ಮಹಿಳೆಯರು ರಾಜಕೀಯ ಕ್ಷೇತ್ರದಲ್ಲೂ ಸಾಧನೆ ತೋರಲಿ: ನಿರ್ಮಲಾ ಕೊಳ್ಳಿ

KannadaprabhaNewsNetwork |  
Published : Mar 23, 2026, 03:00 AM IST
ಕಾರ್ಯಕ್ರಮವನ್ನು ಮಾಜಿ ಸಚಿವ ಕಳಕಪ್ಪ ಜಿ. ಬಂಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿ ಜನರ ಮೇಲೆ ಸಾಲದ ಹೊರೆ ಹೊರಿಸಿದೆ ಎಂದರು.

ಗದಗ: ಮಹಿಳೆಯರು ವಿವಿಧ ರಂಗಗಳಲ್ಲಿ ಯಶಸ್ವಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಮಹಿಳೆಯರು ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ತಿಳಿಸಿದರು.

ನಗರದ ನಗರದ ಮುಕ್ಕಣ್ಣೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಜಿ ಸಚಿವ ಕಳಕಪ್ಪ ಜಿ. ಬಂಡಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ತಾತ್ಕಾಲಿಕವಾದವು. ಇಡೀ ಭಾರತದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಶಾಶ್ವತವಾದದ್ದು ಎಂದರು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿ ಜನರ ಮೇಲೆ ಸಾಲದ ಹೊರೆ ಹೊರಿಸಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಮಹಿಳೆಯರಿಗೂ ರಾಜ್ಯ ಸರ್ಕಾರ ನಷ್ಟವನ್ನುಂಟು ಮಾಡುತ್ತಿದೆ. ರಾಜ್ಯ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಗ್ಯಾರಂಟಿ ಆಮಿಷಗಳಿಗೆ ಮಹಿಳೆಯರು ಮಾರುಹೋಗಬಾರದೆಂದು ತಿಳಿಸಿದರು. ಈ ವೇಳೆ ರಾಜ್ಯ ಹಾಗೂ ಅಂತಾರಾಜ್ಯ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಡಾ. ಶೋಭಾ.ಎನ್‌., ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು, ಉಷಾ ದಾಸರ, ಸುನಂದ ಬಾಕಳೆ, ವಿಜಯಲಕ್ಷ್ಮೀ ದಿಂಡೂರ, ಲಕ್ಷ್ಮೀ ಕಾಕಿ, ಸ್ವಾತಿ ಅಕ್ಕಿ, ರೇಖಾ ಮದನೂರ, ಲಕ್ಷ್ಮೀ ಕುಂಬಾರ, ಶಶಿಕಲಾ ಕಲ್ಲಾಪುರ, ಪವಿತ್ರ ಕಲ್ಲ್ಕುಟಗರ, ನಂದಾ ಪಲ್ಲೆದ, ರೇಖಾ ಗವಳಿ, ಪುಷ್ಪ ಪೂಜಾರ, ಜ್ಯೋತಿ ಪಾಯಪಗೌಡ್ರ, ಸುಜಾತಾ ಪ್ರಧಾನ, ಜಯಶ್ರೀ ಉಗಲಾಟ, ಶಾಂತಾ ನಿಡುವಣಿ, ವಂದನ ವೇರ್ಣೆಕರ, ಅಶ್ವಿನಿ ಜಗತಾಪ, ವಿಜಯಲಕ್ಷ್ಮೀ ಮಾನ್ವಿ, ಅಕ್ಕಮ್ಮ ವಸ್ತ್ರದ, ರೇಖಾ ಬಂಗಾರಶೆಟ್ಟರ್, ಕವಿತಾ ಬಂಗಾರಿ, ಶಶಿಕಲಾ ಮಾಲಿಪಾಟೀಲ, ಮಾಧುರಿ ಮಾಳೆಕೊಪ್ಪ, ವಿಜಯಲಕ್ಷ್ಮೀ ಕೊಟಗಿ, ಶಾರದಾ ಸಜ್ಜನರ, ಪುಷ್ಪಾ ಉಕ್ಲಿ, ಜ್ಯೋತಿ ಹಾನಗಲ್, ಪ್ರಭಾವತಿ ಬೆಳವಣಿಕಿಮಠ, ಯೋಗೇಶ್ವರಿ ಭಾವಿಕಟ್ಟಿ, ಕಸ್ತೂರಿ ಕಮ್ಮಾರ, ಪದ್ಮನಿ ಮುತ್ತಲದಿನ್ನಿ, ಪಾರ್ವತಿ ಪಟ್ಟಣಶೆಟ್ಟಿ, ಶಶಿಧರ ದಿಂಡೂರ, ಲಿಂಗರಾಜ ಪಾಟೀಲ, ಸಂತೋಷ ಅಕ್ಕಿ, ಬಸವರಾಜ ನರೇಗಲ್ಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೂಡಿಕೆ ನೆಪದಲ್ಲಿ ಮಹಿಳೆಗೆ 11.75 ಲಕ್ಷ ರು. ವಂಚನೆ
110 ಐನ್ ಮನೆಗಳ ಅಭಿವೃದ್ಧಿಗೆ 4.50 ಕೋಟಿ ರು. ಮೀಸಲು: ಶಾಸಕ ಪೊನ್ನಣ್ಣ