ರಾಣಿಬೆನ್ನೂರು: ಮಹಿಳೆಯರು ನರೇಗಾ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಪಿಡಿಒ ಬಿ.ಎಸ್. ಪಾಟೀಲ ತಿಳಿಸಿದರು.ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ದುಡಿಯೋಣ ಬಾ ಅಭಿಯಾನ ಮತ್ತು ಮಹಿಳಾ ಗ್ರಾಮಸಭೆಯ ಆಶ್ರಯದಲ್ಲಿ ಜರುಗಿದ ಆರೋಗ್ಯ ಸಭೆಯಲ್ಲಿ ಮಾತನಾಡಿದರು.
ಹಾವೇರಿ: ದುಡಿಯುವ ವರ್ಗದವರ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇರುತ್ತಿರುವ ಜನವಿರೋಧಿ ನೀತಿಯನ್ನು ಖಂಡಿಸಿ, ರೈತರ- ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಮೇ 20ರಂದು ದೇಶಾದ್ಯಂತ ಸಾರ್ವಜನಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಟಿಯುನ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಸಂಹಿತೆಯಲ್ಲಿ 4 ಕಾನೂನು, ಕೈಗಾರಿಕಾ ಬಾಂಧವ್ಯ ಸಂಹಿತೆಯಲ್ಲಿ 3 ಕಾನೂನು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಕಾನೂನು ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನು ಸೇರಿದಂತೆ ಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಸಲಾಗಿದೆ. ಆದರೆ ಈ ಸಂಹಿತೆಗಳಲ್ಲಿ ದುಡಿಯುವ ವರ್ಗಕ್ಕೆ ಮತ್ತಷ್ಟು ಸಂಕಷ್ಟಗಳನ್ನು ತಂದಿಟ್ಟಿದ್ದಾರೆ ಎಂದು ದೂರಿದರು.ಎಚ್.ಜಿ. ಉಮೇಶ, ಎಂ. ಜಯಮ್ಮ, ಚಂದ್ರು, ರತ್ನ ಶಿರೂರು, ಸುನಂದಾ ರೇವಣಕರ, ಪಿರಜಾದೆ, ದಿನೇಶ ಕಾಂಬಳೆ, ಕುಸುಮಾ ಪಾಟೀಲ್, ಕೆ.ಎಲ್. ಮಕಾಂದರ, ಎಚ್.ಎಂ. ಸಂತೋಷ ಇದ್ದರು.ಹೊನ್ನಪ್ಪ ಮರೆಮ್ಮನವರ ಉಚ್ಟಾಟನೆ: ಎಐಟಿಯುಸಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಹೊನ್ನಪ್ಪ ಮರೆಮ್ಮನವರ ಅವರನ್ನು ಸಂಘಟನೆಯಿಂದ ಉಚ್ಚಾಟಿಸಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ ಡಿ.ಎ. ಆದೇಶಿಸಿದ್ದಾರೆ.2015ರಿಂದ 2017 ಮತ್ತು ನಂತರದ ಅವಧಿಯಲ್ಲಿ ಫೆಡರೇಷನ್‌ನ ಹಣದ ದುರ್ಬಳಕೆ ಹಾಗೂ ಸಂಘಟನೆಯ ಹೋರಾಟಗಳನ್ನು ವಿಫಲಗೊಳಿಸಲು ಪಿತೂರಿ ನಡೆಸಿದ್ದಾರೆ. ಅಲ್ಲದೇ ಸಂಘಟನೆಯ ವಿರುದ್ಧ ಹಲವು ಸಭೆಗಳನ್ನು ನಡೆಸುವ ಮೂಲಕ ಕಾರ್ಮಿಕ ದ್ರೋಹಿ, ಮಹಿಳಾ ವಿರೋಧಿ ಹಾಗೂ ಸಂಘಟನಾ ವಿರೋಧಿ ನಡೆಯ ಕುರಿತು ಶಿಸ್ತು ಸಮಿತಿ ನೀಡಿದ ನೋಟಿಸ್‌ಗೆ ಉತ್ತರ ನೀಡದೇ ಇರುವ ಹಿನ್ನೆಲೆ ಅವರನ್ನು ಎಐಟಿಯುಸಿ ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.