ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರುಳಿಧರಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಕನಸಿನ ಕೂಸಾಗಿರುವ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಹಿಳೆಯರು ನಿತ್ಯದ ಸಂಸಾರದ ಜಜಾಟದಲ್ಲಿ ಬದುಕು ಕಟ್ಟಿಕೊಳ್ಳುವಂತಹ ದಿನಮಾನ್ಯಗಳಲ್ಲಿ ಒಂದು ದಿನವಾದರೂ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಆತ್ಮವಿಶ್ವಾಸ ಮತ್ತು ಮಾನಸಿಕ ದೃಡತೆ ಬೆಳೆಸುತ್ತದೆ. ಶಿಸ್ತು ಸಮಯಪಾಲನೆ ಮತ್ತು ತಂಡದ ಮನೋಭಾವ ಕಲಿಯಲು ಇದೊಂದು ಉತ್ತಮ ವೇದಿಕೆಯಾಗಿದೆ. ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದು ಅವರ ವೈಯಕ್ತಿಕ ಬೆಳವಣಿಗೆಯಷ್ಟೆ ಅಲ್ಲದೆ ಸಮಾಜದಲ್ಲಿ ಸಮಾನ ಅವಕಾಶ ಮತ್ತು ಸಬಲೀಕರಣವನ್ನು ಉತ್ತೇಜಸುತ್ತದೆ. ಸರ್ಕಾರ ಮಹಿಳಾ ಸಬಲೀಕರಣ ಕಾರ್ಯಕ್ರಮದ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರಲ್ಲಿ ಅರ್ಥಿಕ ಸ್ವಾವಲಂಬನೆ ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಂಡು ಹೋಗುವುದರೊಂದಿಗೆ ಸಫಲತೆಯನ್ನು ಕಾಣಲು ಸಾಧ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಘುವೇಂದ್ರ(ರಾಘು) ಭಾಗವಹಿಸಿ ಮಾತನಾಡಿ ಮಹಿಳಾ ಕ್ರೀಡೆಗಳು ಮಹಿಳೆಯರ ದೈಹಿಕ ಸಾಮಥ್ರ್ಯ ಆತ್ಮವಿಶ್ವಾಸ ಆರೋಗ್ಯ ಮತ್ತು ನಾಯಕತ್ವವನ್ನು ಬೆಳಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆಂದರು.ಶಂಕರಳ್ಳಿ ಹಾಲಪ್ಪ, ಪ್ರವೀಣ್ ಅಂಗಡಿ, ನಾಗೇಶ್, ತೀರ್ಥಹಳ್ಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಗದೀಶ ಅಲಸೆ, ಜೆ.ಎಂ.ಎಸ್.ವೈ, ಬಾಲಚಂದ್ರಕೃಷ್ಣ, ಅರಳಸುರಳಿ ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ, ತಾಲೂಕು ಸಮನ್ವಯ ಅಧಿಕಾರಿ ಶ್ವೇತಾ, ಸೇವಾ ಪ್ರತಿನಿಧಿ ನೇತ್ರಾವತಿ, ಉಮೇಶ್, ಜ್ಞಾನ ವಿಕಾಸ ಕಾರ್ಯಕ್ರಮ ಸದಸ್ಯ ಗೌರಮ್ಮ, ಒಕ್ಕೂಟದ ಅಧ್ಯಕ್ಷೆ ಪುಷ್ಪಾ, ಗ್ರಾಮದ ಹಿರಿಯರಾದ ಬಾಲಚಂದ್ರಮ ಮುರುಳಿಧರ, ಶ್ವೇತಾ,ಪ್ರಕಾಶಗೌಡರು,ದೇವರಾಜ್, ಸತೀಶ್, ಇನ್ನಿತರ ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ದಿ.18-ಅರ್.ಪಿ.ಟಿ.1ಪಿ ರಿಪ್ಪನ್‌ಪೇಟೆ ಸಮೀಪದ ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಳಸುರಳಿ ವಲಯ ಹುಂಚದಕಟ್ಟೆ ಕಾರ್ಯಕ್ಷೇತ್ರದ ಶ್ರೀಮಾತಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಘದಿಂದ ಮಹಿಳೆಯರ ಕೆಸರುಗದ್ದೆ ಓಟ ಮಡಿಕೆ ಒಡೆಯುವುದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.