ಕೊಪ್ಪ: ಅಮೇರಿಕಾದಲ್ಲಿ ಸಂವಿಧಾನ ೧೭೭೬ರಲ್ಲೇ ಜಾರಿಯಾದರೂ ೧೯೨೦ರಲ್ಲಿ ಮತದಾನದ ಹಕ್ಕು ದೊರಕಿತು. ಮುಂದುವರಿದ ರಾಷ್ಟ್ರದಲ್ಲಿ ೧೫೦ ವರ್ಷಗಳ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾ ಯಿತು. ನಮ್ಮಲ್ಲಿ ದಾದಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಜಾರಿಯಾದ ವರ್ಷದಲ್ಲಿ ಮಹಿಳೆಯರಿಗೆ ಮತ ದಾನದ ಹಕ್ಕು ನೀಡಲಾಯಿತು. ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಡಿ.ಎನ್. ಧನಂಜಯ್ ಮೂರ್ತಿ ಹೇಳಿದರು.
ಕೊಪ್ಪ: ಅಮೇರಿಕಾದಲ್ಲಿ ಸಂವಿಧಾನ ೧೭೭೬ರಲ್ಲೇ ಜಾರಿಯಾದರೂ ೧೯೨೦ರಲ್ಲಿ ಮತದಾನದ ಹಕ್ಕು ದೊರಕಿತು. ಮುಂದುವರಿದ ರಾಷ್ಟ್ರದಲ್ಲಿ ೧೫೦ ವರ್ಷಗಳ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾ ಯಿತು. ನಮ್ಮಲ್ಲಿ ದಾದಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಜಾರಿಯಾದ ವರ್ಷದಲ್ಲಿ ಮಹಿಳೆಯರಿಗೆ ಮತ ದಾನದ ಹಕ್ಕು ನೀಡಲಾಯಿತು. ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಡಿ.ಎನ್. ಧನಂಜಯ್ ಮೂರ್ತಿ ಹೇಳಿದರು. ಪುರಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಇದು ಸಂವಿಧಾನದ ಮಹತ್ವ. ಭಾರತ ದೇಶದಲ್ಲಿ ಪ್ರಸ್ತುತ ೧೪೦ ಕೋಟಿ ಜನಸಂಖ್ಯೆ ಇದ್ದು ಎಲ್ಲರೂ ಒಂದೇ ರೀತಿ ಯೋಚಿಸಲು ಸಾಧ್ಯವಿಲ್ಲ. ೧೪೦ ಕೋಟಿ ಜನರ ಯೋಚಿಸುವ ರೀತಿ ಬೇರೆ ಬೇರೆಯಾಗಿದ್ದರೂ ಅವರಿಗೆ ಇಲ್ಲಿ ಸಮಾನತೆ ಇದೆ. ಭಾರತೀಯ ಸಂವಿಧಾನ ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ವೈವಿಧ್ಯತೆಯಲ್ಲಿ ಸಮಾನತೆ ಕಾಣುವ ಭಾರತದಂತಹ ಶ್ರೇಷ್ಠ ಸಂವಿಧಾನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪುರಭವನದಿಂದ ಬಸ್ ನಿಲ್ದಾಣದವರೆಗೂ ನಡೆದ ಸಂವಿಧಾನ ಜಾಥಾದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ, ತಹಸೀಲ್ದಾರ್ ಲಿಖಿತಾ ಮೋಹನ್ ಸಂವಿಧಾನ ಕುರಿತು ಮಾಹಿತಿ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಸರ್ಕಾರಿ ನೌಕರರ ಸಂಘದ ಕೊಪ್ಪ ತಾಲೂಕು ಅಧ್ಯಕ್ಷ ರಾಜೇಂದ್ರ, ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್, ವ್ಯವಸ್ಥಾಪಕ ಚಂದ್ರು, ಶಿಕ್ಷಣಾಧಿಕಾರಿ ರಾಘವೇಂದ್ರ, ಕೆಡಿಪಿ ಸದಸ್ಯರಾದ ರಾಜಾಶಂಕರ್, ನಾರ್ವೆ ಅಶೋಕ್, ಮಹಮ್ಮದ್ ಸಾಧಿಕ್, ಕೊಪ್ಪ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಹಿಂದುಳಿದ ವರ್ಗಗಳ ಮುಖಂಡ ಮರಿಯಪ್ಪ, ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಎನ್.ಟಿ. ಗೋಪಾಲಕೃಷ್ಣ, ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ವಾಸಪ್ಪ ಕುಂಚೂರು, ಆನಂದ್ ಬೆಳಗೊಳ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.