ಬೆಂಗಳೂರಿನಲ್ಲಿ ಮಹಿಳಾ ವಸತಿ ನಿಲಯ ಆರಂಭ: ಬಿ.ವಿ.ಕುಮಾರ್

KannadaprabhaNewsNetwork |  
Published : Sep 09, 2026, 02:00 AM IST
್ಿ್ಿ್ಿ | Kannada Prabha

ಸಾರಾಂಶ

ಸದಸ್ಯತ್ವ ಅಭಿಯಾನ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸುವಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾಗಿವೆ. ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ವೈ.ಜಿ. ಮುರುಳೀಧರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮಹಿಳಾ ವಸತಿ ನಿಲಯವನ್ನು ಬೆಂಗಳೂರಿನಲ್ಲಿ ಆರಂಭಿಸಲು ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ನಿರ್ಧರಿಸಿದೆ ಎಂದು ಮಹಿಳಾ ಹಾಸ್ಟೆಲ್ ಯೋಜನಾ ಸಮಿತಿ ಗೌರವ ಅಧ್ಯಕ್ಷ ಬಿ.ವಿ.ಕುಮಾರ್ ತಿಳಿಸಿದರು.

ತುಮಕೂರಿನ ಶಂಕರಮಠದ ಶ್ರೀ ಅಭಿನವ ವಿದ್ಯಾತೀರ್ಥ ಪ್ರವಚನ ಮಂದಿರದಲ್ಲಿ ನಡೆದ ತುಮಕೂರು ಜಿಲ್ಲಾ ಉಲುಚುಕಮ್ಮೆ ಬಾಂಧವರ ಸಮಾವೇಶದಲ್ಲಿ ಮಾತನಾಡಿ, ಗ್ರಾಮಂತರ ಪ್ರದೇಶದಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರಿಗೆ ಮಹಿಳಾ ಹಾಸ್ಟೆಲ್, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಹಾಗೂ ನೆಲ ಮಹಡಿಯಲ್ಲಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ವಿಲ್ಸನ್ ಗಾರ್ಡನ್‌ನಲ್ಲಿರುವ ಉಲುಚುಕಮ್ಮೆ ಬ್ರಾಹ್ಮಣರ ಸಂಘದ ಸಮೀಪವೇ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸಮಾಜದ ಉನ್ನತಿಗಾಗಿ ಮಹಾಸಭಾ ವತಿಯಿಂದ ಜನಪರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಂಧವರ ಸಮಾವೇಶಗಳನ್ನು ಆಯೋಜಿಸಿ, ಸಮಾಜದ ಹಿರಿಯರನ್ನು ಗೌರವಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುವ ಕಾರ್ಯವನ್ನು ಮಹಾಸಭಾ ಮುಂದುವರಿಸಿಕೊಂಡು ಬರುತ್ತಿದೆ ಎಂದು ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣರಾವ್ ತಿಳಿಸಿದರು.

ಸದಸ್ಯತ್ವ ಅಭಿಯಾನ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸುವಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾಗಿವೆ. ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ವೈ.ಜಿ. ಮುರುಳೀಧರ್ ಕರೆ ನೀಡಿದರು.

ತುಮಕೂರು ಜಿಲ್ಲಾ ಉಲುಚುಕಮ್ಮೆ ಬ್ರಾಹ್ಮಣ ಸಭಾ ಸ್ವಂತ ನಿವೇಶನ ಹೊಂದುವ ಉದ್ದೇಶ ಇದೀಗ ಈಡೇರಿರುವುದು ಸಂತಸದ ಸಂಗತಿ ಎಂದು ಜಿಲ್ಲಾ ಕಾರ್ಯಾಧ್ಯಕ್ಷ ಆರ್. ವಾಸುದೇವಮೂರ್ತಿ ಹಾಗೂ ಜಿಲ್ಲಾ ಕಾರ್ಯದರ್ಶಿ ಮಠ ಮುದ್ರೆ ಶ್ರೀನಿವಾಸ್ ಜೋಯಿಶ್ ಹರ್ಷ ವ್ಯಕ್ತಪಡಿಸಿದರು.ತುಮಕೂರು ಉಲುಚುಕಮ್ಮೆ ಮಹಾಸಭಾ ಜಂಟಿ ಕಾರ್ಯದರ್ಶಿ ಆರ್. ಗೋಪಾಲಕೃಷ್ಣ, ಖಜಾಂಚಿ ಗುಂಡಣ್ಣ, ನಿರ್ದೇಶಕರಾದ ಶಾಲಿನಿ ರವಿಶಂಕರ್, ಸರಳ ನಾಗಭೂಷಣ್, ವೆಂಕಟರಂಗಯ್ಯ ( ಗೊರವನಹಳ್ಳಿ), ಎಚ್.ಸುಬ್ಬರಾವ್, ಟಿ.ಜಿ..ವೆಂಕಟೇಶ್, ಕೆ.ಬಿ. ಚಂದ್ರಮೌಳಿ, ಎಸ್.ಗಿರೀಶ್ (ಅಳಿಲುಘಟ್ಟ), ಎಸ್.ಜಿ. ಪ್ರಸನ್ನಕುಮಾರ್, ಎಚ್.ಕೆ. ವೇಣುಗೋಪಾಲ್, ಎಚ್.ಕೆ. ರಮೇಶ್, ವಿಶೇಷ ಆಹ್ವಾನಿತರಾದ ಉಲುಚುಕಮ್ಮೆ ಮಹಸಭಾ ಪ್ರತಿನಿಧಿ ಎಚ್.ಎನ್.ಗಣೇಶ್, ಜಿ.ಕೆ. ಸತೀಶ್, ಜಿ.ಕೆ. ರವೀಂದ್ರ, ಮಹಸಭಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು, ಮಹಾಸಭೆ ಉಪಾಧ್ಯಕ್ಷರಾದ ಪಿ.ಎಲ್. ನಾಗರಾಜರಾವ್, ಕಾರ್ಯದರ್ಶಿ ವೈ.ಜಿ.ಮುರಳಿಧರ, ಜಂಟಿ ಕಾರ್ಯದರ್ಶಿ ಬಿ.ಕೆ. ಸುರೇಶ್, ಖಜಾಂಚಿ ಎಸ್. ವಾಸುದೇವ್, ಆಂತರಿಕ ಲೆಕ್ಕಪರಿಶೋಧಕ ಪಿ.ಎಸ್. ಸುಬ್ರಹ್ಮಣ್ಯ , ಮಹಿಳಾ ವಿಭಾಗದ ಮುಖ್ಯಸ್ಥರಾಧ ಕೆ. ಮಂಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ