಶಿವಕುಮಾರ್, ಪುಟ್ಟರಾಚಯ್ಯ, ತೊಳಸಮ್ಮ, ಯಶೋಧ, ಸಣ್ಣಮ್ಮ ಸಿದ್ದರಾಜು ಇದ್ದರು.---------------