ಮಹಿಳಾ ಸಂಘಟನೆಗಳು ಆರ್ಥಿಕವಾಗಿ ಸಬಲರಾಗಲಿ: ಶರಣಬಸಪ್ಪ ಗುಡಿಮನಿ

KannadaprabhaNewsNetwork |  
Published : Oct 13, 2025, 02:02 AM IST
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್‌ಗೆ ಪದಾಧಿಕಾರಿಗಳಾಗಿ ಆಯ್ಕೆಯಾದ ಪಂಚಮಸಾಲಿ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮನೆಯ ಆರ್ಥಿಕತೆಯ ಸುಧಾರಣೆಗಾಗಿ ಮಹಿಳೆಯರು ದುಡಿಮೆಗೆ ಮುಂದಾಗಬೇಕು. ಹಣವನ್ನು ಉಳಿತಾಯ ಮಾಡಿ ಅದನ್ನು ಸುರಕ್ಷಿತ ಬ್ಯಾಂಕುಗಳಲ್ಲಿ ಇರಿಸಿ ಅದರಿಂದ ಬರುವ ಲಾಭವನ್ನು ಉಪಯೋಗ ಮಾಡಿಕೊಳ್ಳಬೇಕು.

ಗದಗ: ಮಹಿಳಾ ಸಂಘಟನೆಗಳು ಆರ್ಥಿಕವಾಗಿ ಸಬಲರಾಗಲು ಮಹಿಳೆಯರನ್ನು ಪ್ರೇರೇಪಿಸಬೇಕು. ಪಂಚಮಸಾಲಿ ಸಮಾಜದವರು ಸಂಘಟನೆಯೊಂದಿಗೆ ಆರ್ಥಿಕವಾಗಿ ಸದೃಢ ಹೊಂದಬೇಕೆಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದರು.ನಗರದಲ್ಲಿ ರಾಣಿ ಚೆನ್ನಮ್ಮ ಮಹಿಳಾ ಬಳಗದಿಂದ ಜರುಗಿದ ಮಾಸಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನೆಯ ಆರ್ಥಿಕತೆಯ ಸುಧಾರಣೆಗಾಗಿ ಮಹಿಳೆಯರು ದುಡಿಮೆಗೆ ಮುಂದಾಗಬೇಕು. ಹಣವನ್ನು ಉಳಿತಾಯ ಮಾಡಿ ಅದನ್ನು ಸುರಕ್ಷಿತ ಬ್ಯಾಂಕುಗಳಲ್ಲಿ ಇರಿಸಿ ಅದರಿಂದ ಬರುವ ಲಾಭವನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.ಚೇಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿ ಅಶೋಕ ಸಂಕಣ್ಣವರ ಮಾತನಾಡಿ, ಮಹಿಳೆಯರು ಸದೃಢ ಮನಸ್ಸಿನವರು ಹಾಗೂ ಅಚಲ ನಿರ್ಧಾರದವರು. ಇವರು ಮನಸ್ಸು ಮಾಡಿದ್ದಲ್ಲಿ ಕೆಲಸವನ್ನು ನಿಷ್ಠೆಯಿಂದ ಮಾಡಿ ಪೂರ್ತಿಗೊಳಿಸುವವರು. ಮಹಿಳಾ ಸಮುದಾಯವು ಆರ್ಥಿಕ ಉಳಿಕೆಗಾಗಿ ಶ್ರಮಿಸಬೇಕು ಎಂದರು.ಚೆನ್ನವೀರಪ್ಪ ಹುಣಸಿಕಟ್ಟಿ ಹಾಗೂ ಪ್ರಕಾಶ ಉಗಲಾಟದ ಮಾತನಾಡಿ, ಪಂಚಮಸಾಲಿ ಮಹಿಳಾ ಸಮುದಾಯವು ಸಾಮಾನ್ಯವಾಗಿ ಕೃಷಿಯನ್ನೇ ಅವಲಂಬಿಸಿದ್ದು, ಆದರೆ ಬದಲಾದ ಕಾಲಮಾನದಿಂದ ಮಹಿಳೆಯರು ಸಾಕಷ್ಟು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಆರ್ಥಿಕ ಸದೃಢತೆ ಹೊಂದುತ್ತಿದ್ದಾರೆ ಎಂದರು.ಚೇಂಬರ್ ಆಫ್ ಕಾಮರ್ಸ್‌ನ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಯಶ್ರೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಚೇಂಬರ್ ಆಫ್ ಕಾಮರ್ಸ್‌ಗೆ ಪದಾಧಿಕಾರಿಗಳಾಗಿ ಆಯ್ಕೆಯಾದ ಪಂಚಮಸಾಲಿ ಸಮಾಜದ ಶರಣಬಸಪ್ಪ ಗುಡಿಮನಿ, ಅಶೋಕ ಸಂಕಣ್ಣವರ, ಚೆನ್ನವೀರಪ್ಪ ಹುಣಸೀಕಟ್ಟಿ, ಪ್ರಕಾಶ ಉಗಲಾಟದ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷೆ ಜಯಶ್ರೀ ಉಗಲಾಟದ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮ ತೋಟದ, ಸುಶೀಲಾ ಸದಲಾಪೂರ, ಪುಷ್ಪಾ ವಾರದ, ಶಾರದಾ ಕರಮುಡಿ, ಅನ್ನಪೂರ್ಣ ಮಾಡಲಗೇರಿ, ಲಕ್ಷ್ಮೀ ಹಳ್ಳಿಕೇರಿ, ಸುಜಾತಾ ತಂಗೋಡಿ, ಗೀತಾ ಮಾವಿನಕಾಯಿ, ಈರಮ್ಮ ಮಾಡಲಗೇರಿ, ಗೀತಾ ಉಗಲಾಟದ, ಜ್ಯೋತಿ ಭಾವಿಕಟ್ಟಿ, ಮಂಜುಳಾ ತಂಗೋಡಿ, ವಿಜಯಲಕ್ಷ್ಮೀ ಇಳಕಲ್, ಅಕ್ಕಮ್ಮ ಗಡಾದ, ಮಾಲತಿ ಗೊಲ್ಲಪ್ಪನವರ, ಸುಮಂಗಲಾ ಮುಂತಾದವರು ಉಪಸ್ಥಿತರಿದ್ದರು. ರೇಣುಕಾ ಅಮಾತ್ಯೆ, ಸುಜಾತಾ ಗುಡಿಮನಿ ಪ್ರಾರ್ಥಿಸಿದರು. ಕವಿತಾ ದಂಡಿನ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರ್ವಹಿಸಿದರು. ದೀಪಾ ಉಗಲಾಟ ನಿರೂಪಿಸಿದರು. ಸುಮಾ ಪಾಟೀಲ ವಂದಿಸಿದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ