ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮಹಿಳಾ ವಿವಿ ಖೋಖೋ ತಂಡ

KannadaprabhaNewsNetwork |  
Published : Apr 06, 2026, 03:15 AM IST
ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮಹಿಳಾ ವಿವಿ ಖೋಖೋ ತಂಡ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದಾವಣಗೆರೆ ವಿವಿಯಲ್ಲಿ ಏ.1ರಿಂದ 4ರ ವರೆಗೆ ನಡೆದ ದಕ್ಷಿಣ ವಲಯ ಅಂತರ್ ಮಹಾವಿದ್ಯಾಲಯಗಳ ಖೋಖೋ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ ತಂಡ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ವಿವಿ ಕೀರ್ತಿ ಹೆಚ್ಚಿಸಿದೆ.ತಂಡದ ಸಾಧನೆಗೆ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಂಧ್ರದ ತಿರುಪತಿ ವಿವಿ, ತಮಿಳುನಾಡಿನ ಭಾರತೀಯರ ವಿವಿ ಹಾಗೂ ಕೇರಳದ ಕಣ್ಣೂರು ವಿವಿ ವಿರುದ್ಧ ಪಂದ್ಯದಲ್ಲಿ ಮಹಿಳಾ ವಿವಿ ತಂಡ ಜಯಗಳಿಸುವ ಮೂಲಕ ರಾಜ್ಯ ಪ್ರತಿನಿಧಿಸಿ ಸಾಧನೆ ಮೆರೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ದಾವಣಗೆರೆ ವಿವಿಯಲ್ಲಿ ಏ.1ರಿಂದ 4ರ ವರೆಗೆ ನಡೆದ ದಕ್ಷಿಣ ವಲಯ ಅಂತರ್ ಮಹಾವಿದ್ಯಾಲಯಗಳ ಖೋಖೋ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ ತಂಡ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ವಿವಿ ಕೀರ್ತಿ ಹೆಚ್ಚಿಸಿದೆ.ತಂಡದ ಸಾಧನೆಗೆ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಂಧ್ರದ ತಿರುಪತಿ ವಿವಿ, ತಮಿಳುನಾಡಿನ ಭಾರತೀಯರ ವಿವಿ ಹಾಗೂ ಕೇರಳದ ಕಣ್ಣೂರು ವಿವಿ ವಿರುದ್ಧ ಪಂದ್ಯದಲ್ಲಿ ಮಹಿಳಾ ವಿವಿ ತಂಡ ಜಯಗಳಿಸುವ ಮೂಲಕ ರಾಜ್ಯ ಪ್ರತಿನಿಧಿಸಿ ಸಾಧನೆ ಮೆರೆದಿದೆ.

ತಂಡದ ನಾಯಕಿ, ಎಂಪಿಇಡಿ ವಿದ್ಯಾರ್ಥಿನಿ ದೀಪಾ ಸಂತಿವರ, ತರಬೇತುದಾರ ಶಿವಪ್ರಕಾಶ ಎಲಿ, ಟೂರ್ನಾಮೆಂಟ್ ವೀಕ್ಷಕರಾಗಿ ಭಾಗವಹಿಸಿದ ಪ್ರೊ.ಶ್ರೀನಿವಾಸ ಮತ್ತು ಪ್ರೊ.ರಾಜಕುಮಾರ ಮಾಲಿಪಾಟೀಲ ಅವರಿಗೆ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣನವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರ, ಉಪನಿರ್ದೇಶಕ ಡಾ.ವಿಶ್ವನಾಥ ನಡಕಟ್ಟಿ ಅಭಿನಂದಿಸಿದ್ದಾರೆ.

---------5bij02: ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮಹಿಳಾ ವಿವಿ ಖೋಖೋ ತಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಮನೆ ಬಾಗಿಲಿಗೆ ಆಡಳಿತಾತ್ಮಕ ಸೇವೆ
ಭಾರತವನ್ನು ವಿಶ್ವಗುರು ಸ್ಥಾನಮಾನಕ್ಕೆ ಏರಿಸೋಣ