ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ
ಶಿಕ್ಷಣವನ್ನು ಪಡೆಯುವ ಮೂಲಕ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದಾಳೆ. ಅಂತೆಯೇ ಅಪರಾಧಗಳನ್ನು ತಡೆಗಟ್ಟುವಲ್ಲಿ ಮಹಿಳೆಯರು ಜಾಗೃತಿ ವಹಿಸಬೇಕು ಎಂದು ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲತಾ ಹೇಳಿದರು
ನಗರದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಕಾನೂನಿನ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ವಿಷಯ ಕುರಿತು ಮಾತನಾಡಿ, ಮಹಿಳೆಯರು ಮುಂಜಾಗ್ರತೆ ವಹಿಸಿದಲ್ಲಿ ಮನೆ ಕಳವು ಮೊದಲಾದಗಳನ್ನು ತಡೆಗಟ್ಟಲು ಸಾಧ್ಯ. ಪರಸ್ದಳಗಳಿಗೆ ತೆರಳುವಾಗ ಮನೆಯ ಅಕ್ಕಪಕ್ಕದಲ್ಲಿ ನೋಡಿಕೊಳ್ಳುವಂತೆ ತಿಳಿಸಬೇಕು. ಮನೆಯ ಮುಂದಿನ ಲೈಟನ್ನು ಆಫ್ ಮಾಡಬಾರದು. ಊರಿನಲ್ಲಿ ಇಲ್ಲದ ಸಮಯದಲ್ಲಿ ದಿನಪತ್ರಿಕೆಗಳನ್ನು ಪಕ್ಕದ ಮನೆಯಲ್ಲಿ ಹಾಕಬೇಕು. ಮನೆಯ ಬಾಗಿಲಿನಲ್ಲಿ ದಿನಪತ್ರಿಕೆಗಳು ಬಿದ್ದಿದ್ದಲ್ಲಿ ಊರಿನಲ್ಲಿ ಇಲ್ಲ ಎಂಬ ಸುಳಿವು ಕಳ್ಳರಿಗೆ ಗೊತ್ತಾಗುತ್ತದೆ ಎಂದು ಸಲಹೆ ನೀಡಿದವರುಪ್ರಯಾಣಿಸುವಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಡವೆಗಳನ್ನು ಪ್ರದರ್ಶನ ಆಗುವಂತೆ ಧರಿಸಬಾರದು. ಈ ಬಗ್ಗೆಯೂ ಎಚ್ಚರ ವಹಿಸಬೇಕು, ಅಪರಿಚಿತರೊಂದಿಗೆ ವ್ಯವಹರಿಸಬೇಡಿ, ದ್ವಿಚಕ್ರ ವಾಹನಗಳನ್ನು ಚಲಿಸುವಾಗ ಅಗತ್ಯ ದಾಖಲೆಗಳನ್ನು ಹೊಂದಿರಿ, ಹೆಲ್ಮೆಟ್ ಧರಿಸಿರಿ ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ಮಾತನಾಡಿ, ಮಹಿಳೆಯರಲ್ಲಿ ಅಪಾರವಾದ ಪ್ರತಿಭೆಯಿದೆ. ಅವಕಾಶಗಳು ದೊರೆತಲ್ಲಿ ಅವರು ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಲ್ಲರು. ಸಂಸ್ಥೆಯಿಂದ ದೊರಕುವ ಸಾಲದ ನೆರವಿನಿಂದ ವಿವಿಧ ಉದ್ಯಮಗಳನ್ನು ಮಾಡುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡವರು ಅನೇಕರು ಇದ್ದಾರೆ. ಈ ರೀತಿ ಮುಂದುವರೆಯಲು ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರದ ಗುರುಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳುತ್ತ ಬರಲಾಗಿದೆ. ಆರೋಗ್ಯ ತಪಾಸಣಾ ಶಿಬಿರ, ದೇವಾಲಯಗಳು, ಶಾಲಾ ಆವರಣದ ಸ್ವಚ್ಛತಾ ಕಾರ್ಯಕ್ರಮದಲ್ಲಿಯೂ ಸಹ ಸಂಸ್ಥೆಯ ಸದಸ್ಯರು ಸೇವೆ ಮಾಡುತ್ತ ಬಂದಿದ್ದಾರೆ. ಇವೆಲ್ಲಕ್ಕೂ ಸ್ಫೂರ್ತಿ ಎಂದರೆ ಮಹಿಳೆಯರು. ಸಂಸ್ಥೆಯ ಉದ್ದೇಶವನ್ನು ಅರಿತು ಸ್ಪಂದಿಸುತ್ತಿರುವುದು ಕಾರಣವಾಗಿದೆ ಎಂದರು
ಸಮಾರಂಭದ ಅಧ್ಯಕ್ಷತೆಯನ್ನು ಯಡವನಹಳ್ಳಿ ಮಹಿಳಾ ಸಮಾವೇಶದ ತಾಲೂಕ್ ಸಮಿತಿ ಅಧ್ಯಕ್ಷೆ . ಶೋಭಾ ನಡೆಸಿಕೊಟ್ಟರು
ಹಾಸನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ನಗರ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಲತಾ ಮಾತನಾಡಿದರು.