ಗದಗ: ಇಂದಿನ ದಿನಮಾನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅಭದ್ರತೆ ಕಾಡುತ್ತಿದೆ, ಮಹಿಳಾ ಸುರಕ್ಷತೆಯು ಅತ್ಯಗತ್ಯ ಎಂದು ಹಿರಿಯ ಜೀವಿ ನೀಲಮ್ಮ ಹುಣಶಿಕಟ್ಟಿ ಹೇಳಿದರು.
ಮೂಲತಃ ಪಂಚಮಸಾಲಿ ಸಮುದಾಯದವರು ಒಕ್ಕಲಿಗರು, ರೈತಾಪಿ ಬದುಕನ್ನು ನಡೆಸುತ್ತ ಇಂದು ದೊಡ್ಡ ದೊಡ್ಡ ಉದ್ಯಮಿಗಳಾಗಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜತೆಗೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದರು.
ಕಸ್ತೂರಿ ದಾನಪ್ಪಗೌಡ್ರ ಮಾತನಾಡಿ, ಮಹಿಳೆಯರು ಮಾಡುವ ಕೆಲಸದಲ್ಲಿ ಕಾಯಕ ನಿಷ್ಠರು ಹೀಗಾಗಿ ಹಠ ಬಿಡದಂತೆ ಅವರು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದರು.ಅಧ್ಯಕ್ಷತೆ ವಹಿಸಿದ ಜಯಶ್ರೀ ಉಗಲಾಟ ಮಾತನಾಡಿ, ಸಮಾಜದ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಮಕ್ಕಳಿಗೆ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಯೋಜನೆಯೊಂದನ್ನು ರೂಪಿಸಿ ಅದನ್ನು ಯಶಸ್ಸುಗೊಳಿಸಲಾಗುವುದು ಎಂದರು.
ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಮಾ ಪಾಟೀಲ ವಚನ ನೃತ್ಯ ಹಾಗೂ ಭಾರ್ಗವಿ ಪರ್ವತಗೌಡ್ರ ಕಿತ್ತೂರ ಚೆನ್ನಮ್ಮನ ಏಕಪಾತ್ರಾಭಿನಯ, ಶಾರದಾ ಕರಮುಡಿ ಅವರ ವಚನ ಗಾಯನ ಗಮನ ಸೆಳೆಯಿತು.
ವಿಜಯಶ್ರೀ ಇಳಕಲ್ಲ ಪ್ರಾರ್ಥಿಸಿದರು. ಜಯಶ್ರೀ ಪಾಟೀಲ ಸ್ವಾಗತಿಸಿದರು. ಶಿವಲೀಲಾ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ದಾನಪ್ಪಗೌಡ್ರ, ಸುಜಾತಾ ಗುಡಿಮನಿ, ಗಂಗಾ ತಂಗೂಡಿ, ದೀಪಾ ಉಗಲಾಟ ಪರಿಚಯಿಸಿದರು. ಶಾಂತಾ ತುಪ್ಪದ ನಿರೂಪಿಸಿದರು. ರೇಣುಕಾ ಅಮಾತ್ಯ ವಂದಿಸಿದರು.